ವಿಜಯ ದರ್ಪಣ ನ್ಯೂಸ್…..
ಹಿರಿಯ ನಾಗರಿಕರಿಗೆ ಆರ್ಥಿಕವಾಗಿ ಸಹಾಯಧನ.

ದೇವನಹಳ್ಳಿ ತಾಲ್ಲೂಕು: ವಿಜಯಪುರ ಪಟ್ಟಣದ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಮೇಲೂರು ಮಾಳಿಗೆಪ್ಪ ಟ್ರಸ್ಟ್ ನ ವಿಜಯಪುರ ಎಜುಕೇಶನ್ ಸೊಸೈಟಿಯ ಆಶ್ರಯದಲ್ಲಿ ಸಹಾಯ ದಿನವನ್ನು ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕದಳಿ ವೇದಿಕೆ ಜಿಲ್ಲಾಧ್ಯಕ್ಷ ಬಿ ಸ್ವರ್ಣ ಗೌರಿ ನೆರವೇರಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡುತ್ತಾ ವಿಜಯಪುರ ಎಜುಕೇಶನ್ ಸೊಸೈಟಿಯಿಂದ ಮೇಲೂರು ಮಾಳಿಗೆಪ್ಪನವರ ಆಶಯದಂತೆ ವಿದ್ಯಾರ್ಥಿಗಳಿಗೆ ವೃದ್ಧರಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯಧನ ನೀಡುವುದೇ ಮೂಲ ಉದ್ದೇಶವಾಗಿತ್ತು ಎಂದು ತಿಳಿಸುತ್ತಾ 39 ಮಂದಿಗೆ 2000ಗಳಂತೆ ಆರ್ಥಿಕ ಸಹಾಯ ನೀಡಲಾಯಿತು.

ಹಿರಿಯ ನಾಗರಿಕರಾದ ಶ್ರೀಮತಿ ಲಕ್ಷ್ಮಿ ದೇವಮ್ಮ ಗೀತಾ ನಾಗರತ್ನ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾರ್ಯದರ್ಶಿ ವಿಎನ್ ಸೂರ್ಯಪ್ರಕಾಶ್, ಸಹ ಕಾರ್ಯದರ್ಶಿಳಾದ ಮುನಿರಾಜು ,ಬೇಕರಿ ಶಿವಣ್ಣ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ್ ಹಡಪದ್ ಮಾಜಿ ಅಧ್ಯಕ್ಷ ಎಚ್ಎಸ್ ರುದ್ರೇಶ್ ಮೂರ್ತಿ ವಿಶ್ವನಾಥ್ ಆರ್ ಮುನಿರಾಜು ಉಪಸ್ಥಿತರಿದ್ದರು.
ಸಮಾಜ ಸೇವಕ ನಾಗರಾಜ್ ರವರಿಗೆ ಹುಟ್ಟುಹಬ್ಬದ ಆಚರಣೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದ ಸಮೀಪದಲ್ಲಿರುವ ಬಿಜ್ವವಾರ ಗ್ರಾಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಮತ್ತು ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ದೇವನಹಳ್ಳಿ ರೀಜನ್ ವತಿಯಿಂದ ಸಮಾಜ ಸೇವಕ ಶ್ರೀ ನಾಗರಾಜ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಸಮೇತನಹಳ್ಳಿ ಮಂಜುನಾಥ, ರಾಷ್ಟ್ರೀಯ ಸೀನಿಯರ್ ಚೇಂಬರ್ ಸಂಯೋಜಕ ದಿನ್ನೂರು ವೆಂಕಟೇಶ್
ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವಿಜಯಪುರ ಲೀಜನ್ ಅಧ್ಯಕ್ಷ ಮಾರ್ಕೆಟ್ ವೆಂಕಟೇಶ್ ಕಾರ್ಯದರ್ಶಿ ಆನಂದ್ ಖಜಾಂಚಿ ಬಸವರಾಜ್ ಎಸ್ ಆರ್ ಎಸ್ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ದೇವನಹಳ್ಳಿ ಲೀಜನ್ ಅಧ್ಯಕ್ಷ ಚಿನ್ನಪ್ಪ ,ಮಾಜಿ ಅಧ್ಯಕ್ಷ ಸತೀಶ್ ಕುಮಾರ್ ಎಸ್ ಟಿ ಎಮ್ ಸಿ ಅಧ್ಯಕ್ಷ ವಿಶ್ವನಾಥ್ ಆಂಜನಪ್ಪ ಶ್ರೀಮತಿ ಪದ್ಮಶ್ರೀ ಹೇಮಂತ್ ಗೌಡ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷರು ಪಿ ಬೈಯಣ್ಣ ಅಶ್ವಥನಾರಾಯಣ ಮುಖ್ಯ ಉಪಾಧ್ಯಾಯರು ಗುರು ಬಾಯಿ ಕರಗಪ್ಪ ಹರ್ಷಿತ ಸ್ವರ್ಣ ಗೌರಿ ಬೇಕರಿ ಮಂಜುನಾಥ ಸುಬ್ರಮಣ್ಯ ಶೆಟ್ಟಿ ಶ್ರೀನಿವಾಸ ಗೌಡ ವೆಂಕಟಸ್ವಾಮಿ ವೆಂಕಟರೆಡ್ಡಿ ಎಲೆಕ್ಟ್ರಿಕಲ್ ನಾಗರಾಜ್ ಜೆಆರ್ ಮುನಿ ವೀರಣ್ಣ ಅಕ್ಷತಾ ರವರು ಉಪಸ್ಥಿತರಿದ್ದರು.










