--Ads--

ವಿದ್ಯಾರ್ಥಿಗಳ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಕೆಎಸ್‌ಆರ್‌ಟಿಸಿ

On: September 18, 2026 5:00 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ವಿದ್ಯಾರ್ಥಿಗಳ ಸಮಸ್ಯೆಗೆ ತಕ್ಷಣ ಸ್ಪಂದಿಸಿದ ಕೆಎಸ್‌ಆರ್‌ಟಿಸಿ

 

ಕೂಡಿಗೆ ಡೈರಿ ಸರ್ಕಲ್‌ನಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಸುಧಾರಣೆ

ಕೂಡಿಗೆ ಸೆಪ್ಟೆಂಬರ್ 17:
ಕೂಡಿಗೆ ಡೈರಿ ಸರ್ಕಲ್ ಬಳಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿದ್ದ ಬಸ್ ನಿಲುಗಡೆ ಸಮಸ್ಯೆಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ಮನವಿಯ ಮೇರೆಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಕ್ಷಣ ಸ್ಪಂದಿಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್‌ಗಳನ್ನು ನಿಗದಿತ ಬಸ್ ನಿಲ್ದಾಣದಲ್ಲೇ ನಿಲ್ಲಿಸುವ ವ್ಯವಸ್ಥೆಗೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ

ಕೂಡಿಗೆ ನಿವಾಸಿ ಹಾಗೂ ಪತ್ರಕರ್ತರಾದ ಗಣೇಶ್ ಅವರು ಸೆಪ್ಟೆಂಬರ್ 16ರಂದು ಡೈರಿ ಸರ್ಕಲ್ ಬಳಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ಕಾಯುವ ಸಂದರ್ಭದಲ್ಲಿ ಎದುರಾಗುತ್ತಿದ್ದ ಸಮಸ್ಯೆಯ ಕುರಿತು ಫೋಟೋಗಳು ಹಾಗೂ ವಿಡಿಯೋಗಳನ್ನು ಕೊಡಗು ಜನ ಅಭಿವೃದ್ಧಿ ಸಮಿತಿಯ ಗಮನಕ್ಕೆ ತಂದಿದ್ದರು

ಡೈರಿ ಮುಂಭಾಗದಲ್ಲಿ ಕೆಲವು ಬಸ್‌ಗಳು ನಿಲುಗಡೆ ಮಾಡುತ್ತಿದ್ದ ಕಾರಣ ಈಗಾಗಲೇ ಇರುವ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಬಸ್‌ಗಳು ಸರಿಯಾಗಿ ಕಾಣಿಸದಿರುವುದು ಕ್ರಾಸ್ ಪ್ರದೇಶದಲ್ಲಿ ಬಸ್‌ಗಳು ಮುಂದೆ–ಹಿಂದೆ ನಿಲ್ಲುವುದರಿಂದ ವಿದ್ಯಾರ್ಥಿಗಳು ರಸ್ತೆ ಕಡೆಗೆ ಓಡಬೇಕಾದ ಪರಿಸ್ಥಿತಿ ಹಾಗೂ ಕೆಲವೊಮ್ಮೆ ಬಸ್ ಸಿಗದೆ ಆಟೋದಲ್ಲಿ ಶಾಲಾ–ಕಾಲೇಜಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗುತ್ತಿರುವ ಬಗ್ಗೆ ಅವರು ಮಾಹಿತಿ ನೀಡಿದ್ದರು

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಕ್ಷಣದ ಹಿತದೃಷ್ಟಿಯಿಂದ ಈ ಮಾಹಿತಿಯನ್ನು ಕೊಡಗು ಜನ ಅಭಿವೃದ್ಧಿ ಸಮಿತಿಯು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವ ಬದಲು ತಕ್ಷಣವೇ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಮ್ಯಾನೇಜರ್ ದರ್ಶನ್ ಸರ್ ಅವರ ಗಮನಕ್ಕೆ ನೇರವಾಗಿ ತಂದಿತ್ತು

ಸಮಸ್ಯೆಯ ಗಂಭೀರತೆಯನ್ನು ಅರಿತು ತಕ್ಷಣ ಸ್ಪಂದಿಸಿದ ಡಿಪೋ ಮ್ಯಾನೇಜರ್ ದರ್ಶನ್ ಸರ್ ಅವರ ಮಾರ್ಗದರ್ಶನದಲ್ಲಿ ಇಂದು ಸೆಪ್ಟೆಂಬರ್ 17ರ ಬೆಳಿಗ್ಗೆ ಕುಶಾಲನಗರ ಕೆಎಸ್‌ಆರ್‌ಟಿಸಿ ಟ್ರಾಫಿಕ್ ಕಂಟ್ರೋಲರ್ (TC) ಅಶೋಕ್ ಸರ್ ಅವರು ಸ್ಥಳದಲ್ಲೇ ಖುದ್ದಾಗಿ ಹಾಜರಿದ್ದು ಕೆಎಸ್‌ಆರ್‌ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರಿಗೆ ಬಸ್ ನಿಲ್ದಾಣದಲ್ಲೇ ಬಸ್‌ಗಳನ್ನು ನಿಲ್ಲಿಸುವಂತೆ ಸೂಚನೆ ನೀಡಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ

