--Ads--

ಚಾಮರಾಜ ಕ್ಷೇತ್ರದಲ್ಲಿ 300 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ – ಶಾಸಕ ಕೆ. ಹರೀಶ್ ಗೌಡ

On: October 7, 2026 3:58 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಚಾಮರಾಜ ಕ್ಷೇತ್ರದಲ್ಲಿ 300 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ : ಮಹಿಳಾ ಸಬಲೀಕರಣಕ್ಕೆ ಮೊದಲ ಆದ್ಯತೆ – ಶಾಸಕ ಕೆ. ಹರೀಶ್ ಗೌಡ

ತಾಂಡವಪುರ ಅಕ್ಟೋಬರ್ 6 ಮೈಸೂರು ಮಹಾನಗರ ಪಾಲಿಕೆಯ ಅನುದಾನದಡಿ ಚಾಮರಾಜ ವಿಧಾನ ಸಭಾ ಕ್ಷೇತ್ರದ 300 ಅರ್ಹ ಫಲಾನುಭವಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು ನಗರದ ದೀವಾನ್ಸ್ ರಸ್ತೆಯ ಯಾದವ ಸಂಘದಲ್ಲಿ ಆವರಣದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ರವರು ಉದ್ಘಾಟಿಸಿ ಮಾತನಾಡಿ ಒಂದು ಮನೆ ಬೆಳಗಬೇಕಾದರೆ ಮಹಿಳೆ ಸಬಲಳಾಗಬೇಕು. ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾದಾಗ ಮಾತ್ರ ಇಡೀ ಕುಟುಂಬ ಸದೃಢವಾಗುತ್ತದೆ. ಇದೇ ನಮ್ಮ ಕಾಂಗ್ರೆಸ್ ಸರ್ಕಾರದ ಮೂಲ ಮಂತ್ರ ಎಂದು ಶಾಸಕರು ಹೇಳಿದರು.

ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಿಳೆಯರಿಗಾಗಿ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಉಚಿತ ಹೊಲಿಗೆ ತರಬೇತಿ, ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇಂದು ನೀಡುತ್ತಿರುವ ಈ 300 ಹೊಲಿಗೆ ಯಂತ್ರಗಳು ಕೇವಲ ಯಂತ್ರಗಳಲ್ಲ, ಅವು 300 ಕುಟುಂಬಗಳ ಭವಿಷ್ಯಕ್ಕೆ ಸಹಕಾರಿ ಎಂದು ಹೇಳಿದರು

.ಮಹಿಳೆಯರ ಸಬಲೀಕರಣ ಕುರಿತು ನನ್ನ ಬದ್ಧತೆ ಕೇವಲ ಚುನಾವಣೆಯ ಭರವಸೆಯಲ್ಲ, ಅದು ನನ್ನ ಜೀವನದ ಧ್ಯೇಯ ಎಂದರು.

ಫಲಾನುಭವಿ ಮಹಿಳೆಯರು ಶಾಸಕರಿಗೆ ಕೃತಜ್ಞತೆ ಸಲ್ಲಿಸಿ, ಇಷ್ಟು ವರ್ಷಗಳಲ್ಲಿ ನಮ್ಮ ಕಷ್ಟಕ್ಕೆ ಸ್ಪಂದಿಸಿದ ಏಕೈಕ ಶಾಸಕರು ಹರೀಶ್ ಗೌಡರು, ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸುವುದು, ವೈದ್ಯಕೀಯ ಚಿಕಿತ್ಸೆಗೆ , ಮಕ್ಕಳ ಶಿಕ್ಷಣಕ್ಕೆ,ಹಬ್ಬಗಳಿಗೆ ಸಹಾಯ ಮಾಡುತ್ತಾರೆ ಎಂದು ಭಾವುಕರಾದರು.

ಕಾರ್ಯಕ್ರಮದಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಮಹಿಳಾ ಅಧ್ಯಕ್ಷೆ ಮಾಯಮ್ಮ, ದೇವರಾಜ ಬ್ಲಾಕ್ ಅಧ್ಯಕ್ಷ ಡಿ. ನಾಗಭೂಷಣ್, ಮಹಿಳಾ ಅಧ್ಯಕ್ಷೆ ಚಂದ್ರಕಲಾ, ಗ್ಯಾರಂಟಿ ಸಮಿತಿ ಅಧ್ಯಕ್ಷರು ಮಾಜಿ ಉಪ ಮಹಾಪೌರರಾದ ಪುಷ್ಪವಲ್ಲಿ, ಮಾಜಿ ಮಹಾಪೌರರಾದ ಬಿ.ಕೆ.ಪ್ರಕಾಶ್,ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮಾಜಿ ಪಾಲಿಕೆ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್, ಎಂ . ಡಿ.ನಾಗರಾಜ್,ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್ ಪಟೇಲ್, ಮುಖಂಡರಾದ ಮಾರ್ಕೆಟ್ ದಿನೇಶ್, ಎಲ್. ಭಾಸ್ಕರ್ ಗೌಡ, ರಾಜಣ್ಣ ಅಶೋಕ್, ಶ್ರೀಧರ್ ಸೇರಿದಂತೆ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು,ಸ್ಥಳೀಯ ಮುಖಂಡರು ಹಾಗೂ ಮಹಿಳಾ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಹಾಜರಿದ್ದರು

WhatsApp

Join Now

Telegram

Join Now

Instagram

Join Now