--Ads--

ಶ್ರೀ ಮಹೇಶ್ವರಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ 

On: August 12, 2026 1:49 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀ ಮಹೇಶ್ವರಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ 

ದೇವನಹಳ್ಳಿ ತಾಲ್ಲೂಕು:ವಿಜಯಪುರ ಪಟ್ಟಣದ ಸಮೀಪದಲ್ಲಿರುವ ವೆಂಕಟೇನಹಳ್ಳಿ ತೋಟಗಳ ಬಳಿ ನೆಲೆಸಿರುವ ಶ್ರೀ ಮಹೇಶ್ವರಮ್ಮ ದೇವಿಯವರ ಸನ್ನಿಧಿಯಲ್ಲಿ ಹೋಮದೊಂದಿಗೆ ದೇವಿಗೆ ವಿಶೇಷ ಅಲಂಕಾರದೊಂದಿಗೆ ಹೋಮ ಮಹಾಮಂಗಳಾರತಿ ಬೆಳಗಿ ತೀರ್ಥ ಪ್ರಸಾದ ವಿತರಿಸಲಾಯಿತು.

ಈ ಪೂಜಾ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಎನ್ ಪ್ರಕಾಶ್, ಪುರಸಭಾ ಸದಸ್ಯರಾದ ಬೈರೇಗೌಡ, ನಂದಕುಮಾರ್ ,ಶ್ರೀ ಕೃಷ್ಣ ಯತೀಂದ್ರ ಸೇವಾ ಟ್ರಸ್ಟ್ ಸಂಚಾಲಕ ವಿ ಎನ್ ವೆಂಕಟೇಶ್ ಪದಾಧಿಕಾರಿಗಳಾದ ನಾಗಯ್ಯ ದೇವಾಲಯ ವ್ಯವಸ್ಥಾಪಕ ವಿಎನ್ ಪ್ರಕಾಶ್ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಮಂಡಳಿಯ ಅಧ್ಯಕ್ಷ ಕೆ ವಿ ಮುನಿರಾಜು ,ಅಂಜನಪ್ಪ ಶ್ರೀ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯ ಅಧ್ಯಕ್ಷ ಮುನಿರಾಜು ವಿ ವಿಶ್ವನಾಥ್ ಮುನಿ ವೀರಣ್ಣ ಪುರಸಭಾ ಮಾಜಿ ಸದಸ್ಯ ಜಿ. ಎಂ ಚಂದ್ರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು

ಈ ದಿನದ ಭಕ್ತಿ ಸೇವೆಯನ್ನು ಶ್ರೀಮತಿ ಜಯಲಕ್ಷ್ಮಮ್ಮ ಶ್ರೀ N. ನಾಗರಾಜಪ್ಪನವರು ಮತ್ತು ಮಕ್ಕಳು ನೆರವೇರಿಸಿದರು.

&&&&&&&&&&&&&&&&&&&&&&&&&&&&&

ವಿಜಯಪುರ ಪಟ್ಟಣದ ಶ್ರೀ ಸಂಗಮ ಬಸವೇಶ್ವರ (ಸಂಗಮೇಶ್ವರ) ಸ್ವಾಮಿಯವರ ದೇವಾಲಯದಲ್ಲಿ ಭೀಮನ ಅಮಾವಾಸ್ಯೆಯ ಅಂಗವಾಗಿ ಸ್ವಾಮಿಯವರಿಗೆ ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಏರ್ಪಡಿಸಿದ್ದರು. 🙏🙏🙏

₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹₹

ಭೀಮನ ಅಮಾವಾಸ್ಯೆ ಪ್ರಯುಕ್ತ  ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಪೂಜೆ 

