ವಿಜಯ ದರ್ಪಣ ನ್ಯೂಸ್…..
ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಓದಿಕೆ ವಿತರಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ನವರ ಹುಟ್ಟುಹಬ್ಬ ಆಚರಣೆ

ತಾಂಡವಪುರ ಆಗಸ್ಟ್ 12 : ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹುಟ್ಟು ಹಬ್ಬದ ಪ್ರಯುಕ್ತ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗ್ಯಾರಂಟಿ ಯೋಜನೆಗಳ ಸಮಿತಿಯ ಅಧ್ಯಕ್ಷ ಕೆ ಮಾರುತಿ ಅವರ ನೇತೃತ್ವದಲ್ಲಿ ಮೈಸೂರಿನ ಕೆ ಆರ್, ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಸಿಹಿ ಹಾಗೂ ಬೇರಸಿಟ್ ವಿತರಣೆ ಮಾಡುವ ಮೂಲಕ ಬಹಳ ವಿಜೃಂಭಣೆಯಿಂದ ಸಿದ್ದರಾಮಯ್ಯನವರ ಹುಟ್ಟು ಹಬ್ಬವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಯೋಜನಾ ಸಮಿತಿಯ ಅಧ್ಯಕ್ಷರು ಹಾಗೂ ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಆದ ಕೆ ಮಾರುತಿರವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದಾ ಬಡವರ ಪರವಾಗಿ ಹಿಂದುಳಿದವರ ಪರವಾಗಿ ದೀನ ದಲಿತರ ಪರವಾಗಿ ರೈತರ ಪರವಾಗಿ ಸದಾ ಚಿಂತನೆ ಮಾಡುವಂತಹ ಮಹಾ ನಾಯಕ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಶ್ರಮವಹಿಸಿದಂತ ಮಹಾ ನಾಯಕ ಸಿದ್ದರಾಮಯ್ಯನವರು ಅವರ ಹುಟ್ಟು ಹಬ್ಬದ ಪ್ರಯುಕ್ತ ನಾವು ನಮ್ಮ ಕೈಲಾದ ಮಟ್ಟಿಗೆ ಬಡವರಿಗೆ ಬಡ ರೋಗಿಗಳಿಗೆ ಸೇವೆ ಮಾಡುವಂತಹ ಮನೋಭಾವ ಇಟ್ಕೊಂಡು ಇವತ್ತು ರೋಗಿಗಳಿಗೆ ಬಿರ್ಸಿಟ್ ಸಿಹಿ ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸುವ ಮೂಲಕ ಅವರ ಹೆಸರಿನಲ್ಲಿ ಬಡ ರೋಗಿಗಳಿಗೆ ನೆರವಾಗಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಮಾರುತಿ ಹಾಗೂ ಜಿಲ್ಲಾಕಾಂಗ್ರೆಸ್ ಉಪಾಧ್ಯಕ್ಷ ಕಗ್ಗಲುಂಡಿ ಮಾದೇವರವರು, ಜಿಲ್ಲಾ ಕಾರ್ಯದರ್ಶಿ ಓಲೆ ನಾಗರಾಜ್ ರವರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಕುಳ್ಳಯ್ಯ್ರವರು ಕೆಪಿಸಿಸಿ ರಾಜ್ಯ ಪ್ರದಾನಕಾರ್ಯದರ್ಶಿ ಒಬಿಸಿ ವಿಭಾಗ ಹೆಜ್ಜಿಗೆ ಹೆಚ್ ಡಿ, ಪ್ರಸನ್ನಕುಮಾರ್ ಬ್ಲಾಕ್ ಒಬಿಸಿ ಅಧ್ಯಕ್ಷರು ರಂಗಸ್ವಾಮಿ ಕಂದೇಗಲಾ ಕೃಷ್ಣಮೂರ್ತಿ ,ಯೋಗೇಶ್ ಗೌಡ ಕೊಂಗಳ್ಳಿ ಸೋಮಣ್ಣ M, ಕೊಂಗಳ್ಳಿ ಹಾಗು ಮುಂತಾದವರು ಹಾಜರಿದ್ದರು
++++++++++++++++++++++++++++++++++
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜಮುಖಿ ಕಾರ್ಯಗಳ ಮಾಡುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟುಹಬ್ಬ ಆಚರಣೆ

