--Ads--

ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಮಲಿಯಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ

On: October 19, 2026 2:27 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಮಲಿಯಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆ 

ತಾವರೆಕೆರೆ : ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲಿಯಪ್ಪನಹಳ್ಳಿ ಗ್ರಾಮದ ಸುಮಾರು ನೂರಕ್ಕೂ ಅಧಿಕ ಮಂದಿ ಶಾಸಕ ಶರತ್ ಬಚ್ಚೇಗೌಡರ ಸಮ್ಮುಖದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಗ್ರಾಮದ ಪಂಚಾಯಿತಿ ಸದಸ್ಯ ಮುನಿರತ್ನಪ್ಪ ಅವರ ನೇತೃತ್ವದ ಎಲ್ಲಾ ಮುಖಂಡರು ಹಾಗೂ ಯುವ ಸಮೂಹ ಶಾಸಕ ಶರತ್ ಬಚ್ಚೇಗೌಡರ ಅಭಿವೃದ್ಧಿ ಕಾಮಗಾರಿ ಹಾಗೂ ತಾಲೂಕಿನಲ್ಲಿ ಅವರ ಶಾಂತಿಯುತ ಆಡಳಿತವನ್ನು ಮೆಚ್ಚಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಮುಖಂಡರು ಹಾಗೂ ಯುವಕರು ಶಾಸಕರಿಂದ ಪಕ್ಷದ ಶಾಲು ವಧಿಸುವುದರ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.

ಶಾಸಕ ಶರತ್ ಬಚ್ಚೇಗೌಡರು ಮಾತನಾಡಿ ಸೇರ್ಪಡೆಗೊಂಡ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರು ಯಾವುದೇ ಒಂದು ಷರತ್ತು ಅಥವಾ ಬೇಡಿಕೆ ಇಲ್ಲದೆ ನಿಸ್ವಾರ್ಥವಾಗಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ತಾಲೂಕಿನಲ್ಲಿ ನಡೆಯುತ್ತಿರುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಹಾಗೂ ತಾಲೂಕು ನನ್ನ ಆಡಳಿತ ಅವಧಿಯಲ್ಲಿ ಇರುವಂತಹ ಶಾಂತಿಯುತವನ್ನು ಗಮನಿಸಿ ಮುನಿರತ್ನಪ್ಪ ನೇತ್ರತ್ವದಲ್ಲಿ ಎಲ್ಲಾ ಮುಖಂಡರು ಹಾಗೂ ಗ್ರಾಮಸ್ಥರು ಅಧಿಕೃತವಾಗಿ ಇಂದು ಸೇರ್ಪಡೆಗೊಂಡಿದ್ದಾರೆ.

ಇದೇ ಒಗ್ಗಟ್ಟಿನಲ್ಲಿ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಜಯಶೀಲರನ್ನಾಗಿ ಮಾಡಲು ಎಲ್ಲರೂ ಪಣತೊಡಬೇಕು ಎಂದು ತಿಳಿಸಿದರು.

ಇದಕ್ಕೆ ಪರಿಶ್ರಮಿಸಿದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿವಿ ರಾಜಶೇಖರ್ ಗೌಡರಿಗೆ ಹಾಗೂ ನಂದಗುಡಿ ಹೋಬಳಿ ಮುಖಂಡರುಗಳಿಗೆ ಧನ್ಯವಾದಗಳು ತಿಳಿಸಿದರು. ನವಂಬರ್ ಮೊದಲನೇ ವಾರದಲ್ಲಿ ನಂದಗುಡಿ ಹೋಬಳಿ ಹಾಗೂ ಸೂಲಿಬೆಲೆ ಹೋಬಳಿಯ 55 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಹಾಗೂ ಶಿವನಾಪುರ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ಸೊಸೈಟಿ ನೂತನ ಕಟ್ಟಡ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರಿಂದ ನಂದಗುಡಿಯ ಕಾಲೇಜು ಮೈದಾನದಲ್ಲಿ ಬೃಹತ್ ಆದ ಕಾರ್ಯಕ್ರಮ ಮಾಡುವ ಯೋಜನೆಯಲ್ಲಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ರಾಜಶೇಖರ್ ಗೌಡ, ಎಲ್ & ಟಿ ಮಂಜುನಾಥ್, ಶಿವನಪುರ ಕಲ್ಲಪ್ಪ ,ಕಲ್ಕೆರೆ ಮಹದೇವಪ್ಪ, ಯುವಮುಖಂಡರಾದ ಮಂದೀಪ್ ಗೌಡ, ನಾರಾಯಣಪ್ಪ , ವೆಂಕಟೇಶ್ ಗುತ್ತಿಗೆದಾರ,pks ಶ್ರೀನಿವಾಸ್,ಹೋಬಳಿ ಮಟ್ಟದ ಮುಖಂಡರುಗಳು ಹಾಗೂ ಶಿವನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಕರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now