--Ads--

ಪರಿಶಿಷ್ಟ ಜಾತಿಗೆ ಮಡಿವಾಳರನ್ನು ಸೇರಿಸಿ ಸರ್ಕಾರಕ್ಕೆ ಒತ್ತಾಯ : ಎಸ್.ಸಿ. ಹೋರಾಟ ಸಮಿತಿ ಅದ್ಯಕ್ಷ ಸಿದ್ದಲಿಂಗಯ್ಯ

On: September 7, 2026 3:05 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪರಿಶಿಷ್ಟ ಜಾತಿಗೆ ಮಡಿವಾಳರನ್ನು ಸೇರಿಸಿ ಸರ್ಕಾರಕ್ಕೆ ಒತ್ತಾಯ : ಎಸ್.ಸಿ. ಹೋರಾಟ ಸಮಿತಿ ಅದ್ಯಕ್ಷ ಸಿದ್ದಲಿಂಗಯ್ಯ

ಶಿಡ್ಲಘಟ್ಟ : ರಾಜ್ಯದ ಸರ್ಕಾರ ಮಡಿವಾಳ ಸಮಾಜವನ್ನು ಪದೇ ಪದೆ ನಿರ್ಲಕ್ಷಿಸುತ್ತಿದೆ.ದೇಶದ ಸುಮಾರು 17 ರಾಜ್ಯಗಳು ಹಾಗು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ
ಸೇರಿಸಲಾಗಿದೆಯಾದರೂ ಕರ್ನಾಟಕದಲ್ಲಿ ಈವರೆಗೂ ಆಗಿಲ್ಲ ಎಂದು ಎಸ್‌.ಸಿ. ಹೋರಾಟ ಸಮಿತಿ ಅಧ್ಯಕ್ಷ ಎಸ್.ಸಿದ್ದಲಿಂಗಯ್ಯ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸೆ.9ರಂದು ನಗರದ ಕೇಂದ್ರದಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 18 ಲಕ್ಷ ಜನಸಂಖ್ಯೆಯಿರುವ ಮಡಿವಾಳ ಸಮಾಜ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು.

ಅನೇಕ ವರ್ಷಗಳಿಂದ ಸಮುದಾಯದಿಂದ ಪ್ರತಿಭಟನೆ, ಹೋರಾಟ ನಡೆಸಿದರು ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹಾಗಾಗಿ ಸೆ.9ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಇತ್ತೀಚೆಗೆ ನಿವೃತ್ತಿಯಾದ ಪಿಎಸ್‌ಐ ವೇಣುಗೋಪಾಲ್‌ ಅವರನ್ನು ಹಮ್ಮಿಕೊಂಡಿದ್ದ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಆ‌ರ್.ವಿ.ರಾಜಣ್ಣ,
ತಾಲೂಕು ಅಧ್ಯಕ್ಷ ಡಿ.ವಿ.ಕೃಷ್ಣಪ್ಪ, ಉಪಾಧ್ಯಕ್ಷ ಎನ್.ಹರೀಶ್, ಪ್ರಧಾನ ಕಾರ್ಯದರ್ಶಿ ಎಚ್‌.ಎನ್‌.ಮುನಿರಾಜ್, ವೇಣುಗೋಪಾಲ್, ಮುಖಂಡರಾದ ಎಚ್ ವಿ.ಶ್ರೀನಿವಾಸ್,ದೊಡ್ಡವೇಮಣ್ಣ ದೇವರಾಜ್,ಚಂದ್ರಪ್ಪ, ಎಂ.ರಮೇಶ್ ಹಾಜರಿದ್ದರು.

WhatsApp

Join Now

Telegram

Join Now

Instagram

Join Now