ವಿಜಯ ದರ್ಪಣ ನ್ಯೂಸ್……..
ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ಆದ್ಯತಾ ವಿಭಾಗವನ್ನು ಸ್ವಯಂಚಾಲಿತಗೊಳಿದ
ಆಲ್ಸ್ಟಾಮ್ ಸಿಗ್ನಲಿಂಗ್ ವ್ಯವಸ್ಥೆ

• ಆಲ್ಸ್ಟಾಮ್ ನ ಸಿಗ್ನಲಿಂಗ್ ವ್ಯವಸ್ಥೆಯನ್ನು 7.5 ಕಿ.ಮೀ ಉದ್ದದ ಎತ್ತರಿಸಿದ ಆದ್ಯತಾ ವಿಭಾಗದಲ್ಲಿ ಅಳವಡಿಸಲಾಗಿದ್ದು, ಇದು ದಕ್ಷಿಣ ಬೆಂಗಳೂರಿನ ಆರು ನಿಲ್ದಾಣಗಳ ನಡುವಿನ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತದೆ.
• ಆಟೋಮ್ಯಾಟಿಕ್ ಟ್ರೈನ್ ಆಪರೇಷನ್ (ಎಟಿಒ) ಬಳಸುವ ಗ್ರೇಡ್ ಆಫ್ ಆಟೋಮೇಷನ್ 2 (ಜಿಒಎ2) ವ್ಯವಸ್ಥೆಯು, ವಾಣಿಜ್ಯ ಸೇವೆಯ ಮೊದಲ ದಿನದಿಂದಲೇ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಹೈ-ಫ್ರೀಕ್ವೆನ್ಸಿ ಕಾರ್ಯಾಚರಣೆಗೆ ಬೆಂಬಲ ನೀಡುತ್ತದೆ – ಭಾರತದ ಮೆಟ್ರೋ ಯೋಜನೆಯೊಂದರಲ್ಲಿ ಇದು ಮೊದಲನೆಯದಾಗಿದೆ.
• ಪಿಂಕ್ ಲೈನ್ ಯೋಜನೆಯು ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗಿನ (ಬಿ.ಎಂ.ಆರ್.ಸಿ.ಎಲ್.) ಆಲ್ಸ್ಟಾಮ್ ನ ದೀರ್ಘಕಾಲದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.
13 ನವೆಂಬರ್ 2026 – ಸ್ಮಾರ್ಟ್ ಮತ್ತು ಸುಸ್ಥಿರ ಸಂಚಾರ ಕ್ಷೇತ್ರದ ಜಾಗತಿಕ ಮುಂಚೂಣಿ ಸಂಸ್ಥೆಯಾದ ಆಲ್ಸ್ಟಾಮ್ ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ರೀಚ್ 6 ಆದ್ಯತಾ ವಿಭಾಗದ ವಾಣಿಜ್ಯ ಕಾರ್ಯಾಚರಣೆಯ ಆರಂಭವನ್ನು ಸಂಭ್ರಮಿಸುತ್ತಿದೆ. ಈ ಮಾರ್ಗವು ಆಲ್ಸ್ಟಾಮ್ನ ಕಮ್ಯುನಿಕೇಷನ್-ಬೇಸ್ಡ್ ಟ್ರೈನ್ ಕಂಟ್ರೋಲ್ (ಸಿಬಿಟಿಸಿ) ಸಿಗ್ನಲಿಂಗ್ ವ್ಯವಸ್ಥೆಯನ್ನು ಹೊಂದಿದೆ.
7.5 ಕಿ.ಮೀ ಉದ್ದದ ಈ ಎತ್ತರಿಸಿದ ಮಾರ್ಗವು ದಕ್ಷಿಣ ಬೆಂಗಳೂರಿನ ಪ್ರಮುಖ ವಸತಿ, ಶೈಕ್ಷಣಿಕ ಮತ್ತು ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುತ್ತದೆ. ಇದು ಕರ್ನಾಟಕ ರಾಜ್ಯದ ರಾಜಧಾನಿಯ ನಗರ ಪ್ರಯಾಣಿಕರಿಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಎತ್ತರಿಸಿದ « ಆರ್6 » ಆದ್ಯತಾ ವಿಭಾಗವು ವಾಣಿಜ್ಯ ಸೇವೆಯ ಮೊದಲ ದಿನದಿಂದಲೇ ಮುಖ್ಯ ಮಾರ್ಗದಲ್ಲಿ ಆಟೋಮ್ಯಾಟಿಕ್ ಟ್ರೈನ್ ಆಪರೇಷನ್ (ಎಟಿಒ) ನೊಂದಿಗೆ ಗ್ರೇಡ್ ಆಫ್ ಆಟೋಮೇಷನ್ 2 (ಜಿಒಎ2) ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಹಂತದ ಸ್ವಯಂಚಾಲಿತ ವ್ಯವಸ್ಥೆಯಲ್ಲಿ, ರೈಲಿನ ವೇಗವರ್ಧನೆ ಮತ್ತು ಬ್ರೇಕಿಂಗ್ ಸ್ವಯಂಚಾಲಿತ ವಾಗಿರುತ್ತವೆ, ಆದರೆ ಪ್ರಮುಖ ಕಾರ್ಯಾಚರಣೆಯ ಜವಾಬ್ದಾರಿಗಳಿಗೆ ಚಾಲಕರು ಇರುತ್ತಾರೆ.
