ವಿಜಯ ದರ್ಪಣ ನ್ಯೂಸ್….
ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು :
ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ

ಶಿಡ್ಲಘಟ್ಟ : ಲಕ್ಷದಲ್ಲಿ ಒಬ್ಬರಾಗುವಂತಹ ಸಾಧನೆ ಮಾಡಬೇಕು ಜೀವನದಲ್ಲಿ ಎಷ್ಟೇ ಸಾಧನೆ ಮಾಡಿದರೂ ಪ್ರಾಮಾಣಿಕತೆ ಇಲ್ಲದಿದ್ದರೆ ಆ ಸಾಧನೆಗೆ ಯಾವುದೇ ಮೌಲ್ಯ ಇರುವುದಿಲ್ಲ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ಪ್ರಾಮಾಣಿಕ ಹಾಗೂ ನ್ಯಾಯಬದ್ಧ ಜೀವನ ನಡೆಸಬೇಕು
ಉಪ ಲೋಕಾಯುಕ್ತ ಜಸ್ಟಿಸ್ ಬಿ.ವೀರಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ.ವಿದ್ಯಾಸಂಸ್ಥೆಯಲ್ಲಿ ಶಿಕ್ಷಣತಜ್ಞ ಹಾಗೂ ಗೌರವ ಡಾಕ್ಟರೇಟ್ ಪುರಸ್ಕೃತ ಡಾ. ಟಿ.ಕೆ. ನಾರಾಯಣಪ್ಪ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ರೂಪುಗೊಂಡಾಗ ಮಾತ್ರ ಅವರಿಗೆ ಶಿಕ್ಷಣ ನೀಡಿದ ವಿದ್ಯಾಸಂಸ್ಥೆ ಹಾಗೂ ಶಿಕ್ಷಕರಿಗೆ ನಿಜವಾದ ಸಾರ್ಥಕತೆ ಸಿಗುತ್ತದೆ ಎಂದು ಹೇಳಿದರು.
ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಗುರಿ (ಬ್ಲೂಪ್ರಿಂಟ್) ಇರಬೇಕು ಸಂಕಲ್ಪ, ತ್ಯಾಗ ಮತ್ತು ದೃಢನಿರ್ಧಾರ ಇದ್ದರೆ ಯಶಸ್ಸು ಸಾಧ್ಯ. ತಂದೆ-ತಾಯಿ, ಗುರುಗಳು ಹಾಗೂ ಹಿರಿಯರನ್ನು ಗೌರವಿಸಬೇಕು ಎಂದರು.
ನನ್ನ ಸಾಧನೆಗೆ ನನ್ನ ಗುರುಗಳು ಹಾಗೂ ತಂದೆ-ತಾಯಿ ನೀಡಿದ ಸಂಸ್ಕಾರವೇ ಕಾರಣ ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ತಳಹದಿಯನ್ನು ಮರೆಯಬಾರದು ಎಂದು ಸಲಹೆ ನೀಡಿದರು.
ಹೆಣ್ಣುಮಕ್ಕಳು ಯಾವುದೇ ಕ್ಷೇತ್ರದಲ್ಲೂ ಯಾರಿಗೂ ಕಡಿಮೆಯಿಲ್ಲ. ಎಲ್ಲರೂ ಶಿಸ್ತಿನ ಸಿಪಾಯಿಗಳಾಗಿ, ಜಗತ್ತು ಮೆಚ್ಚುವ ರೀತಿಯಲ್ಲಿ ಕಾಯ, ವಾಚಾ, ಮನಸಾ ಬದುಕಬೇಕು. ದುಷ್ಟ ವ್ಯಕ್ತಿಗಳಾಗಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದರು.
ತಹಶೀಲ್ದಾರ್ ಗಗನಸಿಂಧು ಮಾತನಾಡಿ, ಗುರಿ ಇರಬೇಕು ಗುರಿ ಹಿಂದೆ ಗುರು ಇರಬೇಕು” ಎಂಬ ನಾಡ್ನುಡಿಯಂರೆ ವಿದ್ಯಾರ್ಥಿಗಳು ಗುರಿ ನಿಗದಿಪಡಿಸಿಕೊಂಡು ಶ್ರಮಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ವಿಸ್ತರಣಾ ನಿರ್ದೇಶಕ ಪ್ರೊ. ವಿ.ವೀರಭದ್ರಯ್ಯ
ಬಿ.ಎಂ.ವಿ. ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ವಿ. ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ,ನಿವೃತ್ತ ತೋಟಗಾರಿಕೆ ಅಧಿಕಾರಿ ಸಂತೆ ನಾರಾಯಣಸ್ವಾಮಿ, ವಕೀಲ ಎನ್. ಜಯರಾಂ ,ನಿವೃತ್ತ ಡಿ.ವೈ.ಎಸ್.ಪಿ. ಬಿ.ವಿ. ರಾಮಚಂದ್ರಪ್ಪ ,ಡಾ. ರವಿಕಲಾಕಾಳಪ್ಪ, ಡಾ.ಅರವಿಂದ್ ,
ಬೆಂಗಳೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಹಡಪದ್ ,ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಮಳ್ಳೂರು ಶಿವಣ್ಣ ಮುಂತಾದವರು ಹಾಜರಿದ್ದರು.









