ವಿಜಯ ದರ್ಪಣ ನ್ಯೂಸ್….
ದೇವರನ್ನು ದೇವಮಾನವರಲ್ಲಿ ಕಾಣಬಹುದು ಮೋಹನ್ ಕುಮಾರ್

ದೇವನಹಳ್ಳಿ ತಾಲ್ಲೂಕು: ದೇವರನ್ನು ಮನುಷ್ಯರ ರೂಪದಲ್ಲಿ ಕಾಣಬಹುದು. ಉದಾಹರಣೆಗೆ ಜಗಜ್ಯೋತಿ ಅಕ್ಕಮಹಾದೇವಿ ಬಸವಣ್ಣ ಕೈವಾರ ತಾತಯ್ಯ ವೀರ ಬ್ರಹ್ಮೇಂದ್ರ ವೇಮಣ್ಣ ಕಲಿಯುಗ ಬಸವಣ್ಣ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು ತಮ್ಮ ತತ್ವಗಳ ಆಧಾರದ ಮೇಲೆ ದೇವಮಾನವರಾದರು ಎಂದು ರೋಟರಿ ಸಂಘದ ಅಧ್ಯಕ್ಷರಾದ ಮೋಹನ್ ಕುಮಾರ್ ತಿಳಿಸಿದರು.
ವಿಜಯಪುರ ಪಟ್ಟಣದಲ್ಲಿರುವ ಪುರಾಣ ಪ್ರಸಿದ್ಧ ಅರ್ಜುನ ನಿರ್ಮಿತ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಆವರಣದಲ್ಲಿ ಶ್ರೀ ಚೆನ್ನಕೇಶವ ಸ್ವಾಮಿ ವ್ಯವಸ್ಥಾಪನ ಸಮಿತಿಯ ಸಹಕಾರದೊಂದಿಗೆ ಶ್ರೀ ಕೃಷ್ಣ ಯತಿಂದ್ರ ಸೇವಾ ಟ್ರಸ್ಟ್ ರವರ ವತಿಯಿಂದ ಶ್ರೀ ಶ್ರೀ ಶ್ರೀಮಂತ ಭಗವದ್ಗೀತಾ ಪಾರಾಯಣ ಶ್ರೀ ಶ್ರೀ ಶ್ರೀ ಕೈವಾರ ಯೋಗಿ ನಾರೇಯಣ ಯತೀಂದ್ರರ ಹಾಗೂ ಕನಕ ಪುರಂದರ
ಗೀತಾ ತತ್ವಾಮೃತ ರಸಧಾರೆಯ 254 ನೇ ಕಾರ್ಯಕ್ರಮ ಹಾಗೂ ಶ್ರೀಷ್ಣ ಮಾಸಿಕ ದ್ವಾದಶಿ ವಿಚಾರಧಾರೆಯ ಗೋಷ್ಟಿಯ 205 ನೇ ಕಾರ್ಯಕ್ರಮದಲ್ಲಿ ವೇದಬ್ರಹ್ಮ ಅನಂತ್ ಕುಮಾರ್ ಭಟ್ಟ ತುಳಸಿದಾಸರ ಜಯಂತಿಯ ಬಗ್ಗೆ ಮಾತನಾಡುತ್ತಾ ತುಳಸಿ ದಾಸರು ಆತ್ಮಾರಾಮ್ ದುಬೆ ಮತ್ತು ಹುಳಸಿ ದಂಪತಿಗೆ ಮಗನಾಗಿ ಜನಿಸಿದರು. ಮೂಲಾ ನಕ್ಷತ್ರದಲ್ಲಿ ಹುಟ್ಟಿದ್ದರಿಂದ ಬಾಲ್ಯದಲ್ಲೇ ಹೆತ್ತವರಿಂದ ದೂರಾದರು.ಮೂಲ ಹೆಸರು: ರಾಮಬೋಲ ಎಂಬ ಹೆಸರಿತ್ತು. ಹುಟ್ಟುವಾಗ ಬಾಯಲ್ಲಿ ರಾಮ ಎಂಬ ಪದ ಬಂದ ಕಾರಣ ಈ ಹೆಸರಿಡಲಾಯಿತು.
