--Ads--

ಪತ್ರಕರ್ತ ಉದಯಕುಮಾರ್ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರಧಾನ

On: August 10, 2026 4:49 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪತ್ರಕರ್ತ ಉದಯಕುಮಾರ್ ಅವರಿಗೆ ಖಾದ್ರಿ ಶಾಮಣ್ಣ ಪ್ರಶಸ್ತಿ ಪ್ರದಾನ 

ಬೆಂಗಳೂರು:ಪ್ರಜಾವಾಣಿ ಪತ್ರಿಕೆಯಲ್ಲಿ ಹನ್ನೆರಡು ವರ್ಷಗಳ ಕಾಲ ಸಹಾಯಕ ಸಂಪಾದಕರಾಗಿ ಪತ್ರಿಕೋದ್ಯಮ ಸೇವೆ ಸಲ್ಲಿಸಿದ್ದ ಉದಯಕುಮಾರ್ ರವರಿಗೆ  ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಜಾವಾಣಿಯ ಪತ್ರಿಕೆಯ ಖಾದ್ರಿ ಶಾಮಣ್ಣ ಟ್ರಸ್ಟ್ ನವರ ವತಿಯಿಂದ ಅವರ ಹೆಸರಿನ ಪ್ರಶಸ್ತಿ ನೀಡಿ ಗೌರವಿಸಿದರು.

ಸಭಾಂಗಣದಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ ಹಿಂದಿನಿಂದಲೂ ಕೆಲಸ ಮಾಡಿದ್ದ ಮತ್ತು ಅವರ ಜೊತೆಯಲ್ಲಿ ಕೆಲಸ ಮಾಡಿದ್ದ ಎಲ್ಲರೂ ಸೇರಿ ಬೇರೆ ಪತ್ರಿಕೆಯ ಸಂಪಾದಕರು ಮತ್ತು ಹಿರಿಯ ಪತ್ರಕರ್ತರು ಸೇರಿದ್ದು ತುಂಬಾ ಖುಷಿಯೆನಿಸಿತು.

ಈ ಸಮಾರಂಭಕ್ಕೆ  ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯನವರು, ಈ ಕಾಲೇಜಿನ ಅಧ್ಯಕ್ಷರು ಆಗಿರುವ ಹೂಡೇ ಪಿ ಕೃಷ್ಣಾ, ಅಸ್ಸಾಂ ವಿಶ್ವ ವಿದ್ಯಾಲಯದ ಉಪ ಕುಲಪತಿಗಳಾಗಿರುವ ನಾಗರಾಜ್ ಸರ್, ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ ಸರ್ ಮುಂತಾದ ಅನೇಕ ಗಣ್ಯರು ಆಗಮಿಸಿ ಯಶಸ್ವಿ ಗೊಳಿಸಿದರು.

ಆಗಿನ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ವಿವರಿಸಿ ಈಗಿನ ವ್ಯಾಪಾರೀಕರಣ ಪತ್ರಿಕೋದ್ಯಮದ ಬಗ್ಗೆ ಇರುವ ಬದಲಾವಣೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಒಳ್ಳೆಯ ಮಾಹಿತಿಗಳನ್ನು ನೀಡಿದರು.

ರಾಜ್ಯದ ಎಲ್ಲಾ ಪತ್ರಿಕೆಗಳ ಹಿರಿಯ ಪತ್ರಕರ್ತರು ಸೇರಿದ್ದು ತುಂಬಾ ಖುಷಿಯೆನಿಸಿತು. ಉದಯ ಕುಮಾರ್ ರವರಿಗೆ ಅಭಿನಂದನೆಗಳು

💐 ಶಶಿಕಲಾ, ಹಿರಿಯ ಪತ್ರಕರ್ತರು

&&&&&&&&&&&&&&&&&&&&&&&&&&&&

ಯಾವುದೀ ಉಕ್ಕಿನ ಹಕ್ಕಿ
ಹೊತ್ತೊಯ್ಯುತ್ತಿದೆ ಇಷ್ಟೊಂದು ಸೀತೆಯರ
ಅಪಹರಿಸಿ…

ಮನೆಯೆಂಬ ನಾಲ್ಕುಗೋಡೆಯ ಬಂಗಾರ
ಪಂಜರದಿಂದ ಬಿಡುಗಡೆಯಗೊಳಿಸಿ
ತೇಲುವ ಮುಗಿಲಲ್ಲಿ ನಲಿಸಿ
ಹಸಿರು ಬಯಲನ್ನು ಸುತ್ತಿಸಿ
ಸಮುದ್ರೋಲಂಗನ ಮಾಡಿಸಿ, ತಂದಿಳಿಸಿದೆ
ಅಂಡಮಾನಿನ ಸುಂದರ ದ್ವೀಪಕ್ಕೆ

ಜಲರಾಶಿಯಲಿ ಮತ್ಸ್ಯಕನ್ಯರ ಹಾಗೆ ಈಜಿಸಿ
ಸಾಗರದ ನೀರಿನಲಿ
ಬರಪೂರ ಮೀಯಿಸಿ
ಕಡಲ ಕಿನಾರೆಯ ಮರಳ
ಮೇಲೆಜ್ಜೆಗಳ ಮೂಡಿಸಿ
ತೇಲಿಸಿ ಹರುಷದಲಿ
ಬಂದಿಳಿದರು ಮತ್ತೆ ಉಕ್ಕಿನ ಹಕ್ಕಿಯನೆಗಲ ಹೇರಿ
ಬಂದ ನೆಲಕೆ
ನಮಗಿನ್ನು ಅಂಡಮಾನಿನ
ಮುಗಿಯದ ಕನವರಿಕೆ

ಮತ್ತದೇ ಅಡಿಗೆ ಕೋಣೆ
ಸೀದ ಒಗ್ಗರಣೆ
ಊಟದೊಂದಿಗೆ ನೆಂಚಿಕೊಳುವ ಉಪ್ಪಿನ ಕಾಯ ರುಚಿಯಂತೆ
ಎಲ್ಲರೊಡಗೂಡಿ ನಲಿದ
ಅಂಡಮಾನಿನ ಪ್ರಸಂಗ
ಎಲ್ಲರೊಡಗೂಡಿ ಕಳೆದ ಸತ್ಸಂಗ

ಮಮತಾ ವಾರನಹಳ್ಳಿ

WhatsApp

Join Now

Telegram

Join Now

Instagram

Join Now