ವಿಜಯ ದರ್ಪಣ ನ್ಯೂಸ್…..
“ಭಾವುಕ ಲೋಕದಲ್ಲಿ ಮಿಂದೆದ್ದ ಸೇವಾ ಸೌಭಾಗ್ಯ-ಬಾಗಿನೋತ್ಸವ” ಅರ್ಥಪೂರ್ಣ ಬಾಗಿನೋತ್ಸವ ನಡೆಸಿಕೊಟ್ಟ ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಆರೋಗ್ಯ ಇಲಾಖೆಯ ಮಾಹಿತಿಯನ್ನು ತಲುಪಿಸುತ್ತಿದ್ದಾರೆ ,ಅಕ್ಷರ ದಾಸೋಹದ ಅಡುಗೆ ಸಹಾಯಕಿಯರು ಪ್ರತಿದಿನ ಶಾಲಾ ಮಕ್ಕಳಿಗೆ ಬಿಸಿಯೂಟ ಸಿದ್ಧಪಡಿಸಿ ನೀಡುತ್ತಿದ್ದಾರೆ
ಇವರ ಸೇವೆ ಸಮಾಜದ ಮುಂದಿನ ಪೀಳಿಗೆಯ ಆರೋಗ್ಯ ಮತ್ತು ಭವಿಷ್ಯಕ್ಕೆ ಮಹತ್ವದ್ದಾಗಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಅವರ ಸೇವಾಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಹಂಡಿಗನಾಳ ಬಳಿಯ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಶಿಡ್ಲಘಟ್ಟ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರದಾಸೋಹ ಅಡುಗೆ ಸಹಾಯಕಿಯರಿಗೆ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ “ಸೇವಾ ಸೌಭಾಗ್ಯ -ಬಾಗಿನೋತ್ಸವ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ನಿಮ್ಮೊಂದಿಗೆ ಇರುತ್ತೇನೆ ಜನರ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ ತಿಳಿದುಕೊಳ್ಳುವುದಲ್ಲದೆ, ಸಾಧ್ಯವಾದಷ್ಟು ನೇರವಾಗಿ ಆಲಿಸಿ ಪರಿಹರಿಸಲು ಪ್ರಯತ್ನಿಸುತ್ತೇನೆ ಗ್ರಾಮಗಳಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಹಾಗು ಬರದ ಸಂಕಷ್ಟವನ್ನು ಪರಿಹರಿಸಲು ಶ್ರಮಿಸುವೆ ಎಂದು ಹೇಳಿದರು.
ಬಾಗನ ನೀಡುವ ಕಾರ್ಯಕ್ರಮವನ್ನು ಯಾವುದೇ ರಾಜಕೀಯ ಲಾಭ ಅಥವಾ ಸ್ವಾರ್ಥದಿಂದ ಆಯೋಜಿ ಸಿಲ್ಲ ಸಮಾಜದ ಒಳಿತಿಗಾಗಿ ಪ್ರತಿನಿತ್ಯ ನಿಸ್ವಾರ್ಥವಾಗಿ ದುಡಿಯುತ್ತಿರುವ ತಾಯಂದಿರ ಸೇವೆಯನ್ನು ಗುರುತಿಸಿ ಗೌರವಿಸುವುದು ಇದರ ಸದುದ್ದೇಶ ಎಂದರು.
ತಾಲೂಕು ಪಂಚಾಯಿತಿ ಇಒ ಆರ್.ಹೇಮಾವತಿ ಮಾತನಾಡಿ ,ವರ್ಷಕ್ಕೊಮ್ಮೆ ತವರು ಮನೆಯವರು ಮಗಳನ್ನು ಹುಡುಕಿಕೊಂಡು ಬಂದು, ನಾವು ನಿನ್ನೊಂದಿಗೆ ಇದ್ದೇವೆ ಎಂಬ ಧೈರ್ಯ ತುಂಬುವ ಜತೆಗೆ ಬಾಗಿನ ನೀಡಿ ಹರಸುವುದು ಸಂಪ್ರದಾಯ ಎಂದು ಭಾವುಕರಾಗಿ ನುಡಿವಾಗ ಕಣ್ಣಂಚಿಗೆ ನೀರು ಬಂದು ಸಭಾಂಗಣದಲ್ಲಿ ನೆರೆದಿದ್ದವರು ಕೂಡ ಕೆಲ ಕ್ಷಣಗಳ ಕಾಲ ಭಾವುಕರಾಗಿ
ಮೌನ ಆವರಿಸಿತು.
ಮದುವೆಯಾಗಿ ಗಂಡನ ಮನೆ ಸೇರಿದ ಹೆಣ್ಣುಮಕ್ಕಳಿಗೂ ತವರು ಮನೆಯ ಪ್ರೀತಿ, ಆಸರೆ ಮತ್ತು ಸಂಬಂಧ ಸದಾ ಉಳಿಯಬೇಕು ಎಂಬ ಸಂದೇಶವನ್ನು ಗೌರಿ ಹಬ್ಬ ಹಾಗು ಸಾಂಪ್ರದಾಯಗಳು ಸಾರುತ್ತವೆ ಎಂದರು.
ಸೇವಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆ, ಗೌರಿ ಹಬ್ಬದ ಸಂದರ್ಭದಲ್ಲಿ ತವರು ಮನೆಯವರು ಹೆಣ್ಣುಮಕ್ಕಳಿಗೆ ನೀಡುವ ಪ್ರೀತಿ ಹಾಗೂ ಕಾರ್ಯಕ್ರಮದ ಹಿಂದಿನ ಮಾನವೀಯ ಕಾಳಜಿಯನ್ನು ನೆನಪಿಸಿಕೊಂಡು ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ಶ್ಲಾಘಿಸಿದರು.
ಅಧಿಕಾರಿಯಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ ,ಆದರೆ ಮಹಿಳೆಯರ ಸೇವೆ ಯನ್ನು ಗುರುತಿಸಿ, ಅವರನ್ನು ಕುಟುಂಬದ ಸದಸ್ಯರಂತೆ ಗೌರವಿಸುವ ಇಂತಹ ಕಾರ್ಯಕ್ರಮ ಅಪರೂಪ ಇದು ಬಾಗಿನ ನೀಡುವ ಕಾರ್ಯಕ್ರಮವಲ್ಲ ಸಮಾಜಕ್ಕಾಗಿ ದುಡಿಯುತ್ತಿರುವ ಮಹಿಳೆಯರಿಗೆ ನೀಡುತ್ತಿರುವ ಆತ್ಮಗೌರವ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ ,ಕೃಷ್ಣಾರೆಡ್ಡಿ,
ಪಿ.ಎಲ್.ಡಿ.ಬ್ಯಾಂಕ್ ಅದ್ಯಕ್ಷ ಎಂ.ಜಿ.ಸುರೇಶ್ ,
ತಹಸೀಲ್ದಾರ್ ಗಗನಸಿಂಧು, ಪೌರಾಯುಕ್ತ ಅಮೃತಾ, ಸಿ.ಡಿ.ಪಿ.ಒ.ವಿದ್ಯಾವಸ್ತ್ರದ್, ಇಒ. ಸ್ವಾಮಿ, ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎನ್.ಸುಬ್ಬಾರೆಡ್ಡಿ, ಮುಖಂಡರಾದ ನಂದನವನಂ ಶ್ರೀರಾಮರೆಡ್ಡಿ, ಕೆ.ಲಕ್ಷ್ಮೀನಾರಾಯಣರೆಡ್ಡಿ,ತಾದೂರು ರಘು ,ನವೀನ್,ಸಿ.ಎಂ.ರಮೇಶ್ ಮುಂತಾದವರು ಹಾಜರಿದ್ದರು.











