ಕೆ.ಎಸ್.ಆರ್.ಟಿ.ಸಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಅಧಿಕಾರಿಗಳ ಹಾಗೂ ನೌಕರರ ಐಕ್ಯತಾ ವೇದಿಕೆ ಉದ್ಘಾಟನೆ
ಸ್ವಾರ್ಥಿಗಳು ತಮಗಾಗಿ ಬದುಕುತ್ತಾರೆ, ಸ್ವಾಭಿಮಾನಿಗಳು ಸಮಾಜಕ್ಕಾಗಿ ಬದುಕುತ್ತಾರೆ, ಜನರ ಧ್ವನಿ ಸಂವಿಧಾನವಾಗಿದೆ : ಶ್ರೀ ಜ್ಞಾನ ಪ್ರಕಾಶ್ ಸ್ವಾಮಿಜೀ

ಬೆಂಗಳೂರು: ನಯನ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಂಸ್ಥೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಧಿಕಾರಿಗಳು ಮತ್ತು ನೌಕರರ ಐಕ್ಯತಾ ವೇದಿಕೆ ವತಿಯಿಂದ ನೂತನ ಸಂಘದ ಉದ್ಘಾಟನೆ ಮತ್ತು ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ.
ಉರಿಲಿಂಗ ಪೇದ್ದೀಶ್ವರ ಮಹಾ ಸಂಸ್ಥಾನದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿರವರು, ಬಿಎಂಟಿಸಿ ಅಧ್ಯಕ್ಷ ವಿ.ಎಸ್.ಆರಾಧ್ಯ ,ಬಿಎಂಟಿಸಿ ನಿರ್ದೇಶಕ ಅಬ್ದುಲ್ ಅಹದ್, ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ. ಪ್ರಭಾಕರ್ ರೆಡ್ಡಿ ಕರ್ನಾಟಕ ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್ ಮತ್ತು . ಶಿವಕುಮಾರ್, ರಾಜ್ಯದ್ಯಕ್ಷ ಯಲ್ಲಪ್ಪ. ಪಿ, ಕಾರ್ಯಾಧ್ಯಕ್ಷ ರಮೇಶ್. ವಿ, ಪ್ರಧಾನ ಕಾರ್ಯದರ್ಶಿ ನಿಂಗಪ್ಪ ತಡಿಬಿಡಿ, ಖಜಾಂಚಿ ದೇವರಾಜ್, ನಂಜುಂಡೇಗೌಡ, ರಮೇಶ್ ಬಾಬು, ಸಂಜೀವ್ ಕುಮಾರ್,ಮಂಜುಳನಾಯಕ್,ರೇಖಾ ಮಾದರ್, ಓಂಕಾರಪ್ಪ, ಜಗದೀಶ್, ಹೆಚ್.ಕೆ.ಸುರೇಶ್ ರವರು ದೀಪ ಬೆಳಗಿಸಿ ಬುದ್ದ, ಬಸವ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಜ್ಞಾನ ಪ್ರಕಾಶ್ ಸ್ವಾಮಿಜೀರವರು ಮಾತನಾಡಿ ಕೆ.ಎಸ್.ಆರ್.ಟಿ.ಸಿ.ಮತ್ತು ಬಿಎಂಟಿಸಿ ದೊಡ್ಡ ಇತಿಹಾಸವಿದೆ. ಇಲ್ಲಿನ ಅಧಿಕಾರ ಮತ್ತು ನೌಕರರ ಸಮಸ್ಯೆಗಳ ನಿವಾರಣೆಗಾಗಿ ವೇದಿಕೆ ಸ್ಥಾಪನೆಯಾಗಿದೆ.
ಸಂಘ ಕಟ್ಟುವ ಬದಲು ಸಂಸ್ಥೆಗಳು ಕಟ್ಟಿ ಎಂದು ಅಂಬೇಡ್ಕರ್ ರವರು ಹೇಳಿದ್ದರು. ನೋಂದಾಣಿ ಮತ್ತು ನೋಂದಾಣಿ ಆಗಿದಿರುವ ಒಂದು ಲಕ್ಷ ನಲವತ್ತು ಸಂಘಗಳಿವೆ.
ಅಂಬೇಡ್ಕರ್ ರವರು ಮಹಿಳೆಯರಿಗೆ ವಿಶೇಷ ಮಸೂದೆ ಮಂಡಿಸಿದರು. ಮಹಿಳೆಯ ಪರ ಕಾನೂನು ರೂಪಿಸಿ ಸಾಮಾನತೆ ಸಾರಿದರು. ಕಾರ್ಮಿಕರಿಗೆ 8ಗಂಟೆ ದುಡಿಯಬೇಕು ನಿಯಮ ತಂದರು.