ಈ ಯೋಜನೆಯು ಸಂಪೂರ್ಣವಾಗಿ ಕಾರ್ಯಾರಂಭಗೊಂಡಿರುವ ಕೊತ್ತನೂರು ಡಿಪೋವನ್ನು ಸಹ ಒಳಗೊಂಡಿದ್ದು, ಇದು ಆಟೋಮ್ಯಾಟಿಕ್ ಟ್ರೈನ್ ಪ್ರೊಟೆಕ್ಷನ್ (ಎಟಿಪಿ) ಮತ್ತು ಎಟಿಒ ಹೊಂದಿರುವ ಸಮಗ್ರ ಪರೀಕ್ಷಾ ಹಳಿಯನ್ನು ಹೊಂದಿದೆ. ಈ ವ್ಯವಸ್ಥೆಗಳು ಒಟ್ಟಾಗಿ ಸುರಕ್ಷಿತ, ವಿಶ್ವಾಸಾರ್ಹ ಮತ್ತು ನಿರಂತರ ಮೆಟ್ರೋ ಕಾರ್ಯಾಚರಣೆಗೆ ಬೆಂಬಲ ನೀಡುತ್ತವೆ.
ಆಲ್ಸ್ಟಾಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಒಲಿವಿಯರ್ ಲೋಯಿಸನ್, “ನಮ್ಮ ಸಿಬಿಟಿಸಿ ತಂತ್ರಜ್ಞಾನವು ಬೆಂಗಳೂರು ಮೆಟ್ರೋದ ಪಿಂಕ್ ಲೈನ್ ಗೆ ಶಕ್ತಿ ತುಂಬುತ್ತಿರುವುದನ್ನು ನೋಡಲು ನಮಗೆ ಹೆಮ್ಮೆಯಾಗುತ್ತಿದೆ. ನಗರವು ಸುಸ್ಥಿರ ಮತ್ತು ಉತ್ತಮ ಸಂಪರ್ಕ ಹೊಂದಿರುವ ಭವಿಷ್ಯದತ್ತ ಸಾಗಲು ನೆರವಾಗುವಂತೆ ವಿಶ್ವದರ್ಜೆಯ, ವಿಶ್ವಾಸಾರ್ಹ ಸಿಗ್ನಲಿಂಗ್ ಪರಿಹಾರಗಳನ್ನು ಒದಗಿಸುವ ನಮ್ಮ ತಂಡದ ಬದ್ಧತೆಯನ್ನು ಈ ಮೈಲಿಗಲ್ಲು ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು.
ಸೇವೆ ಆರಂಭಿಸುತ್ತಿರುವ ಈ ಹೊಸ ಎತ್ತರಿಸಿದ ವಿಭಾಗದ ಆರು ನಿಲ್ದಾಣಗಳೆಂದರೆ: ಸ್ವಾಗತ್ ರಸ್ತೆ, ಜಯದೇವ ಆಸ್ಪತ್ರೆ, ಜೆ.ಪಿ. ನಗರ 4ನೇ ಹಂತ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ , ಹುಳಿಮಾವು ಮತ್ತು ಗೊಟ್ಟಿಗೆರೆ. ಜಯದೇವ ಆಸ್ಪತ್ರೆ ನಿಲ್ದಾಣವು ಹಳದಿ ಮಾರ್ಗದೊಂದಿಗೆ ಪ್ರಮುಖ ಇಂಟರ್ಚೇಂಜ್ ಸೌಲಭ್ಯವನ್ನು ಒದಗಿಸುತ್ತಿದ್ದು, ದಕ್ಷಿಣ ಬೆಂಗಳೂರಿನಾದ್ಯಂತದ ಸಮುದಾಯಗಳನ್ನು ಮತ್ತಷ್ಟು ಬೆಸೆಯುತ್ತದೆ.
