ವಿಜಯ ದರ್ಪಣ ನ್ಯೂಸ್….
ಎಸ್‌ಎಸ್‌ಎಲ್ಸಿ ವಿದ್ಯಾರ್ಥಿಗಳ ಪೋಷಕರಿಂದ ಶಿಕ್ಷಕರನ್ನು ಗೌರವಿಸುವ ವಿನೂತನ ರೀತಿಯ “‘ಗುರು ನಮನ”‘

ಶಿಡ್ಲಘಟ್ಟ : ಮಕ್ಕಳು ಬಾಲ್ಯದಿಂದಲೇ ಗುರುಗಳನ್ನು ಗೌರವಿಸುವ ಸಂಸ್ಕಾರವನ್ನು ,ಪೋಷಕರು ಸಮಾಜದಲ್ಲಿ ತಲೆ ಎತ್ತಿ ಓಡಾಡುವ ಗೌರವ ತರುವಂತ ಗುಣವಂತರಾಗಬೇಕು ಎಂದು ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದ ಸ್ವಾಮೀಜಿ ತಿಳಿಸಿದರು.
ನಗರದ ಹೊರವಲಯದ ಹನುಮಂತಪುರ ಗೇಟ್ ಬಳಿಯ ಬಿಜಿಎಸ್ ಶಾಲೆಯಲ್ಲಿ ನಡೆದ “ಗುರುನಮನ-೨೦೨೬” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಜೀವನದಲ್ಲಿ ಗುರುಗಳ ಸ್ಥಾನ ಅತ್ಯಂತ ಶ್ರೇಷ್ಠವಾಗಿದೆ ಪೋಷಕರು ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ಪ್ರತಿಯೊಬ್ಬ ಪೋಷಕರೂ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಾಗ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಮನವಿ ಮಾಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ ,ಪೋಲಿಸ್ ಠಾಣೆಯಲ್ಲಿ ಮದುವೆ ಮಾಡಿಕೊಳ್ಳವಂತಹ ಹಾಗು ತಂದೆ ತಾಯಿಗಳನ್ನು ವೃದ್ದಾಶ್ರಮದಲ್ಲಿ ಇರುವಂತಹ ಮಕ್ಕಳಾಗಿ ದಯವಿಟ್ಟು ಬೇಳೆಯಬೇಡಿ, ಸಮಾಜದಲ್ಲಿ ತಂದೆ ,ತಾಯಿ ತಲೆ ಎತ್ತಿ ನಿಂತು ನೆಮ್ಮದಿಯಿಂದ ಇರುವಂತೆ ನೋಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಹೇಳಿದರು.
ಶಿಕ್ಷಕರು ತಮ್ಮ ಕುಟುಂಬ, ತಮ್ಮ ಮನೆ ಹಾಗೂ ತಮ್ಮ ಮಕ್ಕಳ ಭವಿಷ್ಯಕ್ಕಿಂತಲೂ ಸಮಾಜದ ಮಕ್ಕಳ ಭವಿಷ್ಯವನ್ನು ರೂಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುತ್ತಿದ್ದಾರೆ ,ತಮ್ಮ ಸ್ವಂತ ಬದುಕಿಗಿಂತ ನಮ್ಮ-ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವಂತಹ ಮಹಾನ್ ವ್ಯಕ್ತಿಗಳು ಶಿಕ್ಷಕರು ಅಂತಹ ಗುರುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಈ ವೇಳೆ ೨೦೨೫-೨೬ ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪೋಷಕರು ವಿನೂತನ ಕಾರ್ಯಕ್ರಮ ಏರ್ಪಡಿಸಿ ಶಿಕ್ಷಕರನ್ನು ಸನ್ಮಾನಿಸಿ, ಗೌರವಿಸಿದರು.
ಮಕ್ಕಳ ಪೋಷಕರಾದ ಹನುಮಂತಪುರ ಮುನೇಗೌಡ,ಅರುಣ್ ಕುಮಾರ್ ಇನ್ನಿತರರು ಶಿಕ್ಷಕರು ಹಾಗು ಸಂಸ್ಥೆ ನಡೆಸುವ ಗುಣಮಟ್ಟ ಶಿಕ್ಷಣ ಹಾಗು ಸಂಸ್ಕಾರ ಬಗ್ಗೆ ಗೌರವದ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಆರ್.ಮಹದೇವ್,
ಶಿಕ್ಷಕರು,ಪೋಷಕರು, ಪಿಯುಸಿ ಪಾಸಾದ ಹಾಗು ಎಸ್.ಎಸ್.ಎಲ್.ಸಿ.ಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.










