ವಿಜಯ ದರ್ಪಣ ನ್ಯೂಸ್……
ಕುರುಬರಕುಂಟೆಯಲ್ಲಿ ವಿಜೃಂಭಣೆಯ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ: ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಗಿ

ದೇವನಹಳ್ಳಿ: ತಾಲ್ಲೂಕಿನ ಕುರುಬರಕುಂಟೆ ಗ್ರಾಮದಲ್ಲಿ ಇಂದು ಶ್ರೀ ಮುನೇಶ್ವರಸ್ವಾಮಿ ಮತ್ತು ಶ್ರೀ ಏಳುಮಂದಿ ಅಕ್ಕಯ್ಯಮ್ಮದೇವಿಯವರ ನೂತನ ವಿಗ್ರಹ, ವಿಮಾನಗೋಪುರ ಹಾಗೂ ಧ್ವಜಸ್ತಂಭ ಪ್ರತಿಷ್ಠಾಪನಾ ಮಹೋತ್ಸವವು ಅತ್ಯಂತ ವಿಜೃಂಭಣೆ ಮತ್ತು ಭಕ್ತಿಭಾವದಿಂದ ಜರುಗಿತು.
ಪವಿತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನಿಸರ್ಗ ಎಲ್. ಎನ್. ನಾರಾಯಣಸ್ವಾಮಿ ಅವರು ಭಾಗವಹಿಸಿ, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, “ನಾಡಿನ ಸಮಸ್ತ ಜನತೆಗೆ ಭಗವಂತನು ಸುಖ, ಶಾಂತಿ, ನೆಮ್ಮದಿ ಹಾಗೂ ಉತ್ತಮ ಮಳೆ-ಬೆಳೆಯೊಂದಿಗೆ ಸಮೃದ್ಧಿಯನ್ನು ಕರುಣಿಸಲಿ” ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಎಸ್.ಸಿ. ಘಟಕದ ಅಧ್ಯಕ್ಷ ರಾಮಣ್ಣ, ಮುಖಂಡರಾದ ಲಾಲಗೊಂಡನಹಳ್ಳಿ ರಾಮಣ್ಣ, ರಾಜಶೇಖರ್, ಸೋಮಶೇಖರ್, ವೆಂಕಟೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.