ಆಲ್ಸ್ಟಾಮ್ ನ ಸಿಗ್ನಲಿಂಗ್ ವ್ಯವಸ್ಥೆಯು ರೈಲುಗಳು ಮತ್ತು ಹಳಿಯ ಬದಿಯ ಉಪಕರಣಗಳ ನಡುವೆ ನಿರಂತರ ಸಂವಹನವನ್ನು ಒದಗಿಸುತ್ತದೆ; ಇದು ರೈಲುಗಳ ನಿಖರವಾದ ಸ್ಥಾನವನ್ನು ಗುರುತಿಸಲು ಮತ್ತು ಈ ತಂತ್ರಜ್ಞಾನವನ್ನು ಅಳವಡಿಸಲಾದ ಆರು ರೈಲುಗಳ ಕಾರ್ಯಾಚರಣೆಗೆ ಬೆಂಬಲ ನೀಡುತ್ತದೆ. ನಗರದ ಪೂರ್ವ ಭಾಗದಲ್ಲಿರುವ ಬೈಯಪ್ಪನಹಳ್ಳಿಯ ಕಾರ್ಯಾಚರಣೆ ನಿಯಂತ್ರಣ ಕೇಂದ್ರದಿಂದ ಅರ್ಬಲಿಸ್ ವಿಷನ್ ಪ್ಲಾಟ್ಫಾರ್ಮ್ ಮೂಲಕ ರೈಲು ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಲಾಗುತ್ತದೆ. ಆಲ್ಸ್ಟಾಮ್ನ ಹೆಲ್ತ್ಹಬ್ ಮುನ್ಸೂಚಕ ನಿರ್ವಹಣಾ ಪರಿಹಾರವು ಸಿಗ್ನಲಿಂಗ್ ಯಂತ್ರಗಳ ಸ್ಥಿತಿಗತಿ ಆಧಾರಿತ ನೈಜ-ಸಮಯದ ಮೇಲ್ವಿಚಾರಣೆಯನ್ನು ಒದಗಿಸುತ್ತದೆ; ಇದು ತಾಂತ್ರಿಕ ಅಡಚಣೆಗಳನ್ನು ಕಡಿಮೆ ಮಾಡಲು ಮತ್ತು ನಿರ್ವಹಣಾ ವೆಚ್ಚವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ.
ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗೆ ದೀರ್ಘಕಾಲದ ಬಾಂಧವ್ಯ ಪಿಂಕ್ ಲೈನ್ ಯೋಜನೆಯು ಬೆಂಗಳೂರು ಮೆಟ್ರೋ ರೈಲು ನಿಗಮದೊಂದಿಗಿನ (ಬಿ.ಎಂ.ಆರ್.ಸಿ.ಎಲ್.) ಆಲ್ಸ್ಟಾಮ್ ನ ದೀರ್ಘಕಾಲದ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. 2009 ಮತ್ತು 2017 ರ ನಡುವೆ ಮೊದಲನೇ ಹಂತದ ಪರ್ಪಲ್ ಮತ್ತು ಗ್ರೀನ್ ಲೈನ್ ಗಳಿಗೆ ಒದಗಿಸಲಾದ ಸಿಗ್ನಲಿಂಗ್ ವ್ಯವಸ್ಥೆ ಹಾಗೂ ಎರಡನೇ ಹಂತಕ್ಕೆ ಪ್ರಸ್ತುತ ಪ್ರಗತಿಯಲ್ಲಿರುವ ಟ್ರಾಕ್ಷನ್ ಮತ್ತು ವಿದ್ಯುತ್ ಸರಬರಾಜು ವಿದ್ಯುದ್ದೀಕರಣ ಕಾರ್ಯದ ನಂತರ, ಇದು ಬಿ.ಎಂ.ಆರ್.ಸಿ.ಎಲ್. ನೊಂದಿಗೆ ಆಲ್ಸ್ಟಾಮ್ನ ಮೂರನೇ ಒಪ್ಪಂದವಾಗಿದೆ.
30 ವರ್ಷಗಳಿಗೂ ಹೆಚ್ಚಿನ ಸಿಬಿಟಿಸಿ ಪರಿಣತಿ, ವಿಶ್ವದಾದ್ಯಂತ 190 ಮೆಟ್ರೋ ಮಾರ್ಗಗಳಲ್ಲಿ ಆಲ್ಸ್ಟಾಮ್ ಪರಿಹಾರಗಳ ಆಯ್ಕೆ ಮತ್ತು ಭಾರತದಾದ್ಯಂತ 18 ಮಾರ್ಗಗಳಲ್ಲಿ ಅಳವಡಿಕೆಯಾಗಿರುವ ಅಥವಾ ಪ್ರಗತಿಯಲ್ಲಿರುವ ಯೋಜನೆಗಳೊಂದಿಗೆ, ಈ ಯೋಜನೆಯು ದೇಶದ ನಗರ ಸಂಚಾರ ವ್ಯವಸ್ಥೆಗೆ ಆಲ್ಸ್ಟಾಮ್ ನ ಕೊಡುಗೆಯನ್ನು ಮತ್ತಷ್ಟು ಸದೃಢಗೊಳಿಸುತ್ತದೆ.