ಸಂಘಗಳು ಉಳಿಸಿ, ಬೆಳಸಬೇಕು. ಎಲ್ಲ ಇಲಾಖೆಗಳಿಗೆ ಒಂದು ಸಂಘ ಇರಬೇಕು. ಕೆ.ಎಸ್.ಆರ್.ಟಿ.ಸಿ. ಡೈವರ್ ಮಗ ಐಎಎಸ್ ಅಧಿಕಾರಿಯಾಗಿದ್ದಾನೆ. ಮನು ಸಂವಿಧಾನ ಡೈವರ್ ಮಗ ಡೈವರ್ ಆಗಬೇಕು ಅದರೆ ಅಂಬೇಡ್ಕರ್ ರವರ ರೂಪಿಸಿದ ಸಂವಿಧಾನ ಡೈವರ್ ಐಎಎಸ್ ಅಧಿಕಾರಿಯಾಗಬಹದು ಅಂತಹ ಸಂವಿಧಾನ ವಿಚಾರ ಧಾರೆಯಾಗಿದೆ.
ಸ್ವಾರ್ಥ ತಮಗೆ ಬದುಕುತ್ತಾರೆ, ಸ್ವಾಭಿಮಾನಿಗಳು ಸಮಾಜಕ್ಕೆ ಬದುಕುತ್ತಾರೆ. ಜನರ ಧ್ವನಿ ಸಂವಿಧಾನವಾಗಿದೆ. ಜಾತಿ, ಧರ್ಮ ವಿಲ್ಲದ ಇಲಾಖೆ ಎಂದರೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯಾಗಿದೆ.
ತಮಿಳುನಾಡು ಸರ್ಕಾರ ಸಾರಿಗೆ ನೌಕರರನ್ನ ಸರ್ಕಾರಿ ನೌಕರರು ಎಂದು ಎಲ್ಲ ಸೌವಲತ್ತು ನೀಡುತ್ತಿದ್ದಾರೆ ಅದರೆ ಕರ್ನಾಟಕದಲ್ಲಿ ಸರ್ಕಾರಿ ನೌಕರರು ಎಂದು ಪರಿಗಣನೆ ಮಾಡುವುದಿಲ್ಲ. ಒಟ್ಟಾಗಿ ಹೋದರೆ ಉಳಿಯುತ್ತಿರ, ವಿಭಜನೆಯಾದರೆ ಹಾಳಾಗಿ ಹೋಗುತ್ತಿರ ಎಂದು ಅಂಬೇಡ್ಕರ್ ರವರು ಹೇಳಿದರು.
ಕಸ ಗುಡಿಸುವ ಮಹಿಳೆಯ ಮಗಳು ಐಎಎಸ್ ಆಗಿದ್ದಾರೆ.
ವಿಮೆ, ಇ.ಎಸ್.ಐ. ಮತ್ತು ಕಾರ್ಮಿಕರ ಪರ ಕಾನೂನುಗಳನ್ನು ಅಂಬೇಡ್ಕರ್ ರವರು ಕೊಡುಗೆ ಕೊಟ್ಟಿದ್ದಾರೆ. ರಾಷ್ಟ್ರಪತಿ ದೌಪ್ರದಿ ಮುರ್ಮುರವರು ಅಂಬೇಡ್ಕರ್ ದೇವರ ಸಮಾನ ಎಂದು ಹೇಳಿದ್ದಾರೆ.ನಮ್ಮ ಸಂವಿಧಾನ, ನಮ್ಮ ಹೆಮ್ಮೆ ಎಂದು ಎಲ್ಲರು ಉಳಿಸುವ ಪ್ರಯತ್ನ ಮಾಡಬೇಕು. ಚಾಲಕರು, ನಿರ್ವಾಹಕರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು.

