--Ads--

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಈದ್ ಮೀಲಾದ್ ಆಚರಣೆ

On: August 26, 2026 4:55 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಈದ್ ಮೀಲಾದ್ ಆಚರಣೆ

ಶಿಡ್ಲಘಟ್ಟ : ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುವ ಈದ್ ಮಿಲಾದ್ ಹಬ್ಬವನ್ನುಸಡಗರ ಸಂಭ್ರಮದಿಂದ ಮುಸ್ಲೀಮ್ ಭಾಂದವರು ಆಚರಿಸಿದರು.

ಈದ್ ಮಿಲಾದ್ ಹಬ್ಬದ ಅಂಗವಾಗಿ ಮುಸ್ಲಿಮರು ತಮ್ಮ ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚುತ್ತಾರೆ ,ಪ್ರಮುಖ ಮಸೀದಿ ಹಾಗೂ ದರ್ಗಾಗಳಲ್ಲಿ ದಾನಿಗಳು ಊಟ ಮಾಡಿಸುವುದು ಸಂಪ್ರದಾಯ ,ಇಸ್ಲಾಮಿನ ರಬಿವುಲ್ ಅವ್ವಲ್ ತಿಂಗಳಲ್ಲಿ ಈ ಹಬ್ಬ ಬರುವ ಕಾರಣ ಒಂದು ತಿಂಗಳ ಕಾಲ ಮಸೀದಿಗಳಲ್ಲಿ ಮೌಲಿದ್ ಪಾರಾಯಣ (ಮುಹಮ್ಮದ್ ಫೈಗಂಬರ್ ಅವರ ಕೀರ್ತನೆ) ಮಾಡಲಾಗುತ್ತದೆ ತಾಲ್ಲೂಕಿನಾದ್ಯಂತ ಈದ್-ಮಿಲಾದ್ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಮಹಮದ್ ಪೈಗಂಬರ್ ಜನ್ಮದಿನದಂದು ಸಂಭ್ರಮದಿಂದ ಆಚರಿಸಲಾಗುವ ಈ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಬೀದಿಗಳನ್ನು ಹಾಗೂ ಹಲವು ಸ್ಥಳಗಳನ್ನು ಅಲಂಕರಿಸಲಾಗಿತ್ತು.

ಹಬ್ಬದ ನಿಮಿತ್ತ ಮುಸ್ಲಿ ಸಮಾಜದಿಂದ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಹಮ್ಮದ್ ಫೈಗಂಬರ್ ಅವರ ಜನ್ಮಸ್ಥಳ ಮೆಕ್ಕಾ ಹಾಗೂ ಇಸ್ಲಾಂ
ಪ್ರಚಾರ ಅರಂಭಿಸಿದ ಮದೀನಾ ನಗರಗಳ ಸ್ಥಬ್ದ ಚಿತ್ರದ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಮುಹಮ್ಮದ್ ಅವರ ಕುರಿತ ಕವ್ವಾಲಿಗಳು ಹಾಡಲಾಗುತ್ತಿತ್ತು.

ಮನೆಗಳಲ್ಲಿ ಮಹಿಳೆಯರು ಸಿಹಿ ತಿಂಡಿಗಳನ್ನು ತಯಾರಿಸಿ
ವಿತರಿಸಿದರು,ಕಿರಿಯರು ಮತ್ತು ಹಿರಿಯರು ಹೊಸ
ಉಡುಪುಗಳನ್ನು ತೊಟ್ಟು ಸಂತಸಪಟ್ಟರು ,ಮೆರವಣಿಗೆ ಹಾಗೂ ಸಾಮೂಹಿಕ ಪ್ರಾರ್ಥನೆಯನ್ನು ಈದ್ಗಾ ಮೈದಾನದಲ್ಲಿ ನಡೆಸಲಾಯಿತು.

WhatsApp

Join Now

Telegram

Join Now

Instagram

Join Now