ವಿಜಯ ದರ್ಪಣ ನ್ಯೂಸ್……
ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ : ಕರ್ನಾಟಕ ವಿಕಾಸ ರಂಗ

ಚುನಾವಣೆ ಸಂದರ್ಭದಲ್ಲಿ ಪಕ್ಷಗಳ ಬೆಂಬಲಿಸುವ ಸಾಹಿತಿಗಳಿಗೆ ಪ್ರಶಸ್ತಿ, ಒಂದು ಪುಸ್ತಕ ಬರೆದ ಸಾಹಿತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರವೀಂದ್ರ ಕಲಾಕ್ಷೇತ್ರ : ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕರ್ನಾಟಕ ವಿಕಾಸ ರಂಗದ ವತಿಯಿಂದ ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭ.
ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಕೆ., ಜಾನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡರು, ಸಾಹಿತಿ ರಾ.ನಂ.ಚಂದ್ರಶೇಖರ್ , ಜರಗನಹಳ್ಳಿ ಶಿವಶಂಕರ್ ರವರ ಪುತ್ರಿ ಶುಭದ ಪುರುಷೋತ್ತಮ್ ರಾಜುರವರು ಜರಗನಹಳ್ಳಿ ಶಿವಶಂಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
2026ನೇ ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಎಸ್.ಗೋಪಾಲಗೌಡ ಕಲ್ಪಮಂಜಲಿರವರಿಗೆ ಪ್ರಧಾನ ಮಾಡಲಾಯಿತು.
ನಲ್ಲೂರು ಪ್ರಸಾದ್.ಕೆ. ರವರು ಮಾತನಾಡಿ ಜರಗನಹಳ್ಳಿ ಶಿವಶಂಕರ್ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಸಾರ್ಥಕ ಸಾಹಿತಿ ಎಸ್.ಗೋಪಾಲಗೌಡ ಕಲ್ಪ ಮಂಜಲಿ ಲಭಿಸಿರುವುದು ಸಂತೋಷದಾಯಕ ವಿಷಯವಾಗಿದೆ.
ಇರುವಾಗ ನೆನಪು ಮತ್ತು ಹೋದಾಗ ಸ್ಮರಣೆ ಮಾಡಿಕೊಳ್ಳವುದು ಪ್ರತಿಯೊಬ್ಬರು ಮಾಡಬೇಕು.
ನನ್ನ ತಂದೆಯವರು ನನ್ನನು ವೈದ್ಯ ಮಾಡಬೇಕು ಎಂದು ಆಸೆ ಇಟ್ಟಿಕೊಂಡಿದ್ದರು, ಜನರು ನಾನು ಸನ್ಯಾಸಿಯಾಗುತ್ತೇನೆ ಎಂದು ಮಾತನಾಡುತ್ತಿದ್ದರು ಅದರೆ ಸಾಹಿತ್ಯ ಲೋಕಕ್ಕೆ ಸೇವೆ ಸಲ್ಲಿಸುವ ಸೌಭಾಗ್ಯ ನನ್ನದಾಗಿತ್ತು.
ಡಾ.ಅಪ್ಪೆಗೆರೆ ತಿಮ್ಮರಾಜು ಅವರು ಮಾತನಾಡಿ ಜರಗನಹಳ್ಳಿ ಶಿವಶಂಕರ್ ರವರನ್ನು ಮತ್ತೇ ಜೀವಂತಗೊಳಿಸುವ ಕಾರ್ಯಕ್ರಮವಾಗಿದೆ. ಕರ್ನಾಟಕ ವಿಕಾಸ ರಂಗ ಕನ್ನಡ ಕ್ರಿಯಾತ್ಮಕ ಸಂಸ್ಥೆಯಾಗಿದೆ.
ಎಷ್ಟು ಪದವಿ ಮುಖ್ಯವಲ್ಲ, ಮಾನವೀಯತೆ ಪದವಿ ಮುಖ್ಯ.ಮನುಷ್ಯ ಆಧುನಿಕತೆಯಿಂದ ಹಾಳಾಗಿ ಹೋಗುತ್ತಿದ್ದಾನೆ.
