ವಿಜಯ ದರ್ಪಣ ನ್ಯೂಸ್…..
ಮಳ್ಳೂರಿನ ಡಾ.ಪುವ್ವಾಡ ಸಂದೀಪ್ ಅವರಿಗೆ 2025-26ನೇ ಶೈಕ್ಷಣಿಕ ಸಾಲಿನ “ವಾರ್ಷಿಕ ಆದರ್ಶ ಶಿಕ್ಷಕ ಪ್ರಶಸ್ತಿ” ಪ್ರಧಾನ

ಶಿಡ್ಲಘಟ್ಟ : ಅತ್ಯುತ್ತಮ ಬೋಧನೆ, ಸಮರ್ಪಣಾ ಮನೋಭಾವ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ
ಎಂ.ಎಸ್.ರಾಮಯ್ಯ ವೈದ್ಯಕೀಯ ಮಹಾವಿದ್ಯಾಲಯದ
ಡಾ.ಪುವ್ವಾಡ ಸಂದೀಪ್ ಅವರಿಗೆ 2025-26ನೇ ಶೈಕ್ಷಣಿಕ ಸಾಲಿನ “ವಾರ್ಷಿಕ ಆದರ್ಶ ಶಿಕ್ಷಕ ಪ್ರಶಸ್ತಿ” ಪ್ರದಾನ
ಮಾಡಲಾಯಿತು.
ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 2026ರಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಈ ಪ್ರಶಸ್ತಿ ಪ್ರದಾನ ಮಾಡಿ ಡಾ.ಪುವ್ವಾಡ ಸಂದೀಪ್ ಅವರನ್ನು ಗೌರವಿಸಲಾಯಿತು.
ವಿಶೇಷವಾಗಿ ಯುರಾಲಜಿ ವಿಷಯದಲ್ಲಿ ಭವಿಷ್ಯದ ವೈದ್ಯಕೀಯ ವೃತ್ತಿಪರರನ್ನು ರೂಪಿಸುವಲ್ಲಿ ಅವರು ತೋರಿದ ಬದ್ಧತೆ, ಸ್ಫೂರ್ತಿದಾಯಕ ಬೋಧನಾ ಶೈಲಿ ಹಾಗೂ ಶೈಕ್ಷಣಿಕ ಶ್ರೇಷ್ಠತೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರತಿ ಭಾನುವಾರ ಶಿಡ್ಲಘಟ್ಟ ತಾಲ್ಲೂಕು ಮಳ್ಳೂರಿನ ಗೌರಮ್ಮಮಲ್ಲಶೆಟ್ಟಿ ಆರೋಗ್ಯ ಕೇಂದ್ರದಲ್ಲಿ
ಡಾ.ಸಂದೀಪ್ ಹಾಗು ಡಾ.ಪ್ರಿಯಾಂಕಾ ಅವರು ಉನ್ನತ ಮಟ್ಟದ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿಕೊಡುವ ಮೂಲಕ ಮಾನವೀಯತೆ ಮೆರೆದು ಈ ಭಾಗದ ಜನಮನ್ನಣೆ ಗಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಮಳ್ಳೂರಿನ ಡಾ.ಪುವ್ವಾಡ ಸಂದೀಪ್ ಅವರಿಗೆ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಹೃತ್ತೂರ್ವಕ ಅಭಿನಂದನೆ ಸಲ್ಲಿಸಿ, ಮುಂದಿನ ಶೈಕ್ಷಣಿಕ ಹಾಗೂ ವೃತ್ತಿಜೀವನಕ್ಕೆ ಅವರಿಗೆ ಶುಭ ಹಾರೈಸಿದರು.










