ವಿಜಯ ದರ್ಪಣ ನ್ಯೂಸ್………
ನಕಲಿ ತುಪ್ಪದ ಬೆನ್ನಲ್ಲೇ ನಕಲಿ ಜೇನುತುಪ್ಪ ದಂಧೆ ಪತ್ತೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ನಕಲಿ ತುಪ್ಪದ ಹಾವಳಿ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ನಕಲಿ ಜೇನುತುಪ್ಪ ಮಾರಾಟದ ದಂಧೆಯೂ ಬಯಲಾಗಿದೆ. ಅಸಲಿ ಜೇನುತುಪ್ಪದ ಹೆಸರಿನಲ್ಲಿ ಜೇನುಗೂಡಿಗೆ ಬೆಲ್ಲದ ಪಾಕ ಬೆರೆಸಿ ಮಾರಾಟ ಮಾಡುತ್ತಿದ್ದ ವಂಚಕರ ಕೃತ್ಯ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದೆ.
ಸಾರ್ವಜನಿಕರನ್ನು ನಂಬಿಸುವ ಉದ್ದೇಶದಿಂದ ವಂಚಕರು ಸರ್ಕಾರಿ ಕಚೇರಿಗಳು ಹಾಗೂ ದೊಡ್ಡ ಕಟ್ಟಡಗಳನ್ನು ಗುರಿಯಾಗಿಸಿಕೊಂಡಿದ್ದರು. ಕಟ್ಟಡಗಳಲ್ಲಿರುವ ಜೇನುಗೂಡನ್ನು ಸಾರ್ವಜನಿಕರ ಮುಂದೆಯೇ ಕಿತ್ತು, ತಾಜಾ ಜೇನುತುಪ್ಪವೆಂದು ಹೇಳಿ ಮಾರಾಟ ಮಾಡುತ್ತಿದ್ದರು. ಬಳಿಕ ಅದೇ ಜೇನುಗೂಡನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಬೆಲ್ಲದ ಪಾಕವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆರೆಸಿ ನಕಲಿ ಜೇನುತುಪ್ಪ ತಯಾರಿಸುತ್ತಿದ್ದರು ಎನ್ನಲಾಗಿದೆ.
ನಗರದ ವಾಜಪೇಯಿ ಲೇಔಟ್ ಸಮೀಪದ ನಿರ್ಜನ ಪ್ರದೇಶದಲ್ಲಿ ಬೆಲ್ಲದ ಪಾಕ ಬೆರೆಸಿ ನಕಲಿ ಜೇನುತುಪ್ಪ ತಯಾರಿಸುತ್ತಿದ್ದ ವೇಳೆ ಸ್ಥಳೀಯರು ವಂಚಕರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಅವರನ್ನು ಸುತ್ತುವರಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಿಕ್ಕಿಬಿದ್ದವರು ತಾವು ಅಸ್ಸಾಂ ಮೂಲದವರು ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರು ಬಾಂಗ್ಲಾದೇಶದವರು ಹಾಗೂ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಆರೋಪಗಳ ಕುರಿತುಠ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ನಕಲಿ ತುಪ್ಪದ ಪ್ರಕರಣದಿಂದ ಆತಂಕಗೊಂಡಿದ್ದ ಕಾಫಿನಾಡಿನ ಜನತೆಗೆ ಇದೀಗ ನಕಲಿ ಜೇನುತುಪ್ಪದ ದಂಧೆ ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
ಆಹಾರ ಪದಾರ್ಥಗಳ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ವಂಚನೆಗಳಿಗೆ ಕಡಿವಾಣ ಹಾಕಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾ








