ವಿಜಯ ದರ್ಪಣ ನ್ಯೂಸ್….
ಶಾಸಕರೇ ಒಮ್ಮೆ ನಮ್ಮ ಊರಿಗೆ ಬನ್ನಿ ನಮ್ಮ ನೋವನ್ನು ಕಣ್ಣಾರೆ ನೋಡಿ..

ಮಡಿಕೇರಿ: ಕೊಡಗು ಜಿಲ್ಲೆಯ ಸಂಪಾಜೆ ಸಮೀಪದ ಎಂ.ಚಂಬು ಗ್ರಾಮದ ಮಾಪ್ಲಕಜ .ಎಸ್.ಟಿ. ಏರಿಯಾ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಪ್ರದೇಶ ಇಲ್ಲಿ ಸುಮಾರು 25 ಕುಟುಂಬಗಳು ವಾಸಿಸುತ್ತಿದ್ದು ಇಂದಿಗೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ
ಇಲ್ಲಿನ ಶಾಲಾ ಮಕ್ಕಳು, ವೃದ್ಧರು ಹಾಗೂ ನಿವಾಸಿಗಳು ಪ್ರತಿದಿನವೂ ದುಸ್ಥಿತಿಯಲ್ಲಿರುವ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ ಮಳೆಗಾಲ ಬಂದರೆ ರಸ್ತೆ ಕೆಸರುಗದ್ದೆಯಾಗಿ ವಾಹನ ಸಂಚಾರವಷ್ಟೇ ಅಲ್ಲದೆ ಕಾಲ್ನಡಿಗೆಯೂ ಕಷ್ಟವಾಗುತ್ತದೆ
ಕೊಡಗು ಜನ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಅಲ್ಲಿನ ನಿವಾಸಿಗಳನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ ಸಂದರ್ಭದಲ್ಲಿ 83 ವರ್ಷ ಪ್ರಾಯದ ಅಲ್ಲಿನ ನಿವಾಸಿ ಹೊನ್ನಮ್ಮ ಅವರು ಕಣ್ಣೀರಿಡುತ್ತಾ ತಮ್ಮ ನೋವನ್ನು ಹಂಚಿಕೊಂಡರು
ನನ್ನ ಆಯಸ್ಸು ಇವತ್ತು ನಾಳೆ ಮುಗಿಯಬಹುದು ಆದರೆ ನನ್ನ ಮೊಮ್ಮಕ್ಕಳಾದರೂ ಮುಂದಿನ ದಿನಗಳಲ್ಲಿ ಒಳ್ಳೆಯ ರಸ್ತೆಯಲ್ಲಿ ಓಡಾಡುವಂತಾಗಲಿ ನಮ್ಮ ಊರಿಗೆ ಒಳ್ಳೆಯ ರಸ್ತೆ ಸಿಗಲಿ ಎಂದು ಕಣ್ಣೀರಿಡುತ್ತಾ ಹೇಳಿದರು
ಕಳೆದ ತಿಂಗಳು ಹೊನ್ನಮ್ಮ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಕರೆದೊಯ್ಯಬೇಕಾದ ಸಂದರ್ಭದಲ್ಲಿ ವಾಹನಕ್ಕಾಗಿ ಸಾಕಷ್ಟು ಪ್ರಯತ್ನಿಸಿದರೂ ಜೀಪ್ ವ್ಯವಸ್ಥೆ ಸಿಗದೆ ಬಹಳ ಸಂಕಷ್ಟ ಅನುಭವಿಸಬೇಕಾಯಿತು ಎಂದು ಕಣ್ಣೀರಿನಿಂದ ತಿಳಿಸಿದರು.
ನಮಗೆ ಆರೋಗ್ಯ ಸಮಸ್ಯೆ ಬಂದಾಗ ಆಸ್ಪತ್ರೆಗೆ ಹೋಗಲು ವಾಹನವೇ ಬರುವುದಿಲ್ಲ ಈ ರಸ್ತೆಯ ಸ್ಥಿತಿ ನೋಡಿ ಯಾರೂ ಬರಲು ಸಿದ್ಧರಿರುವುದಿಲ್ಲ ನಮ್ಮಂತಹ ಜನಸಾಮಾನ್ಯರು ಇನ್ನೆಷ್ಟು ವರ್ಷ ಇದೇ ರೀತಿ ಬದುಕಬೇಕು?” ಎಂದು ಅಲ್ಲಿನ ಹಿರಿಯರು ಪ್ರಶ್ನಿಸಿದ್ದಾರೆ
ಈ ಮಾತುಗಳು ಕೇವಲ ಒಬ್ಬ ಹಿರಿಯ ಮಹಿಳೆಯ ಕಣ್ಣೀರಿನ ಕಥೆಯಲ್ಲ ಇದು ಅಲ್ಲಿನ 25 ಕುಟುಂಬಗಳ ನೋವಿನ ಧ್ವನಿ ಅಲ್ಲಿಯ ನಿವಾಸಿಯಾದ ಹಿರಿಯರು ಆದ ಸತ್ಯನಾರಾಯಣ ಅವರು ಸಹ ಕೆಲವು ಮಾಹಿತಿಗಳು ನೀಡಿರುತ್ತಾರೆ