ವಿಜಯಪುರ ಪಟ್ಟಣದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಧರ್ಮರಾಯಸ್ವಾಮಿ ದೇವಾಲಯದ ಅಧ್ಯಕ್ಷ ಕೆ.ವಿ ಮುನಿರಾಜ್ ಮಾತನಾಡುತ್ತಾ ಒಂದು ಭೀಮನ ಅಮಾವಾಸ್ಯೆ ವ್ರತವನ್ನು ಆಯಾ ಪ್ರದೇಶಗಳಿಗೆ, ಅಲ್ಲಿನ ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸುತ್ತಾರೆ. ಅದರಂತೆ ಹೆಸರು ಕೂಡ ಬದಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ದಿವಸಿ ಅಮಾವಾಸ್ಯೆ ಎಂದು, ದಕ್ಷಿಣ ಕನ್ನಡದಲ್ಲಿ ಆಟಿ ಅಮಾವಾಸ್ಯೆ ಎಂದು, ಉತ್ತರ ಕರ್ನಾಟಕದಲ್ಲಿ ಕೋಡಿ ಅಮಾವಾಸ್ಯೆ ಎಂದು. ಮೈಸೂರು ಬೆಂಗಳೂರು ಪ್ರಾಂತ್ಯದಲ್ಲಿ ಭೀಮನ ಅಮಾವಾಸ್ಯೆ ಅಥವಾ ಪತಿ ಸಂಜೀವಿನಿ ವ್ರತ ಎಂದು ಕರೆಯುತ್ತಾರೆ.

ಈ ವ್ರತವನ್ನು ವಿವಾಹಿತ ಮಹಿಳೆಯರಷ್ಟೇ ಅಲ್ಲದೆ, ಅವಿವಾಹಿತ ಕನ್ಯೆಯರು ಕೂಡ ಸದ್ಗುಣ ಸಂಪನ್ನನಾದ ಗಂಡ ಸಿಗಲಿ, ನನ್ನ ವೈವಾಹಿಕ ಜೀವನ ಸುಖ – ಸಂತೋಷದಿಂದ ಇರಲಿ ಎಂದು ಪ್ರಾರ್ಥಿಸಿ ಉಮಾ ಮಹೇಶ್ವರರ ಪೂಜೆಯನ್ನು ಮಾಡುತ್ತಾರೆ.

ಈ ಕಾರ್ಯಕ್ರಮದಲ್ಲಿ ದೇವಾಲಯ ಯಜಮಾನ ಸಿ.ನಾರಾಯಣಪ್ಪ, ಗಣಾಚಾರಿಗಳಾದ ರವಿ ಗೌಡ, ರಮೇಶ್, ನಂಜುಂಡಪ್ಪ ,ಕೆ ಎಮ್ ಮಧು ಶ್ರೀ ಧರ್ಮರಾಯಸ್ವಾಮಿ ಭಕ್ತ ಮಂಡಳಿಯ ಶ್ರೀನಿವಾಸ್ ಬಿರ್ಲಾ ನಾಗರಾಜು ಪುರಸಭಾ ಸದಸ್ಯರಾದ ನಂದಕುಮಾರ್, ಎಂ ರಾಜಣ್ಣ, ಮಂಜುನಾಥ್ ಎಂ ಡಿ ,ವಿಜಯಕುಮಾರ್ ಪಿಸಿಕೆ ವಿಶ್ವನಾಥ್ ಮಾಮ , ಸೌದೆ ವ್ಯಾಪಾರಿ ಆಂಜನಪ್ಪ, ಕನಕರಾಜು ಪುರಸಭಾ ಮಾಜಿ ಸದಸ್ಯರಾದ ಜಿಎಂ ಚಂದ್ರು ,ಮುನಿಚಿನ್ನಪ್ಪ, ವಿ. ಎಂ ನಾಗರಾಜು, ಆರ್ ಎಂ ಸಿ ಟಿ ಮಂಜು, ಯಜಮಾನರು ಗೌಡರು ಗಣಾಚಾರಿಗಳು ಕುಲಸ್ಥರು ವೀರ ಕುಮಾರ ಮಕ್ಕಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಭಕ್ತಿ ಸಭೆಯನ್ನು
ಲೇಟ್ ಆಂಡ್ಯಪ್ಪನವರು ಮತ್ತು ಮಕ್ಕಳು,
ಮುನಿಆಂಡ್ಯಪ್ಪ ಮತ್ತುಮಕ್ಕಳು ,ಮುನಿ ರಾಮಪ್ಪ ಮತ್ತು ಮಕ್ಕಳು.

 

 

WhatsApp

Join Now

Telegram

Join Now

Instagram

Join Now