--Ads--

ವಿಪ್ರೋದಿಂದ ಸೆಪ್ಟೆಂಬರ್ 30, 2026 ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶ ಪ್ರಕಟಣೆ

On: October 15, 2026 5:01 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ವಿಪ್ರೋದಿಂದ ಸೆಪ್ಟೆಂಬರ್ 30, 2026 ಕ್ಕೆ ಅಂತ್ಯವಾದ ತ್ರೈಮಾಸಿಕದ ಫಲಿತಾಂಶ ಪ್ರಕಟಣೆ

ಐಟಿ ಸೇವೆಗಳ ವಿಭಾಗದ ಆದಾಯ: $2,611 ಮಿಲಿಯನ್, ವರ್ಷದಿಂದ ವರ್ಷಕ್ಕೆ ಶೇ..0.6 ರಷ್ಟು ವೃದ್ಧಿ
ಆಪರೇಟಿಂಗ್ ಮಾರ್ಜಿನ್ : ಶೇ.16.5 (ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ..0.5 ರಷ್ಟು ವಿಸ್ತರಣೆ
ಇಪಿಎಸ್ ಶೇ..4.2 ರಷ್ಟು ವೃದ್ಧಿ, ನಿವ್ವಳ ಆದಾಯದ ಶೇ.165.8 ರಷ್ಟು ಕಾರ್ಯಾಚರಣೆಯ ನಗದು ಹರಿವು
ಬೆಂಗಳೂರು, ಭಾರತ – ಅಕ್ಟೋಬರ್ 15, 2026: ಪ್ರಮುಖ ಎಐ-ಚಾಲಿತ ತಂತ್ರಜ್ಞಾನ ಸೇವೆಗಳು ಮತ್ತು ಕನ್ಸಲ್ಟಿಂಗ್ ಸಂಸ್ಥೆ ವಿಪ್ರೋ ಲಿಮಿಟೆಡ್ (ಎನ್.ವೈ.ಎಸ್.ಇ: ಡಬ್ಲ್ಯೂ.ಐ.ಟಿ., ಬಿ.ಎಸ್.ಇ: 507685, ಎನ್.ಎಸ್.ಇ.: ವಿಪ್ರೊ), ಸೆಪ್ಟೆಂಬರ್ 30, 2026 ಕ್ಕೆ ಅಂತ್ಯವಾದ ತ್ರೈಮಾಸಿಕದ ಅಂತಾರಾಷ್ಟ್ರೀಯ ಹಣಕಾಸು ವರದಿ ಮಾನದಂಡಗಳ (ಐ.ಎಫ್.ಆರ್.ಎಸ್.) ಅಡಿಯಲ್ಲಿ ತನ್ನ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಿದೆ.

ಫಲಿತಾಂಶಗಳ ಪ್ರಮುಖಾಂಶಗಳು:

1.ಒಟ್ಟು ಆದಾಯ: ₹24,750 ಕೋಟಿ ($2,583 ಮಿಲಿಯನ್), ವರ್ಷದಿಂದ ವರ್ಷಕ್ಕೆ ಶೇ.9.1 ಹೆಚ್ಚಳ.

2.ಐಟಿ ಸೇವೆಗಳ ವಿಭಾಗದ ಆದಾಯ: $2611.5 ಮಿಲಿಯನ್, ಸಿಸಿಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.0.6 ಏರಿಕೆ.

3.ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್: ಶೇ.16.5, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 0.5 ಹೆಚ್ಚಳ.
ವಿಪ್ರೋ ಇಂದು ಸೆಪ್ಟೆಂಬರ್ 30, 2026 ಕ್ಕೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಂಸ್ಥೆಯು ₹24,750 ಕೋಟಿ ಒಟ್ಟು ಆದಾಯ ಮತ್ತು ₹3,200 ಕೋಟಿ ಲಾಭ ಗಳಿಸಿದೆ ಎಂದು ಘೋಷಿಸಿದೆ. ಈ ತ್ರೈಮಾಸಿಕದಲ್ಲಿ ಐಟಿ ಸೇವೆಗಳ ಆಪರೇಟಿಂಗ್ ಮಾರ್ಜಿನ್ ಶೇ. 16.5 ರಷ್ಟಿದ್ದು, ಇದು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಶೇ. 0.5 ರಷ್ಟು ಹೆಚ್ಚಾಗಿದೆ.

ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿ ಪಲ್ಲಿಯಾ, “ನಾವು ಮಾಡುತ್ತಿರುವ ಆಯಕಟ್ಟಿನ ಹೂಡಿಕೆಗಳು ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿವೆ.

ಅವು ಹೊಸ ಮಾರುಕಟ್ಟೆಗಳಲ್ಲಿ ಗೆಲ್ಲಲು, ಹೊಸ ಗ್ರಾಹಕರನ್ನು ಸೇರಿಸಿಕೊಳ್ಳಲು ಮತ್ತು ಪ್ರಸ್ತುತ ಇರುವ ಸಂಬಂಧಗಳನ್ನು ಬೆಳೆಸಿಕೊಳ್ಳಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ.

ಅದೇ ಸಮಯದಲ್ಲಿ, ನಮ್ಮ ಕನ್ಸಲ್ಟಿಂಗ್-ಆಧಾರಿತ ಮತ್ತು ಎಐ-ಚಾಲಿತ ಕಾರ್ಯತಂತ್ರವು ನಮಗೆ ದೊಡ್ಡ ಪರಿವರ್ತನೆಯ ಅವಕಾಶಗಳನ್ನು ಸೃಷ್ಟಿಸಲು ನೆರವಾಗುತ್ತಿದೆ. ತಂತ್ರಜ್ಞಾನ ಮತ್ತು ವ್ಯವಹಾರ ಪರಿವರ್ತನೆಗಾಗಿ ತಲುಪಬಹುದಾದ ಮಾರುಕಟ್ಟೆಯನ್ನು ವಿಸ್ತರಿಸುವ ದೀರ್ಘಕಾಲೀನ ಬೆಳವಣಿಗೆಯ ಚಾಲಕವಾಗಿ ನಾವು ಎಐ ಅನ್ನು ನೋಡುತ್ತೇವೆ.

ನಮ್ಮ ಎಐ-ನೇಟಿವ್ ಯುನಿಟ್ ಮತ್ತು ಎಐ ಕೊಡುಗೆಗಳ ವ್ಯಾಪ್ತಿಯು ಕಂಡುಬರುತ್ತಿರುವ ವೇಗದಲ್ಲಿ ಅದರ ಸಾಮರ್ಥ್ಯ ಈಗಾಗಲೇ ಪ್ರತಿಬಿಂಬಿತವಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ” ಎಂದು ಹೇಳಿದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಮಕ್ಕಳೇ ದೇಶದ ಭವಿಷ್ಯ; ಉತ್ತಮ ಶಿಕ್ಷಣ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಿದ್ದರಾಮಯ್ಯ ಕರೆ

ಸಕ್ರ ವರ್ಲ್ಡ್ ಹಾಸ್ಪಿಟಲ್‌ ನಿಂದ ಡಾ. ಆದಿಲ್ ಸಾದಿಕ್  ಅವರ ನೇತೃತ್ವದಲ್ಲಿ 1,000 ಯಶಸ್ವಿ ರೊಬೊಟಿಕ್-ನೆರವಿನ ಹೃದಯ ಶಸ್ತ್ರಚಿಕಿತ್ಸೆಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ರವರ ಸಮ್ಮುಖದಲ್ಲಿ ಸಚಿವರ ಜೊತೆಯಲ್ಲಿ ಮಹತ್ವದ ಸಭೆ

ಬೆಂಗಳೂರಿನಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ, ಕೆ.ಆರ್. ಪುರಂನಲ್ಲಿ ಹೊಸ ಮಳಿಗೆಯನ್ನು ಆರಂಭಿಸುತ್ತಿರುವ ಭೀಮ

ಬಿರ್ಲಾ ಓಪಸ್ ಪೇಂಟ್ಸ್ ಒಂದೇ ದಿನದಲ್ಲಿ 50 ಹೊಸ ಫ್ರಾಂಚೈಸಿ ಮಳಿಗೆಗಳನ್ನು ಪ್ರಾರಂಭಿಸುವ ಮೂಲಕ ಕರ್ನಾಟಕದಲ್ಲಿ 200 ಮಳಿಗೆಗಳ ಮೈಲಿಗಲ್ಲು ಸಾಧನೆ

13 ನವಂಬರನಲ್ಲಿ ಜಗತ್ತು ಅಂತ್ಯವಾಗುವುದಿಲ್ಲ.. ಡಾ.ಜಲಾಲುದ್ದೀನ್ ಖಚಿತ ಭವಿಷ್ಯ..!