ಅಬ್ದುಲ್ ಅಹದ್ ರವರು ಮಾತನಾಡಿ ಮನಸ್ಸಿನಲ್ಲಿ ಐಕ್ಯತಾ ಬರಬೇಕು ಆಗ ಸಮ ಸಮಾಜ ನಿರ್ಮಾಣ ಸಾಧ್ಯ ಇದರ ಉದ್ದೇಶದಿಂದ ಐಕ್ಯತಾ ವೇದಿಕೆಯಾಗಿದೆ . ಅಂಬೇಡ್ಕರ್ ಅವರ ಶಕ್ತಿ ಎಂದರೆ ಓದು ಮುಖ್ಯವಾಗಿತ್ತು. ಸಾವಿರಾರು ಪುಸ್ತಕಗಳ ಸಂಗ್ರಹವಿತ್ತು ಅವರಲ್ಲಿ. ಸಂವಿಧಾನ ಬದ್ದವಾಗಿ ನಾವೆಲ್ಲರು ಒಂದೇ. ನಮ್ಮಲ್ಲಿ ಭೇದಬಾವವಿಲ್ಲ. ಎಲ್ಲರು ಸರಿಸಮಾನ ಯಾರದರು ಕೀಳಾಗಿ ಕಂಡರೆ ಕಾನೂನಿನ ಆನ್ವಯ ಅಪರಾಧವಾಗುತ್ತದೆ.
ಸಮಾಜ ವಾಸ್ತವತೆ ಅರಿತುಕೊಳ್ಳಬೇಕು ಕೆಳ ಸಮುದಾಯದವರಿಗೆ ಇನ್ನು ಹಿಂದುಳಿದಿದ್ದಾರೆ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಬೇಕು.
ಮುಸ್ಲಿಂ, ದಲಿತ ಸಮಾಜದವರು ಶಿಕ್ಷಣ ಪಡೆಯಬೇಕು, ವಿದ್ಯಾವಂತರಾಗಿದ್ದಾಗ ಮಾತ್ರ ಸಮಾಜದಲ್ಲಿ ಗೌರವ ಎಂದು ಹೇಳಿದರು.
ಡಾ.ಮೂರ್ತಿ ಎಲ್ ರವರು ಮಾತನಾಡಿ ಪಕ್ಷಿ ಹಾರಬೇಕಾದ ರಕ್ಕೆ ಅವಶ್ಯಕತೆಯಂತೆ ವಿದ್ಯೆ ಏನುವುದು ರಕ್ಕೆಯಂತೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ಹೇಳಿದ್ದರು. ಬುದ್ದ, ಬಸವ ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ಎಲ್ಲರು ಪಾಲಿಸಬೇಕು.
ಇರುವವರು ಮತ್ತು ಇಲ್ಲದಿರುವವರ ಕುರಿತು ಯುದ್ದ ಎಲ್ಲ ಕಾಲದಲ್ಲಿಯೂ ಇದೆ. ಸಂವಿಧಾನ ಕುರಿತು ಮಕ್ಕಳಿಗೆ ಅರಿವು ಮೂಡಿಸಬೇಕು. ದಲಿತ ಸಮುದಾಯಕ್ಕೆ ಸಿಗಬೇಕಾದ ಉನ್ನತ ಸ್ಥಾನಮಾನ ಕೈತಪ್ಪಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ ಇಂತಹ ಸಮಸ್ಯೆಗಳು ಎದುರಿಸಲು ವಿಚಾರವಂತರಾದಗ ಜಯ ಸಾಧ್ಯ ಎಂದು ಹೇಳಿದರು.
ಪ್ರಭಾಕರ್ ರೆಡ್ಡಿರವರು ಮಾತನಾಡಿ ಅಂಬೇಡ್ಕರ್ ರವರ ಎಲ್ಲ ಜಾತಿ ಸಮುದಾಯದವರಿಗೆ ಸೇರಿದ್ದಾರೆ. ಸಂವಿಧಾನ ನಮಗೆ ಮಾತನಾಡುವ ಹಕ್ಕು, ಮತದಾನ ಹಕ್ಕು ಎಲ್ಲರು ಸಮಾನವಾಗಿ ಬದುಕುವ ಹಕ್ಕು ನೀಡಿದ್ದಾರೆ.
ಮಾತನಾಡುವ ಹಕ್ಕು ಇದೆ ನಿಮ್ಮ ಸಮಸ್ಯೆಗಳಿಗೆ ಹೇಳಬೇಕು. ನಾವು ಬದುಕುವ ಸ್ವಾತಂತ್ರ್ಯ ಸಿಕ್ಕಿದೆ.
ದೇಶದಲ್ಲಿ ಸಹಬಾಳ್ಮೆಯಿಂದ ಎಲ್ಲರು ಬದುಕುತ್ತಿದ್ದಾರೆ ಎಂದು ಹೇಳಿದರು.