ಗುರುಗಳಾದ ನರಹರಿದಾಸರು ತುಳಸಿ ದಾಸರಿಗೆ ದೀಕ್ಷೆ ನೀಡಿ ಬೆಳೆಸಿದರು. ಆಗ ಇವರಿಗೆ ತುಳಸಿದಾಸ ಎಂದು
ಮರುನಾಮಕರಣವಾಯಿತು. ವಿವಾಹ ಮತ್ತು ವೈರಾಗ್ಯರತ್ ನವಲಿ ಎಂಬಾಕೆಯೊಂದಿಗೆ ವಿವಾಹವಾಯಿತು,
ಹೆಂಡತಿಯ ಮೇಲಿನ ಅತಿಯಾದ ಮೋಹ ದಿಂದ ಒಮ್ಮೆ ಆಕೆಯ ತವರುಮನೆಗೆ ರಾತ್ರೋರಾತ್ರಿ ಹೋದರು.ರತ್ನಾಮತಿ ಇವರನ್ನು ಹಳಿದು, “ದೇಹದ ಮೇಲಿರುವ ಪ್ರೀತಿ ಭಗವಂತನ ಮೇಲಿದ್ದರೆ ಉದ್ಧಾರವಾಗುತ್ತಿತ್ತು” ಎಂದಳು.ಈ ಮಾತು ಮನಸ್ಸಿಗೆ ತಾಕಿ, ಸಂಸಾರ ತ್ಯಜಿಸಿ ಸಂಪೂರ್ಣ ಆಧ್ಯಾತ್ಮಿಕ ಮಾರ್ಗ ಹಿಡಿದರು.
ಪ್ರಮುಖ ಕೃತಿಗಳು ರಾಮಚರಿತಮಾನಸ: ಜನಸಾಮಾನ್ಯರಿಗೆ ರಾಮಕಥೆ ತಿಳಿಯಲು ಅವಧಿ ಭಾಷೆಯಲ್ಲಿ ಬರೆದ ಮೇಕಾವ್ಯ.ಹನುಮಾನ್ ಚಾಲೀಸಾ: ಹನುಮಂತನ ಸ್ತುತಿಗಾಗಿ ರಚಿಸಿದ ಜನಪ್ರಿಯ ಕೃತಿ.ವಿನಯ ಪತ್ರಿಕೆ, ಕಿತಾವಳೀ ಮತ್ತು ದೋಹಾವಳಿ ಮುಂತಾದವು.ಮುಕ್ತಿತುಳಸಿದಾಸರು ಕ್ರಿ.ಶ. 1623ರಲ್ಲಿ ವಾರಣಾಸಿಯ ಅಸಿಘಾಟ್ನಲ್ಲಿ ತಮ್ಮ ದೇಹತ್ಯಾಗ ಮಾಡಿದರು.
ಈ ಕಾರ್ಯಕ್ರಮದಲ್ಲಿ ವಕೀಲ ಡಿಎಂ ಮುನಿಯಪ್ಪ ಮಾತನಾಡುತ್ತಾ ಸುಮಾರು 21 ವರ್ಷಗಳಿಂದ ಸತ್ಸಂಗ ಯಶಸ್ವಿಯಾಗಿ ಮೂಡಿ ಬರುತ್ತಿದೆ. ಈ ಸತ್ಸಂಗ ಭಾಗವಹಿಸಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭಕ್ತಿ ಮಾರ್ಗದಲ್ಲಿ ನಡೆಯಬೇಕೆಂದು ಕರೆ ನೀಡುತ್ತಾ ಈ ಸತ್ಸಂಗದಲ್ಲಿ ಕಾನೂನು ಶಿಬಿರವನ್ನು ಏರ್ಪಡಿಸಬೇಕೆಂದು ತಿಳಿಯಪಡಿಸಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಮೇಶ್ ಸ್ವಾಮಿಗಳು ವಹಿಸಿದರು. ಮುಖ್ಯ ಅತಿಥಿಗಳಾಗಿ ಜಯಮ್ಮ ಮತ್ತು ಶ್ರೀ ಸೀತಾರಾಮಯ್ಯ ಸೌದೆ ವ್ಯಾಪಾರಿಗಳಾದ ಅಂಜಿನಪ್ಪ ರತ್ನಮ್ಮ ರಾಮದಾಸ್ ಅನಿತಾ ರಾಮದಾಸ್ ಅನಿತಾ ರಾಮದಾಸ್ ವಿ.ಎನ್ ವೆಂಕಟೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಐದು ಬಡ ಮಹಿಳೆಯರಿಗೆ ಕಂಬಳಿ 10 ಬಡ ಮಹಿಳೆಯರಿಗೆ ಸೀರೆ ಕುಪ್ಪಸ ಮೂರು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗುಗಳನ್ನುವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕರಾದ ಎಂವಿ ನಾಯ್ಡು ಅನಿಲ್ ಕುಮಾರ್ ರವರ ವಾದ್ಯದೊಂದಿಗೆ ಮಹಾತ್ಮಾಂಜಿನೇಯ ಶ್ರೀಮತಿ ಸೀತಾಲಕ್ಷ್ಮಿ ಭಾಸ್ಕರ್ ಮುನಿರಾಜು ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು.










