--Ads--

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ಕನ್ನಡಶ್ರೀ ವಿದ್ಯಾಶ್ರೀ ಪ್ರಶಸ್ತಿ ಪ್ರದಾನ

On: November 24, 2026 1:12 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……..

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿಯಿಂದ ಕನ್ನಡಶ್ರೀ ವಿದ್ಯಾಶ್ರೀ ಪ್ರಶಸ್ತಿ ಪ್ರದಾನ

ಬೆಂಗಳೂರು, ಶಾಂತಿನಗರ: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು ಕನ್ನಡಶ್ರೀ ಮತ್ತು ವಿದ್ಯಾಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ್ ಮೂರ್ತಿ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ, ನಿರ್ದೇಶಕರಾದ ಅಬ್ದುಲ್ ಅಹದ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ಕೆ.ಎಸ್.ಎಂ.ಹುಸೇನ್ ರವರು ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಎಲ್.ಹನುಮಂತಯ್ಯ ರವರು ಮಾತನಾಡಿ ದೇಶದಲ್ಲಿ ಸ್ವಾತಂತ್ರ್ಯ ಬಂದಾಗ 33ಕೋಟಿ ಜನಸಂಖ್ಯೆ ಇತ್ತು ಭಾಷವಾರು ಪ್ರಾಂತ್ಯ ರಚನೆ ಮಾಡಿದಾಗ ಆಡಳಿತ ಸುಲಭವಾಗುತ್ತದೆ ಎಂದು ರಾಜ್ಯಗಳ ನಿರ್ಮಾಣ ಮಾಡಿದರು. ಹೈದರಾಬಾದ್ ಕರ್ನಾಟಕ, ಮದ್ರಾಸ್, ಮುಂಬಾಯಿ ಹಲವಾರು ಭಾಗದಲ್ಲಿ ಕನ್ನಡಿಗರು ಇದ್ದರು ಏಕೀಕರಣ ಚಳುವಳಿಯಿಂದ ಸಮಗ್ರ ಕರ್ನಾಟಕವಾಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದಲ್ಲಿ ಮೈಸೂರು ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಹಾರಾಜರು ಮಾಡಿದರು. ಕನ್ನಂಬಾಡಿ ಕಟ್ಟೆಯಿಂದ ಕಟ್ಟಿದರು. ಇದರಿಂದ ಬೆಂಗಳೂರು ನಗರದ ಜನರು ನೀರು ಕುಡಿಯುತ್ತಿದ್ದಾರೆ ಇದಕ್ಕೆ ಕಾರಣ ಮಹಾರಾಜರು. ತಮ್ಮ ಚಿನ್ನಾಭರಣಗಳನ್ನು ಮಾರಿ ಅಣೆಕಟ್ಟು ಕಟ್ಟಲು ಸಹಾಯ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು. 2 ಸಾವಿರ ವರ್ಷಗಳ ಕ್ಕಿಂತ ಹೆಚ್ಚು ಇತಿಹಾಸವಿದೆ ಕನ್ನಡ ಭಾಷೆ. ಪ್ರಪಂಚದಲ್ಲಿ ಮೊಟ್ಟ ಮೊದಲ ಪ್ರಜಾಪ್ರಭುತ್ವ ಎಂದರೆ ಅನುಭವ ಮಂಟಪದ ವೇದಿಕೆ ನಿರ್ಮಾಣ ಮಾಡಿದರು

ಅದರ ನೇತಾರ ಬಸವಣ್ಣರವರು. ಕನ್ನಡ ಭಾಷೆಯಲ್ಲಿ ಶರಣರು ವಚನಗಳನ್ನು ರಚಿಸಿದರು, ಪುರಂದಾಸರ, ಕನಕದಾಸರು, ವ್ಯಾಸರು ಕನ್ನಡ ಹಿರಿಮೆಯನ್ನು ಹಿಗ್ಗಿಸಿದರು. ಕುವೆಂಪು ಹೇಳಿದರು ಹುಟ್ಟುವಾಗ ದೈವ ಮಾನವ, ಬೆಳದು ವಿಶ್ವಮಾನವನಾಗಬೇಕು ಎಂದು ಹೇಳಿದರು.

ಕನ್ನಡ ಭಾಷೆಯನ್ನು ಕಟ್ಟುವ ಸಂಕಲ್ಪ ಮಾಡಬೇಕು, ಹಳ್ಳಿಯ ಶಾಲೆಗಳ ಸ್ಥಿತಿ ಬಹಳ ಶೋಚನೀಯವಾಗಿದೆ. ದೇವಸ್ಥಾನ ಕಟ್ಟುವ ಹಣವನ್ನು ಸರ್ಕಾರಿ ಶಾಲೆ ಕಟ್ಟಲು ಕೊಟ್ಟಿದ್ದರೆ ಎ.ಸಿ.ರೂಂನಲ್ಲಿ ಕುಳಿತು ಮಕ್ಕಳು ಓದುವ ಸಂದರ್ಭ ಬರುತ್ತಿತು.

