--Ads--

ನಶಾ ಮುಕ್ತ ಯುವಜನತೆ ಸದೃಢ ಭಾರತದ ಬುನಾದಿ: ಪ್ರಧಾನಿ ನರೇಂದ್ರ ಮೋದಿ

On: August 2, 2026 5:25 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ನಶಾ ಮುಕ್ತ ಯುವಜನತೆ ಸದೃಢ ಭಾರತದ ಬುನಾದಿ: ಪ್ರಧಾನಿ ನರೇಂದ್ರ ಮೋದಿ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆ.2:

ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವಜನತೆಯ ಕಾರ್ಯಕ್ರಮದ ಉದ್ದೇಶವು ಯುವ ಜನತೆಯನ್ನು ಮಾದಕ ವ್ಯಸನ ದಿಂದ ದೂರವಿಡುವ ಅಭಿಯಾನ ವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.

ಇವರು ಭಾರತ ಸರ್ಕಾರ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೇರಾ ಯುವ ಭಾರತ್ ವತಿಯಿಂದ ಆಯೋಜಿಸಲಾದ ನಶಾ ಮುಕ್ತ ಯುವ ವಿಕಸಿತ ಭಾರತ ಎಂಬ ಶೀರ್ಷಿಕೆಯ ಅಡಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರೊಂದಿಗೆ ವರ್ಚುವಲ್ ಸಂವಾದದಲ್ಲಿ ಮಾತನಾಡಿ ವಿಕಸಿತ ಭಾರತ ನಶಾ ಮುಕ್ತ ಯುವ ಅಭಿಯಾನವು ಇದು ಭಾರತವನ್ನು ಅಭಿವೃದ್ಧಿಪಡಿಸುವ ಮತ್ತು ಯುವ ಜನತೆಯನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ಪ್ರಮುಖ ರಾಷ್ಟ್ರೀಯ ಅಭಿಯಾನ ವಾಗಿದೆ.

ಆದ್ದರಿಂದ ವಿಕಸಿತ ಭಾರತ 2047 ಕ್ಕೆ ಬಲವಾದ ಹಾಗೂ ಆರೋಗ್ಯ ಕರ ಯುವ ಶಕ್ತಿಯನ್ನು ನಿರ್ಮಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವರ್ಚುವಲ್ ಸಂವಾದ ಅಂಗವಾಗಿ ಮಾದಕ ವ್ಯಸನಗಳ ಬಗ್ಗೆ ಯುವಜನತೆಗೆ ಜಾಗೃತಿ ಮೂಡಿಸುವ ಹಾಗೂ ಕುಟುಂಬ ಮತ್ತು ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಅರಿವಿನ ನಾಟಕವನ್ನು ಪ್ರದರ್ಶಿಸಲಾಯಿತು. ಹಾಗೂ ಬೊಮ್ಮವಾರ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಎಂಟನೇ ತರಗತಿಯ ವಿದ್ಯಾರ್ಥಿ ಗಳಾದ ಡಿ. ಗಗನ್, ಜೆ. ನೂತನ್ ಗೌಡ, ಪದವಿ ಪೂರ್ವ ಆರ್. ಜಯಶ್ರೀ, ಪಿ. ರೂಪಶ್ರೀ ಹಾಗೂ ಚೇತನ್ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ವರ್ಚುವಲ್ ಸಂವಾದದಲ್ಲಿ ವಿವಿಧ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವಿಯ ವಿವಿಧ ರಾಜ್ಯಗಳ ಮೇರಾ ಯುವ ಭಾರತ್ ನ ನಿರ್ದೇಶಕರು, ಜಿಲ್ಲಾ ಯುವ ಅಧಿಕಾರಿಗಳು ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳು, ಯುವಕ ಸಂಘ,ಯುವತಿ ಮಂಡಳಿ ಹಾಗೂ ದೇಶದ ವಿವಿಧ ರಾಜ್ಯಗಳ ಯುವಜನತೆ ಈ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರ್ಚುವಲ್ ಸಂವಾದ ಈ ಕಾರ್ಯಕ್ರಮ ಉಪಸ್ಥಿತಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮೇರಾ ಯುವ ಭಾರತ್ ನ ಜಿಲ್ಲಾ ಯುವ ಅಧಿಕಾರಿ ಅರುಣಿಮ, ಬೊಮ್ಮವಾರ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ. ಓ. ಗಿರೀಶ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ರಾಷ್ಟ್ರೀಯ ವಿಜ್ಞಾನ ಕೇಂದ್ರದ ಶಿವಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ಮೇಲ್ವಿಚಾರಕ ವಿಶ್ವಾಸ್ ಗೌಡ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ಡಾ.ವಿ.ಪ್ರಶಾಂತ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತ ಎನ್. ಪ್ರಸನ್ನ ಕುಮಾರ್, ಜೇಡಿ ಮಣ್ಣಿನ ಕಲಾವಿದ ಎನ್. ಮಹೇಂದ್ರ ಮೊದಲಾದವರು ಹಾಜರಿದ್ದರು.

₹₹₹₹₹₹₹₹₹########₹₹₹₹₹₹₹₹₹₹₹₹₹₹₹

ಯಶಸ್ವಿಯಾಗಿ ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು ನಡೆದ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರಿಕ್ಷೆ ಯಶಸ್ವಿಯಾಗಿ ನಡೆಯಿತು.

ಏಳು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3462 ಅಭ್ಯರ್ಥಿಗಳ ಪೈಕಿ 3228 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು , 234 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.

WhatsApp

Join Now

Telegram

Join Now

Instagram

Join Now