ವಿಜಯ ದರ್ಪಣ ನ್ಯೂಸ್….
ಕಾಂಗ್ರೆಸ್ ಎಂದರೆ ಭ್ರಷ್ಟರ ಕೂಟ : ಸೀಕಲ್ ರಾಮಚಂದ್ರಗೌಡ

ಶಿಡ್ಲಘಟ್ಟ : ಕಾಂಗ್ರೆಸ್ ಎಂದರೆ ಭ್ರಷ್ಟರ ಕೂಟ
ಎಂಬುದು ಜಗಜ್ಜಾಹೀರಾಗಿದ್ದು, ಮೂರೂವರೆ ವರ್ಷ ಕಳೆದರೂ ಸರ್ಕಾರದ ವೈಫಲ್ಯಗಳು ಮತ್ತು ಭ್ರಷ್ಟಾಚಾರ ಮಾತ್ರ ತಾಂಡವವಾಡುತ್ತಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಆರೋಪಿಸಿದ್ದಾರೆ
ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಭ್ರಷ್ಟ ಸರ್ಕಾರವಾಗಿದ್ದು, ಇದನ್ನು ವಿರೋಧಿಸಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುತ್ತಿದ್ದು ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಸೆ. 7ರಂದು ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಾರ್ಯಕರ್ತರು, ಮುಖಂಡರು ಪಾಲ್ಗೊಂಡಿದ್ದಾರೆ ಎಂದು ಹೇಳಿದರು.
ಸಿಎಂ ಡಿ.ಕೆ.ಶಿವಕುಮಾರ್ ಅವರು ನಾಗೇಂದ್ರ ಅವರಿಂದ ಮಾತ್ರ ರಾಜೀನಾಮೆ ಪಡೆದಿದ್ದಾರೆ ಎಂದು ಹೇಳುತ್ತಿದ್ದರೂ , ವಾಸ್ತವದಲ್ಲಿ ಅಂತಹ ನೂರಾರು ಜನರು ಇದರ ಹಿಂದೆ ಇದ್ದಾಎ ಎಂಬುದು ಸತ್ಯ ಎಂದರು.
ಬಿಜೆಪಿ ವತಿಯಿಂದ ಹಮ್ಮಿ ಕೊಳ್ಳಲಾಗಿರುವ ಬಳ್ಳಾರಿ ಪಾದಯಾತ್ರೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಮುಖಂಡರು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ನಿನ್ನೆ ರಾತ್ರಿ ಇಂದಿನ ಪಾದಯಾತ್ರೆಯಲ್ಲಿ ಜಿಲ್ಲೆಯ ಮುಖಂಡರೆಲ್ಲರೂ ಭಾಗವಹಿಸಿದ್ದರು.
ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿ ಉಳಿದುಕೊಂಡು,ಈ ಪಾದಯಾತ್ರೆಯು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದ್ದು, ಮುಂಬರುವ ದಿನಗಳಲ್ಲಿ ಈ ಹೋರಾಟದ ಮೂಲಕ ಕಾಂಗ್ರೆಸ್ ಸರ್ಕಾರದ ಅಸಲಿಯತ್ತನ್ನು ಜನರಿಗೆ ಮುಟ್ಟಿಸುವ ಕೆಲಸ ಮುಂದು ವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಾಂತರ ಅದ್ಯಕ್ಷ ಸೀಕಲ್ ಆನಂದಗೌಡ, ಮಾಜಿ ಅಧ್ಯಕ್ಷ ಸುರೇಂದ್ರ ಗೌಡ, ಪಲಿಚೆರ್ಲು ಸೋಮಣ್ಣ, ಆಂಜನೇಯ ಗೌಡ, ವೆಂಕಟರಾಮರೆಡ್ಡಿ, ದೇವರ ಮಳ್ಳೂರು ಬಾಲಕೃಷ್ಣ,
ಬಳುವನಹಳ್ಳಿ ರಾಜಣ್ಣ, ಪ್ರಸಾದ್ ರೆಡ್ಡಿ,ಚನ್ನಕೇಶವರೆಡ್ಡಿ, ಕೊರ್ಲಪರ್ತಿ ಸೀನಪ್ಪ, ಮಂಜುನಾಥ್, ಮಧು, ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.