ಪ್ರೀತಿ ಇಲ್ಲದೇ ಮೇಲೆ ಹೂವು ಹೇಗೆ ಆರುಳುತ್ತದೆ ಎಂಬಂತೆ ಜರಗನಹಳ್ಳಿ ಶಿವಶಂಕರ್ ರವರು ಎಲ್ಲರ ಪ್ರೀತಿ ಸಂಪಾದಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದರು. ನಿಸರ್ಗ ಪ್ರೀಯ ಕವಿ, ಸಣ್ಣ, ಸಣ್ಣ ನುಡಿ ಸಿರಿಯಾಯಿತು ಜರಗನಹಳ್ಳಿ ಶಿವಶಂಕರ್ ಅವರಿಂದ. ಕನ್ನಡ ನಾಡಿನ ಮೂಲ ಸಂಸ್ಕತಿ ಜಾನಪದ, ಪ್ರಶಸ್ತಿಗಳಿಂದ ನಾನು ದೂರ, ಜಾನಪದ ಹಾಡುಗಳಿಂದ ನಾನು ಹತ್ತಿರ. ಕೇಳದೇ, ಹೋರಾಟ ಮಾಡದೇ ಪ್ರಶಸ್ತಿಗಳು ಸಿಗುವುದಿಲ್ಲ ಅಂತಹ ಕಾಲ ಬಂದಿದೆ. ಕಲಾವಿದ, ಸಾಹಿತಿ, ಕನ್ನಡ ಪರ ಹೋರಾಟಗಾರರಿಂದ ಯುವಕರು ಪಾಠ ಕಲಿಯಬೇಕು .ಕಲ್ಲು ಬಂಡೆಯಿಂದ ಆರಳಿದ ಪ್ರತಿಭೆ ಗೋಪಾಲಗೌಡ ಕಲ್ಪಮಂಜಲಿರವರು ಎಂದು ಹೇಳಿದರು.
ವ.ಚ.ಚನ್ನೇಗೌಡರು ಮಾತನಾಡಿ ಚುಟುಕು ಸಾಹಿತ್ಯದ ಮೂಲಕ ವಿಶ್ವಮಾನ್ಯ ಗಳಿಸಿದ ಸಾಹಿತಿ ಜರಗನಹಳ್ಳಿ ಶಿವಶಂಕರ್ ರವರು ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು.
ಕನ್ನಡ ಸಾಹಿತ್ಯ ಲೋಕಕ್ಕೆ ಎಸ್.ಗೋಪಾಲಗೌಡ ಕಲ್ಪಮಂಜಲಿರವರ ಅಪಾರ ಕೊಡುಗೆ ನೀಡಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡುವ ಸಾಹಿತಿಗಳಿಗೆ ಪ್ರಶಸ್ತಿಗಳು ಒಲಿದು ಬರುತ್ತಿದೆ ಎಂಬುದು ಶೋಚನೀಯ ಸಂಗತಿ.

ಸಾಹಿತಿ ಜರಗನಹಳ್ಳಿ ಶಿವಶಂಕರ್ ಅವರ ಸ್ಮರಣೆಯಲ್ಲಿ 2022ರಿಂದ ಪ್ರತಿವರ್ಷ ನುಡಿಸಿರಿ ಸಾಹಿತ್ಯ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಎಸ್.ಗೋಪಾಲಗೌಡ ಕಲ್ಪಮಂಜಲಿ ರವರು ಮಾತನಾಡಿ ಸಾಹಿತ್ಯ ಒದಿದವನು ನಾನಲ್ಲ, ವಿಜ್ಞಾನದ ವಿದ್ಯಾರ್ಥಿಯಾಗಿದ್ದೇ. ರಾಮಕೃಷ್ಣ ಉಡಪ, ಅರ್ಜುನ್ ದೇವ್ ನನಗೆ ಸ್ಪೂರ್ತಿ ನೀಡಿದ ಕಾರಣ ನಾನು ಬರೆಯಲು ಆರಂಭಿಸಿ ಸಾಹಿತಿಯಾದೆ.
ಮೊದಲು ಕವನ, ಗದ್ಯ ಮತ್ತು ಸಾಂಸ್ಕೃತಿಕ ನಾಯಕರುಗಳು ದೇವಾಲಯ ಇತಿಹಾತ ಕುರಿತು ಸಂಶೋಧ್ಮಕ ಕೃತಿಗಳು ಬರೆದೆ ಎಂದು ಹೇಳಿದರು.
ರಾ.ನಂ.ಚಂದ್ರಶೇಖರ್ ರವರು ಒಂದು ಪುಸ್ತಕ ಬರೆದವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೊಟ್ಟಿರುವುದು ದುರಂತ . ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಹಾಯ ಮಾಡಿದವರಿಗೆ ಪ್ರಶಸ್ತಿ ಲಭಿಸುತ್ತಿದೆ ಎಂಬುದು ಅಚ್ಚರಿಯ ಸಂಗತಿ. ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕ ಸಾಹಿತಿಗಳಿಗೆ ಸಿಗಬೇಕಾದ ಗೌರವ, ಪ್ರಶಸ್ತಿಯನ್ನು ಕರ್ನಾಟಕ ವಿಕಾಸ ರಂಗ ಕೊಡಮಾಡುತ್ತಿದೆ ಎಂದು ಹೇಳಿದರು.
ಬಿ.ಎಂ.ಗಂಗಣ್ಣ, ಕೆ.ಎಸ್.ಎಂ.ಹುಸೇನ್ ರವರು, ಚಂದ್ರಶೇಖರ್ ಮತ್ತು ಕನ್ನಡ ಪರ ಹೋರಾಟಗಾರರು, ಸಾಹಿತಿಗಳು, ಜರಗನಹಳ್ಳಿ ಶಿವಶಂಕರ್ ಅವರ ಅಭಿಮಾನಿಗಳು ಪಾಲ್ಗೊಂಡಿದ್ದರು.








