ವಿಜಯ ದರ್ಪಣ ನ್ಯೂಸ್….
ಮೈಸೂರು ದಸರಾ ಗಜ ಪಯಣಕ್ಕೆ ಅದ್ದೂರಿಯಾಗಿ ಚಾಲನೆ ನೀಡಿದ ಸಚಿವ ಡಾ .ಯತೀಂದ್ರ ಸಿದ್ರಾಮಯ್ಯ

ತಾಂಡವಪುರ ಆಗಸ್ಟ್ 26 ಮೈಸೂರು ದಸರಾ 2026 ರ ಗಜ ಪಯಣಕ್ಕೆ ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ರವರು ಆನೆಗಳಿಗೆ ಪೂಜೆ ಸಲ್ಲಿಸಿ, ಫಲ ತಾಂಬೂಲ ನೀಡಿ ವೀರನಹೊಸಹಳ್ಳಿ ಬಳಿ ಚಾಲನೆ ನೀಡಿದರು.
ಸಚಿವ ಡಾ, ಯತೀಂದ್ರ ಸಿದ್ದರಾಮಯ್ಯನವರು ಇದೇ ಮೊದಲ ಬಾರಿಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ಪೂಜಿಸಲ್ಲಿಸಿ ಸಂತಸ ವ್ಯಕ್ತಪಡಿಸಿದರು
ಬಳಿಕ ಸಚಿವ ಡಾ. ಯತೀಂದ್ರ ಸಿದ್ರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡಿ ದರದಲ್ಲಿ ಕಳೆದ 25 ವರ್ಷಗಳಿಂದ ಪಾಲ್ಗೊಂಡು ಸೇವೆಯನ್ನು ನಿರ್ವಹಿಸಿದ ಅಭಿಮಾನಿವೆಗೆ ಸಂಪ್ರದಾಯಿಕವಾಗಿ ಬಿಳ್ಕೊಡಲಾಗಿದ್ದು ದಸದಲ್ಲಿ ಅಂಬಾರಿ ಹೊರವ ಆನೆಯನ್ನು
ಮೈಸೂರಿನ ಅರಮನೆಯಲ್ಲಿ ತರಬೇತಿ ನೀಡುವ ಸಮಯದಲ್ಲಿ ಅದನ್ನು ಗುರುತು ಮಾಡುತ್ತಾರೆ ಎಂದು ಹೇಳಿದ ಅವರು ಈ ಬಾರಿಯ ಪ್ರಸನ್ನದಲ್ಲಿ ಕಂಬಳ ಕ್ರೀಡೆ ಇರುತ್ತದೆ ಅದನ್ನು ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ತೀರ್ಮಾನಿಸಿದ್ದು ಈ ಬಾರಿಯ ಮೈಸೂರು ದಸರದಲ್ಲಿ ಕಂಬಳ ಕ್ರೀಡೆ ಇರುತ್ತದೆ ಎಂದು ತಿಳಿಸಿದರು
ದಸರದಲ್ಲಿ ಪಾಲ್ಗೊಳ್ಳುವ ಮೊದಲ ಹಂತದಲ್ಲಿ 9 ಆನೆ ಗಳಾದ ಮಹೇಂದ್ರ, ಶ್ರೀಕಂಠ, ಲಕ್ಷ್ಮೀ, ಏಕಲವ್ಯ, ಧನಂಜಯ, ಗೋಪಿ, ಕಾವೇರಿ, ಪ್ರಶಾಂತ, ಶ್ರೀರಾಮ ಆನೆಗಳು ಮೈಸೂರು ದಸರಾಗೆ ಆಗಮಿಸಿದವು.
ಕಳೆದ ಕೆಲವು ವರ್ಷಗಳಿಂದ ಅಂಬಾರಿ ಹೊತ್ತು, ಪ್ರಸ್ತುತ ನಿವೃತ್ತಿ ಆಗಿರುವ ಅಭಿಮನ್ಯುವಿಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಅರಣ್ಯ ವಸತಿ ವಿಹಾರಧಾಮಗಳ ಅಧ್ಯಕ್ಷರು ಹಾಗೂ ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಚಿಕ್ಕಮಾದು ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ ಡಿ ಹರೀಶ್ ಗೌಡ, ಕೆ ಆರ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಾದ ಡಿ ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ, ಮಾಜಿ ಶಾಸಕ ಎಂ ಕೆ ಸೋಮಶೇಖರ್ ಗ್ಯಾರಂಟಿ ಯೋಜನಾ ಸಮಿತಿಯ ಅಧ್ಯಕ್ಷ ಡಾ. ಪುಷ್ಪ ಅಮರನಾಥ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಪ್ರದೇಶಿಕ ಆಯುಕ್ತರಾದ ನಿತೀಶ್ ಪಾಟೀಲ್, ದಕ್ಷಿಣ ವಲಯದ ಐ ಜಿ ಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿಗಳಾದ ಜಿ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.











