--Ads--

ರೇಷ್ಮೆಗೂಡು ಮಾರುಕಟ್ಟಿಗೆ ನ್ಯಾಯಾದಿಶರು ಭೇಟಿ

On: July 17, 2026 2:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್ ……

ರೇಷ್ಮೆಗೂಡು ಮಾರುಕಟ್ಟಿಗೆ ನ್ಯಾಯಾದಿಶರು ಭೇಟಿ

ಶಿಡ್ಲಘಟ್ಟ : ನಗರದ  ರೇಷ್ಮೆಗೂಡು ಮಾರುಕಟ್ಟಿಗೆ
ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮೊಹ್ಮದ್ ರೋಷನ್ ಭೇಟಿ ನೀಡಿ, ಮಾರುಕಟ್ಟೆಯ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು.

ಗೂಡುಮಾರುಕಟ್ಟಿಗೆ ಮೊದಲ ಬಾರಿಗೆ ಭೇಟಿ ನೀಡಿದ ನ್ಯಾಯಾಧೀಶರು, ಹರಾಜು ಪ್ರಕ್ರಿಯೆ, ಗೂಡುಗಳ ಖರೀದಿ-ಮಾರಾಟ ವ್ಯವಸ್ಥೆ, ರೈತರಿಗೆ ಒದಗಿಸಲಾಗುತ್ತಿರುವ ಸೌಕರ್ಯ ಹಾಗೂ ಕಾರ್ಮಿಕರ ಕೆಲಸದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ವಿವರ ಪಡೆದರು.

ಪ್ರತಿನಿತ್ಯ ನಡೆಯುವ ವಹಿವಾಟಿನ ಸ್ವರೂಪದ ಬಗ್ಗೆಯೂ ಚರ್ಚಿಸಿದರು,ದೂರದ ಗ್ರಾಮಗಳಿಂದ ಬರುವ ರೇಷ್ಮೆ ಬೆಳೆಗಾರರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಸಿದರು.

ಗೂಡುಗಳ ಗುಣಮಟ್ಟದ ಆಧಾರದ ಮೇಲೆ ಬೆಲೆ ನಿಗದಿಪಡಿಸುವ ಪ್ರಕ್ರಿಯೆ, ತೂಕದ ವ್ಯವಸ್ಥೆ ಹಾಗೂ ರೈತರಿಗೆ ಹಣ ಪಾವತಿಯಾಗುವ ಕ್ರಮಗಳ ಕುರಿತು
ನ್ಯಾಯಾಧೀಶರು ಪರಿಶೀಲಿಸಿದರು.

ಕಾರ್ಮಿಕರೊಂದಿಗೆ ಸಂವಾದ ನಡೆಸಿ, ಕೆಲಸದ ಪರಿಸ್ಥಿತಿ, ವೇತನ, ಸುರಕ್ಷತಾ ಕ್ರಮಗಳು ಹಾಗೂ ಕಾನೂನುಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕಾರ್ಮಿಕರ ಹಕ್ಕುಗಳನ್ನು ಪ್ರತಿ ಉದ್ಯೋಗದಾತನ ಹೊಣೆಯಾಗಿದ್ದು, ಕನಿಷ್ಠ ನಿಯಮಾನುಸಾರವಾಗಿ ಒದಗಿಸಬೇಕು ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ,ಕಾರ್ಯದರ್ಶಿ ಸಿ.ಜಿ.ಭಾಸ್ಕರ್, ಕಾರ್ಮಿಕ ಇಲಾಖೆ ಅಧಿಕಾರಿ ಮಂಜುಳಾ,ರೇಷ್ಮೆ ಇಲಾಖೆ ಅಧಿಕಾರಿಗಳು ಹಾಗು ಕಾರ್ಮಿಕರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now