ವಿಜಯ ದರ್ಪಣ ನ್ಯೂಸ್…..
ಅಕ್ಷಯ ವಿಪ್ರ ಮಹಾಸಭಾದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ “ಅಕ್ಷಯ ರತ್ನ” ಪುರಸ್ಕಾರ

ಬೆಂಗಳೂರು: ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅಕ್ಷಯ ವಿಪ್ರ ಮಹಾಸಭಾ ವತಿಯಿಂದ ಈ ಬಾರಿ ನಾಲ್ವರು ಮಹನೀಯರಿಗೆ `ಅಕ್ಷಯ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ.
೨೦೨೫-೨೬ನೇ ಸಾಲಿನ “ಅಕ್ಷಯ ರತ್ನ” ಬಿರುದು ಪುರಸ್ಕೃತರಲ್ಲಿ ಎ.ವಿ.ಎಂ.ಎಸ್.ನ ಮಾಜಿ ಅಧ್ಯಕ್ಷರು ಹಾಗೂ ವಕೀಲ ಎನ್.ಜಿ.ವಾಸುದೇವಮೂರ್ತಿ, ಜಯನಗರ ಎವಿಎಂಎಸ್ನ ಉಪಾಧ್ಯಕ್ಷ ಡಿಪಿಟಿಪಿಜಿಆರ್ ಬಿಜಿಎಸ್ನ ಡಾ.ಕೆ.ರಘುನಾಥರಾವ್, ಎವಿಎಂಎಸ್ನ ಮಾಜಿ ಉಪಾಧ್ಯಕ್ಷ ದಿ.ಎಸ್.ರಾಮಕೃಷ್ಣ (ಮರಣೋತ್ತರ), ಬೆಂಗಳೂರು ಗ್ರಾಮಾಂತರ ಹೊಸಕೋಟೆಯ ಎವಿಎಂಎಸ್ ಮಾಜಿ ಉಪಾಧ್ಯಕ್ಷ ಎನ್.ಕೆ.ಪಣೆರಾಜ್ ಇವರು ಪ್ರಮುಖರಾಗಿದ್ದಾರೆ.
ಆಗಸ್ಟ್ ೨ ರಂದು ಭಾನುವಾರ ನಡೆಯಲಿರುವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮುಳಬಾಗಿಲು ಶ್ರೀಪಾದರಾಜಮಠದ ಪೀಠಾಧಿಪತಿಗಳಾದ ೧೦೦೮ ಶ್ರೀ ಶ್ರೀ ಸುಜಯನಿಧಿ ತೀರ್ಥರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ, ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಕೆ.ರಾಮಮೂರ್ತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಎಸ್.ರಘುನಾಥ್ ಅವರು ಪಾಲ್ಗೊಳ್ಳಲಿದ್ದಾರೆ.
ಬೆಳಿಗ್ಗೆ ೧೦ ಗಂಟೆಯಿAದ ಕಾರ್ಯಕ್ರಮಗಳು ಆರಂಭವಾಗಲಿದ್ದು ಮಧ್ಯಾಹ್ನ ೨ ಗಂಟೆಯವರೆಗೆ ಜರುಗಲಿವೆ. ಈ ವೇಳೆ ಪ್ರಾರ್ಥನೆ, ಜ್ಯೋತಿ ಬೆಳಗುವುದು, ಸ್ವಾಗತ ಭಾಷಣ, ಗೌರವ ಅಧ್ಯಕ್ಷರಿಂದ ಭಾಷಣ, ಡೈರೆಕ್ಟರಿ ಪುಸ್ತಕ ಬಿಡುಗಡೆ, ಅಧ್ಯಕ್ಷರ ಭಾಷಣ ಜರುಗಲಿದೆ. ಸಂಜೆ ೫-೩೦ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ.
ಈ ನಡುವೆ ೮೫ ವರ್ಷ ತುಂಬಿದ ವೃದ್ಧರಿಗೆ, ೭೦ ವರ್ಷದ ದಂಪತಿಗಳಿಗೆ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಂಘದ ಸದಸ್ಯರುಗಳಿಗೆ ಸನ್ಮಾನ ಇರಲಿದೆ. ಬಳಿಕ ವಂದನಾರ್ಪಣೆಯ ಮೂಲಕ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಈ ಸಮಾರಂಭಕ್ಕೆ ಅಕ್ಷಯ ವಿಪ್ರ ಮಹಾಸಭಾದ ಅಧ್ಯಕ್ಷ ಎನ್.ಕೆ.ರಾಮಚಂದ್ರರಾವ್, ಗೌರವಾಧ್ಯಕ್ಷ ಡಾ.ಎನ್.ಕೀರ್ತಿರಾಜ್, ಉಪಾಧ್ಯಕ್ಷ ಕೆ.ಆನಂದರಾವ್, ಡಾ.ಕಿರಣ್ ಎಸ್.ಮೂರ್ತಿ, ಡಾ.ಕೆ.ರಘುನಾಥರಾವ್, ಲಕ್ಷ್ಮಿಶ ವಿ.ಶ್ರೀಪ್ರಕಾಶ್, ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರರಾವ್, ಕಾರ್ಯದರ್ಶಿ ಎನ್.ಎಸ್.ಸುಧೀಂದ್ರ ರಾವ್, ಜಂಟಿ ಕಾರ್ಯದರ್ಶಿಗಳಾದ ಮಹೇಶ್ ಕುಮಾರ್ ಆರ್., ಟಿ.ಎನ್.ಶಾಂತ ಕುಮಾರ್., ಎನ್.ಪಿ.ಮಂಜುನಾಥ್, ಎಲ್.ಜಗನ್ನಾಥ್, ಆರ್.ಶ್ರೀನಿವಾಸ್, ಎನ್.ರಾಘವೇಂದ್ರ ರಾವ್, ಆಂತರಿಕ ಲೆಕ್ಕ ಪರಿಶೋಧಕ ಎನ್.ಜೆ.ಮಣಿಕುಮಾರ್, ಕಾನೂನು ಸಲಹೆಗಾರ ಎ.ವಿಜಯಕುಮಾರ್ ಭಟ್, ಖಜಾಂಚಿ ಎನ್.ರಾಘವೇಂದ್ರರಾವ್ ಮತ್ತು ಕಾರ್ಯಕಾರಿ ಸದಸ್ಯರು ಸ್ವಾಗತಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯಲ್ಲಿ ಅಕ್ಷಯ ವಿಪ್ರ ಮಹಾಸಭಾ(ರಿ)ದ ೨೦೨೫-೨೦೨೬ ೧೯ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಜರುಗಲಿದೆ. ಬೆಂಗಳೂರು ಜಯನಗರದ ೪ನೇ ಬ್ಲಾಕ್ ನ ೧೧ನೇ ಮುಖ್ಯರಸ್ತೆಯ ವಿಜಯ ಕಾಲೇಜು ಆವರಣದ ಪ್ರೊ.ಬಿ.ವಿ. ನಾರಾಯಣ ರಾವ್ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಅಕ್ಷಯ ಪುರಸ್ಕಾರಾಭಿನಂದನ ಕಾರ್ಯಕ್ರಮವೂ ಜರುಗಲಿದೆ.










