ವಿಜಯ ದರ್ಪಣ ನ್ಯೂಸ್…..
ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ :
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್

ಶಿಡ್ಲಘಟ್ಟ : ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ ಸಹಕಾರಿ ಬ್ಯಾಂಕುಗಳು ಮತ್ತಷ್ಟು ಸಾಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಹಾಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊತ್ತೂರು ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ರೇಷ್ಮೆ ಬೆಳೆಗಾರರ ಸೇವಾ ಸಹಕಾರ ಸಂಘಕ್ಕೆ 6 ಕೋಟಿ ರೂ.ಗಳ ಸಾಲ ಮಂಜೂರು ಮಾಡಿ ಅವರು ಮಾತನಾಡಿದರು.
ಮಳ್ಳೂರು ಸಹಕಾರಿ ಸಂಘದ ಮಾದರಿಯಲ್ಲಿ ಇತರ ಸಂಘಗಳೂ ಕಾರ್ಯನಿರ್ವಹಿಸಿ ಸಹಕಾರಿ ಸಂಘಗಳು ಆರ್ಥಿಕವಾಗಿ ಸದೃಡಗೊಳಿಸಲು ಸಹಕರಿಸಬೇಕೆಂದು
ಎಂದು ಮನವಿ ಮಾಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗರಾಜ್ ಮಾತನಾಡಿ ,
ಬರಗಾಲ ಆವರಿಸಿರುವುದರಿಂದ ರೈತರಿಗೆ ಹೆಚ್ಚಿನ ಕೆಸಿಸಿ ಸಾಲ ಸೌಲಭ್ಯ ನೀಡುವಂತೆ ಕೋರಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮಾತನಾಡಿ ,ಬ್ಯಾಂಕಿನಿಂದ ಸಾಲ ಪಡೆದ 140 ಸ್ವಸಹಾಯ ಸಂಘಗಳು ಹಾಗೂ 317 ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ್ದು, ಯಾವುದೇ ಸುಸ್ತಿದಾರರಿಲ್ಲ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಹಾಪ್ ಕಾಮ್ಸ್ ಅಧ್ಯಕ್ಷ ಮುತ್ತೂರು ಚಂದ್ರೇಗೌಡ,ಮಳ್ಳೂರು ಸಹಕಾರದ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್, ಉಪಾಧ್ಯಕ್ಷ ಎನ್.ಅಣ್ಯಪ್ಪ,
ನಿರ್ದೇಶಕರಾದ ಮುರಳಿ,ಎಂ.ಆರ್.ಮುನಿಕೃಷ್ಣಪ್ಪ,
ನಿಶಾಂತ್,ಎನ್.ಶ್ರೀನಿವಾಸಮೂರ್ತಿ,ಶಶಿಕಲಾ, ರತ್ನಮ್ಮ,
ಮತ್ತಿತರರು ಹಾಜರಿದ್ದರು.