ಅಲ್ಲಿನ ನಿವಾಸಿಗಳು ನಿರಂತರವಾಗಿ ಕೊಡಗು ಜನ ಅಭಿವೃದ್ಧಿ ಸಮಿತಿಗೆ ದೂರವಾಣಿ ಮೂಲಕ ತಮ್ಮ ಸಮಸ್ಯೆಗಳನ್ನು ತಿಳಿಸುತ್ತಿದ್ದು ಅಲ್ಲಿನ ಪ್ರಮುಖರಾದ ಶ್ರೀ ಸತ್ಯನಾರಾಯಣ ಅವರು ಸ್ಥಳದ ಛಾಯಾಚಿತ್ರಗಳು ಹಾಗೂ ಸಂಪೂರ್ಣ ಮಾಹಿತಿಯನ್ನು ಸಮಿತಿಗೆ ನೀಡಿದ್ದಾರೆ
*ವರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಎ.ಎಸ್. ಪೊನ್ನಣ್ಣ ಅವರೇ ದಯವಿಟ್ಟು ಒಮ್ಮೆ ಈ ಗ್ರಾಮಕ್ಕೆ ಭೇಟಿ ನೀಡಿ
ಈ ರಸ್ತೆಯಲ್ಲಿ ನೀವೇ ಒಂದು ಬಾರಿ ಸಂಚರಿಸಿ ನೋಡಿ ಇಲ್ಲಿನ ಶಾಲಾ ಮಕ್ಕಳನ್ನು ನೋಡಿ ವೃದ್ಧರ ನೋವನ್ನು ಆಲಿಸಿ ಹೊನ್ನಮ್ಮ ಅವರಂತಹ ಹಿರಿಯರ ಕಣ್ಣೀರನ್ನು ನೋಡಿ
ನಾವು ಕೇಳುತ್ತಿರುವುದು ದೊಡ್ಡ ಯೋಜನೆಯಲ್ಲ
ನಮಗೆ ಉಚಿತ ಬಸ್ ಬೇಡ ಉಚಿತ ಅಕ್ಕಿ ಬೇಡ ಉಚಿತ ಕೊಡುಗೆಗಳೂ ಬೇಡ ನಮ್ಮ ಬದುಕಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಮಾತ್ರ ನೀಡಿ
ಕೇವಲ ಒಂದು ಕಿಲೋಮೀಟರ್ ರಸ್ತೆಯನ್ನು ದುರಸ್ತಿಗೊಳಿಸಿದರೂ ಈ 25 ಕುಟುಂಬಗಳ ಬದುಕಿನಲ್ಲಿ ದೊಡ್ಡ ಬದಲಾವಣೆ ತರಬಹುದು. ಒಬ್ಬ ವೃದ್ಧೆ ತನ್ನ ಮೊಮ್ಮಕ್ಕಳ ಭವಿಷ್ಯಕ್ಕಾಗಿ ಕಣ್ಣೀರು ಹಾಕುವ ಪರಿಸ್ಥಿತಿ ಬರಬಾರದು
ಗಡಿಭಾಗದ ಗ್ರಾಮದಲ್ಲಿರುವ ಜನರೂ ಈ ನಾಡಿನ ನಾಗರಿಕರೇ ಅವರಿಗೂ ಉತ್ತಮ ರಸ್ತೆ ಸುರಕ್ಷಿತ ಸಂಚಾರ ಮತ್ತು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪುವ ಹಕ್ಕಿದೆ
ಮಾನ್ಯ ಶಾಸಕರೇ, ಒಮ್ಮೆ ಬನ್ನಿ ನಮ್ಮ ರಸ್ತೆ ನೋಡಿ ನಮ್ಮ ಜನರನ್ನು ಭೇಟಿ ಮಾಡಿ ನಮ್ಮ ಹಿರಿಯರ ಮಾತು ಕೇಳಿ ಹೊನ್ನಮ್ಮ ಅವರ ಕಣ್ಣೀರನ್ನು ಒಮ್ಮೆ ನೋಡಿ
ಕೇವಲ ಒಂದು ಕಿಲೋಮೀಟರ್ ರಸ್ತೆ ದುರಸ್ತಿಗೊಳಿಸಿ ಈ ಕುಟುಂಬಗಳ ಬದುಕಿಗೆ ನೆಮ್ಮದಿಯ ದಾರಿ ಮಾಡಿಕೊಡಿ ಎಂದು ಗ್ರಾಮಸ್ಥರ ಪರವಾಗಿ ಮನವಿ
ಕೊಡಗು ಜನ ಅಭಿವೃದ್ಧಿ ಸಮಿತಿಯ ಜಿಲ್ಲಾಧ್ಯಕ್ಷ ಶ್ರೀ ಚಿಕ್ಕಂಡ ಪ್ರಭು ಮಾದಪ್ಪ. ಗೌರವಾಧ್ಯಕ್ಷ ರಫೀಕ್ ಖಾನ್. ಕಾರ್ಯಧ್ಯಕ್ಷ ಇಸಾಕ್ ಖಾನ್. ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್ ಮೌರ್ಯ ಸಂಘಟನೆ ಸಂಘಟನಾ ಕಾರ್ಯದರ್ಶಿ ಶಬ್ಬೀರ್ ಎ. ಸಹಕಾರ್ಯದರ್ಶಿ ರೀಫಾ ಕ್ರೌನ್. ಉಪಾಧ್ಯಕ್ಷ ವಿನೋದ್ ಮಡಿಕೇರಿ ಉಪಾಧ್ಯಕ್ಷ ಮಂಜೇಶ್ ಟಿಪಿ ಹಾಗೂ ಸಂಸ್ಥಾಪಕ ಎಂ.ಎಂ ದಾವುದ್ ಅವರು ಅಲ್ಲಿನ ನಿವಾಸಿಗಳ ಪರವಾಗಿ ಮನವಿ ಸಲ್ಲಿಸುತ್ತೇವೆ
✍️ ಎಂ ಎಂ ದಾವೂದ್, ಸಂಸ್ಥಾಪಕರು ಕೊಡಗು ಜನ ಅಭಿವೃದ್ಧಿ ಸಮಿತಿ
9945375180