ಪೋಷಕರು ಮಕ್ಕಳು ಇಂಗ್ಲೀಷ್ ಶಾಲೆಯಲ್ಲಿ ಕಲಿತರೆ ಮಾತ್ರ ಉದ್ದಾರವಾಗುತ್ತಾರೆ ಎಂಬ ನಂಬಿಕೆ ಇಟ್ಟುಕೊಂಡಿದ್ದಾರೆ. ಕನ್ನಡಿಗರಿಗೆ ಶಿಕ್ಷಣ ಸಿಗಬೇಕು, ಉದ್ಯೋಗ ಸಿಗಬೇಕು, ನೆಮ್ಮದ್ಧಿಯಿಂದ ಜೀವನ ಸಾಗಿಸಬೇಕು ಎಂದರೆ ಶಿಕ್ಷಣ ಸಿಗಬೇಕು. ಸಮ ಸಮಾಜ , ನಿರುದ್ಯೋಗಿ ಇಲ್ಲದ ಕರ್ನಾಟಕ ನಿರ್ಮಾಣ ಮಾಡಬೇಕು.

ಜಾನಪದ ಗಾಯಕಿ ಶ್ರೀಮತಿ ಸವಿತ ಗಣೇಶ್ ಮತ್ತು ಜನಪದ ಗಾಯಕ ಡಾ.ಕಡಬಗೆರೆ ಮುನಿರಾಜು ಅವರನ್ನು ಬಿಎಂಟಿಸಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ನಾಡು, ನುಡಿಗೆ ಶ್ರಮಿಸುತ್ತಿರುವ ಬಿಎಂಟಿಸಿ ಅಧಿಕಾರಿ, ನೌಕರರಿಗೆ ಕನ್ನಡಶ್ರೀ ಪ್ರಶಸ್ತಿ, ಎಸ್.ಎಸ್.ಎಲ್.ಸಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪದಾಧಿಕಾರಿಗಳಾದ ಎಸ್.ಜೆ.ಮೇಟಿ, ಸುರೇಶ್ ಹೆಚ್.ಕೆ, ರಮೇಶ್ ವಿ, ಶಿವಕುಮಾರ್ ಆರ್, ತಿಮ್ಮರಾಯಿಗೌಡ ಎಸ್.ಈ, ನವೀನ್ ವಿ, ಗೌರಮ್ಮ, ಆನಿಲ್ ಕುಮಾರ್, ಎನ್.ದೇವರಾಜ್, ಮಂಜುನಾಥ್ ಎಸ್, ರೇಖಾ ಮಾದರ ಮತ್ತು ಅಧಿಕಾರಿ, ನೌಕರರು ಪಾಲ್ಗೊಂಡಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಸಮರ್ಪಕ ರಾಷ್ಟ್ರೀಯ ಉದ್ಯೋಗ ನೀತಿ ಜಾರಿ, ಕನ್ನಡಿಗರಿಗೆ ಉದ್ಯೋಗ ಸಿಗಬೇಕು: ಎಲ್.ಹನುಮಂತಯ್ಯ

ರಸ್ತೆ ಅಪಘಾತಗಳ ನಿಯಂತ್ರಣಕ್ಕೆ ಎ.ಐ (AI) ತಂತ್ರಜ್ಞಾನದ ಬಲ: ತುರ್ತು ಚಿಕಿತ್ಸೆಗೆ 2.50 ಲಕ್ಷ ರೂ. ವರೆಗೆ ನೆರವು : ಸಿಎಸ್ ಡಾ. ಶಾಲಿನಿ ರಜನೀಶ್

ಬೆಂಗಳೂರಿನಲ್ಲಿ 74 ವರ್ಷದ ವೃದ್ಧರಿಗೆ ಅಪರೂಪದ ಅನ್ನನಾಳದ ಗಡ್ಡೆಗೆ ಯಶಸ್ವಿ ರೊಬೊಟಿಕ್ ಶಸ್ತ್ರಚಿಕಿತ್ಸೆ

“ವಿಶ್ವ ಪರಂಪರೆಯ ಬೆಳಕಲ್ಲಿ ರಾಕೆಟ್‌ಗಳ ರಾಜ ಟಿಪ್ಪು – ಬೆಂಗಳೂರು ಅರಮನೆಯ ಫಲಕ ಹೇಳುವ ವಿಜ್ಞಾನ ಗಾಥೆ”

71ನೇ ಕನ್ನಡ ರಾಜ್ಯೋತ್ಸವ, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ-ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

ಕರ್ನಾಟಕ ರಾಜ್ಯ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಆರ್.ಮಂಜುನಾಥ್ ಅಧಿಕಾರ ದುರ್ಬಳಕೆ, ಸ್ವಜನ ಪಕ್ಷಪಾತ -ಗಂಭೀರ ಅರೋಪ ಮಾಡಿದ ಮಾಜಿ ಅಧ್ಯಕ್ಷ ಜಗನ್ನಾಥ್ ಜಿ.ಶೇಗಜಿ