--Ads--

ಧ್ವನಿ ಇಲ್ಲದ ಜನರಿಗೆ ಧ್ವನಿಯಾದರು, ಎಲ್ಲರಿಗೂ ಸಮಾನತೆ ಕೊಟ್ಟರು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ : ಶಾಸಕ ಎಸ್.ಸುರೇಶ್ ಕುಮಾರ್

On: November 27, 2026 5:44 AM
Follow ಮಾಡಿ
--Ads--

Whatsapp Channel

Join Now

Telegram Group

Join Now

* ವಿಜಯ ದರ್ಪಣ ನ್ಯೂಸ್……

ಧ್ವನಿ ಇಲ್ಲದ ಜನರಿಗೆ ಧ್ವನಿಯಾದರು, ಎಲ್ಲರಿಗೂ ಸಮಾನತೆ ಕೊಟ್ಟರು ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ : ಶಾಸಕ ಎಸ್.ಸುರೇಶ್ ಕುಮಾರ್

ರಾಜಾಜಿನಗರ ವಿಧಾನಸಭಾ ಕ್ಷೇತ್ರ: ದಯಾನಂದನಗರ ವಾರ್ಡ್, ಡಾ||ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಶಾಸಕ ಎಸ್.ಸುರೇಶ್ ಕುಮಾರ್ ರವರು ಮಾಲಾರ್ಪಣೆ, ಸಂವಿಧಾನ ಪೀಠಿಕೆ ಓದಿದರು ಬಿಬಿಎಂಪಿ ಮಾಜಿ ಸದಸ್ಯರುಗಳಾದ ಎಂ.ಮುನಿರಾಜು, ಶ್ರೀಮತಿ ಶಕೀಲ ಮುನಿರಾಜು, ಮಂಡಲ ಕಾರ್ಯದರ್ಶಿ ಎಂ.ಎಸ್.ಸಂಜಯ್ ಕುಮಾರ್ ರವರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ *ಎಸ್.ಸುರೇಶ್ ಕುಮಾರ್ ರವರು* ಮಾತನಾಡಿ ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಸಂವಿಧಾನ ಎಂಬ ಪವಿತ್ರ ಗ್ರಂಥವನ್ನು ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ರವರು ಕೊಡುಗೆ ನೀಡಿದರು.

ಸಂವಿಧಾನ ಸ್ವೀಕರಿಸಿದ ದಿನವನ್ನು ಸಂವಿಧಾನ ಗೌರವ ದಿನವಾಗಿ ಇಂದು ದೇಶಾದ್ಯಂತ ಅಚರಿಸಲಾಗುತ್ತಿದೆ. ಧ್ವನಿ ಇಲ್ಲದ ಜನರಿಗೆ ಧ್ವನಿಯಾದರು ಡಾ.ಬಿ.ಆರ್.ಅಂಬೇಡ್ಕರ್ ರವರು . ಸಂವಿಧಾನದ ಉದ್ದೇಶ, ಆಶಯವನ್ನು ಅರಿವು ಮೂಡಿಸಲು ಸಂವಿಧಾನ ಪೀಠಿಕೆ ಓದಲಾಗುತ್ತಿದೆ.

ಇಂದಿನ ಯುವ ಪೀಳಿಗೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಮಹತ್ವ ಕುರಿತು ಅಭ್ಯಾಸ ಮಾಡಬೇಕು.ಬಡವ , ಶ್ರೀಮಂತ, ಮೇಲು-ಕೀಳು ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನತೆ ಕೊಟ್ಟಿದ್ದು ನಮ್ಮ ಸಂವಿಧಾನ ಎಂದು ಹೇಳಿದರು.

ಮಂಡಲ ಅಧ್ಯಕ್ಷ ಸುದರ್ಶನ್, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಗೌಡ, ಪ್ರವೀಣ್ ಮತ್ತು ದಯಾನಂದನಗರ, ಬಂಡಿರೆಡ್ಡಿ ವೃತ್ತ ವಾರ್ಡ್ ಬಿಜೆಪಿ, ಮುಖಂಡರು, ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರು ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now