ತಾಂಡವಪುರ ಆಗಸ್ಟ್ 12: ಇಂದು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರುಗಳು ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರ ಹುಟ್ಟುಹಬ್ಬವನ್ನು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಸಿದ್ರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಬ್ಲಾಕ್ ಹಾಗೂ ಡಾ ಯತೀಂದ್ರ ಸಿದ್ರಾಮಯ್ಯ ಅಭಿಮಾನಿ ಬಳಗದಿಂದ ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜ್ಯ ಸಲ್ಲಿಸಿ ಸಿಹಿ ಹಂಚಿ ಹಾಗೂ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ನೂತನ ಸಚಿವರಿಗೆ ಶುಭ ಹಾರೈಸಿದರು
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ದೇವರು ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ಸ್ಥಾನಮಾನಗಳು ಅವರಿಗೆ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಅವರ ಹುಟ್ಟು ಹಬ್ಬದ ಅಂಗವಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಡಾ ಯತೀಂದ್ರ ಸಿದ್ದರಾಮಯ್ಯನವರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಸಿ ಆರ್ ಮಹದೇವ್, ಅಧ್ಯಕ್ಷ ಬಿಳುಗಲಿ ಕುಮಾರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿ ಮರಳ್ಳಿ ಜಗದೀಶ್ವರ್ ಪುರುಷೋತ್ತಮ್ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ,ಆರೋಪುರ ಶಿವಣ್ಣ, ನಾಗರಾಜು ಮೂಡಳ್ಳಿ ಮಹದೇವಸ್ವಾಮಿ, ಸುತ್ತೂರು ಸೋಮಣ್ಣ, ಸುರೇಶ್ ಬಾಬು, ಶ್ರೀಕಂಠೇಶ್ವರ ದೇವಾಲಯದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಚಿನ್ನದ ಗುಡಿಹುಂಡಿ ಬಸವೇಗೌಡ ಹೆಜ್ಜೆಗೆ ಪುಟ್ಟಣ್ಣ ,ನಂಜನಗೂಡು ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಮುದ್ದು ಮಾದೇಗೌಡ ಎಪಿಎಂಸಿ ತೊರೆಮಾವು ಟಿಡಿ ಗಿರೀಶ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿ ಬಿಪಿ ಮಹದೇವ್ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆಎಸ್ ಹುಂಡಿ ರವಿ ಗುರುಪಾದ ಸ್ವಾಮಿ ಶೃತಿ ಬೀರಯ್ಯ ರವಿಕುಮಾರ್ ತಗಡೂರು ಗಾರ್ಡನ್ ಮಹೇಶ್ ನಗರಲ್ಲೇ ಶ್ರೀನಿವಾಸ್ ಮೂರ್ತಿ ಮನು ಗ್ಯಾರಂಟಿ ಯೋಜನೆಯ ಸಮಿತಿ ಸದಸ್ಯ ಕೆ ಎಸ್ ಉಂಡಿ ರವಿ ಪುಟ್ಟಸ್ವಾಮಿ ಚಿನ್ನಂಬಳ್ಳಿ ದೊರೆಸ್ವಾಮಿ ಅಲಗಂಚಿ ಚಿನ್ನಸ್ವಾಮಿ ಮಹೇಶ್ ಮರಳೂರು ಗಿರೀಶ್ ಸೇರಿದಂತೆ ಇನ್ನು ಅನೇಕ ಮುಖಂಡರುಗಳು ಈ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
####################₹#₹₹₹₹₹₹₹₹₹₹
ಡಾ ಯತೀಂದ್ರ ಸಿದ್ದರಾಮಯ್ಯ ಫೌಂಡೇಶನ್ ವತಿಯಿಂದ ನಿಕಟ ಪೂರ್ವ ಸಿಎಂ ಸಿದ್ದರಾಮಯ್ಯ ರವರ ಹುಟ್ಟುಹಬ್ಬ ಆಚರಣೆ

ತಾಂಡವಪುರ ಆಗಸ್ಟ್ 12 ಮೈಸೂರು ಜಿಲ್ಲೆ: ನಂಜನಗೂಡು ತಾಲ್ಲೂಕು ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಡಾ ಯತೀಂದ್ರ ಸಿದ್ದರಾಮಯ್ಯ ರವರ ಫೌಂಡೇಶನ್ ವತಿಯಿಂದ ಫೌಂಡೇಶನ್ ಸಂಸ್ಥಾಪಕ ಕೆಂಪಿ ಸಿದ್ದನ ಹುಂಡಿ ರವಿಕುಮಾರ್ ಸಹಯೋಗದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಹುಟ್ಟುಹಬ್ಬವನ್ನು ಶ್ರೀಕಂಟೇಶ್ವರ ದೇವಾಲಯದ ಮುಂಭಾಗ ಕೇಕ್ ಕತ್ತರಿಸಿ ಸಿಹಿ ವಿತರಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಫೌಂಡೇಶನ್ ಸಂಸ್ಥಾಪಕ ರವಿಕುಮಾರ್ ಮಾತನಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಸಮಗ್ರ ಅಭಿವೃದ್ಧಿಗೆ ಹಾಗೂ ಬಡವರ ಪರವಾಗಿ ಶ್ರಮ ವಹಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದಂತಹ ಮಹಾ ನಾಯಕ ಅವರು ಇನ್ನೂ ರಾಜಕೀಯದಲ್ಲಿದ್ದು ಪಕ್ಷದ ಸಂಘಟನೆ ಮತ್ತು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅವರಿಗೆ ಶಕ್ತಿ ಬರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ ಅವರು ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ರವರು ಡಾ ಯತೀಂದ್ರ ಸಿದ್ದರಾಮಯ್ಯ ಫೌಂಡೇಶನ್ ಅಧ್ಯಕ್ಷ ಕೆ ಆರ್ ರವಿಕುಮಾರ್ ಬಿಲಿಗೆರೆ, ಗೋಲ್ಡ್ ಸುರೇಶ್, ಬೀರಯ್ಯ ಗ್ಯಾರಂಟಿ ಸಮಿತಿ ಯೋಜನೆಯ ಸದಸ್ಯ ರವಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಕಾರ್ಯಕರ್ತರು ಮತ್ತಿತರು ಹಾಜರಿದ್ದರು