ಈ ಸಂದರ್ಭದಲ್ಲಿ ಬಸ್‌ಗಳು ನಿಗದಿತ ಸ್ಥಳದಲ್ಲಿ ನಿಲ್ಲುವಂತೆ ಖುದ್ದಾಗಿ ಗಮನಹರಿಸಿದ ದೃಶ್ಯಗಳು ಕೂಡ ಸಾರ್ವಜನಿಕರ ಗಮನ ಸೆಳೆದಿವೆ

ಸಮಸ್ಯೆ ತಿಳಿಸಿ ಪರಿಹಾರಕ್ಕೆ ಕೈಜೋಡಿಸಿ

ಕೊಡಗು ಜನ ಅಭಿವೃದ್ಧಿ ಸಮಿತಿಯ ಉದ್ದೇಶವೇ ಜನರು ಎದುರಿಸುವ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದು

ಜನರು ತಮ್ಮ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತಂದಾಗ ಅದನ್ನು ರಾಜಕೀಯ ಅಥವಾ ಪ್ರಚಾರದ ವಿಚಾರವನ್ನಾಗಿ ಮಾಡದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗ ಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯಪ್ರವೃತ್ತ ರಾಗುವುದೇ ನಮ್ಮ ಸಮಿತಿಯ ಆಶಯ ಮತ್ತು ಕಾರ್ಯವಿಧಾನ

ಈ ಪ್ರಕರಣದಲ್ಲಿಯೂ ಕೂಡಿಗೆ ನಿವಾಸಿ ಪತ್ರಕರ್ತರಾದ ಗಣೇಶ್ ಅವರು ಸಮಯೋಚಿತವಾಗಿ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದಿದ್ದು ಅವರ ಮಾಹಿತಿಯ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತಲುಪಿಸಲು ಸಾಧ್ಯವಾಯಿತು

*ದರ ಪರಿಣಾಮವಾಗಿ ಕೇವಲ ಒಂದು ದಿನದೊಳಗೆ ಸ್ಥಳೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರಮ ಕೈಗೊಂಡಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ

ಹೃತ್ಪೂರ್ವಕ ಧನ್ಯವಾದಗಳು

ವಿದ್ಯಾರ್ಥಿಗಳ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದ ಕೂಡಿಗೆ ನಿವಾಸಿ ಹಾಗೂ ಪತ್ರಕರ್ತರಾದ ಗಣೇಶ್ ಅವರಿಗೆ ಕೊಡಗು ಜನ ಅಭಿವೃದ್ಧಿ ಸಮಿತಿಯ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು

ಅದೇ ರೀತಿ ವಿಷಯವನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ ತಮ್ಮ ಮಾರ್ಗದರ್ಶನದ ಮೂಲಕ ಶೀಘ್ರವಾಗಿ ಕ್ರಮ ಕೈಗೊಳ್ಳಲು ಸಹಕರಿಸಿದ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಮ್ಯಾನೇಜರ್ ದರ್ಶನ್ ಸರ್ ಅವರಿಗೆ ಹಾಗೂ ಸ್ಥಳಕ್ಕೆ ಖುದ್ದಾಗಿ ಆಗಮಿಸಿ ಬಸ್ ನಿಲುಗಡೆ ವ್ಯವಸ್ಥೆಯನ್ನು ಪರಿಶೀಲಿಸಿ ಚಾಲಕರು–ನಿರ್ವಾಹಕರಿಗೆ ಸೂಕ್ತ ಸೂಚನೆ ನೀಡಿದ ಕುಶಾಲನಗರ ಕೆಎಸ್‌ಆರ್‌ಟಿಸಿ ಟ್ರಾಫಿಕ್ ಕಂಟ್ರೋಲರ್ ಅಶೋಕ್ ಸರ್ ಅವರಿಗೆ ಅಭಿನಂದನೆಗಳೊಂದಿಗೆ ಕೃತಜ್ಞತೆ ಸಲ್ಲಿಸುತ್ತೇವೆ

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸ್ಪಂದಿಸಿದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಸ್ಥಳೀಯ ನಿವಾಸಿಗಳು ಹಾಗೂ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದ ಎಲ್ಲರಿಗೂ ಧನ್ಯವಾದಗಳು

ಮಕ್ಕಳ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ
ಜನರ ಸಮಸ್ಯೆ ನಮ್ಮ ಗಮನಕ್ಕೆ ಬಂದಾಗಪರಿಹಾರದ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ನಮ್ಮ ಕರ್ತವ್ಯ

ಜನರಿಂದ ಸಮಸ್ಯೆ ಸಮಿತಿಯಿಂದ ಮನವಿ ಅಧಿಕಾರಿಗಳಿಂದ ಸ್ಪಂದನೆ ಜನರಿಗೆ ಪರಿಹಾರ ಇದೇ ಕೊಡಗು ಜನ ಅಭಿವೃದ್ಧಿ ಸಮಿತಿಯ ಕಾರ್ಯದ ಆಶಯ

ವಿದ್ಯಾರ್ಥಿಗಳ ಹಿತಕ್ಕಾಗಿ
ಸಾರ್ವಜನಿಕರ ಅನುಕೂಲಕ್ಕಾಗಿ
ಕೊಡಗಿನ ಅಭಿವೃದ್ಧಿಗಾಗಿ
ನಮ್ಮ ಪ್ರಯತ್ನ ನಿರಂತರ

✍️ ಎಂ.ಎಂ. ದಾವುದ್

📞 9945375180

WhatsApp

Join Now

Telegram

Join Now

Instagram

Join Now