ವಿಜಯ ದರ್ಪಣ ನ್ಯೂಸ್…..
ಕೊಡಗಿನಲ್ಲಿ ಜೆಡಿಎಸ್ಗೆ ಹೊಸ ಚೈತನ್ಯ..!

ಸೋಮವಾರಪೇಟೆ: ಕೊಡಗು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭ..! ಜೆಡಿಎಸ್ ಪಕ್ಷವನ್ನು ಬೂತ್ ಮಟ್ಟದಿಂದ ಬಲಪಡಿಸಲು ಹೈಕಮಾಂಡ್ ಭರ್ಜರಿ ತೀರ್ಮಾನ
ಕೊಡಗಿನ ಮಣ್ಣಿನ ಮಕ್ಕಳಿಗೆ ಮಹತ್ವದ ಜವಾಬ್ದಾರಿ ಸಿಕ್ಕಿದೆ. ನೂತನ ತಂಡವನ್ನು ಆಯ್ಕೆ ಮಾಡಲಾಯಿತು
*ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಉಸ್ತುವಾರಿಯಾಗಿ ವಿ.ಎಸ್. ಸುಬ್ರಮಣಿ (ಕಾರ್ಮಾಡ್ ಸುಬ್ಬಣ್ಣ), ಜಿಲ್ಲಾ ಅಧ್ಯಕ್ಷರು -ಹೆಚ್.ಡಿ. ಪ್ರವೀಣ್ (ಸೋಮವಾರಪೇಟೆ), ಜಿಲ್ಲಾ ಕಾರ್ಯಾಧ್ಯಕ್ಷರು : ಸಿ.ಎಲ್. ವಿಶ್ವ*(ನಂಜರಾಯ ಪಟ್ಟಣ)
ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ – ಕೋತೂರು ಸುರೇಶ್ ರವರನ್ನು ಕಾರ್ಯಕರ್ತರ ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಸೋಮವಾರಪೇಟೆಯ ಅಟಲ್ ಜಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಜೆ ಡಿ ಎಸ್ ಕಾರ್ಯಕರ್ತರ ಸಭೆಯಲ್ಲಿ
ಜೆಡಿಎಸ್ ರಾಜ್ಯಾಧ್ಯಕ್ಷರು, ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲೇ ಈ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಜೊತೆಗೆ ಮಾಜಿ ಸಚಿವ ಸಾ.ರಾ. ಮಹೇಶ್ ಹಾಗೂ ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ಮಹದೇವ್ ಸಾಥ್ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ ಬೆನ್ನಲ್ಲೇ ಜಿಲ್ಲೆಯಾದ್ಯಂತ ಹಿರಿಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು ಎಂದು
ಕೊಡಗು ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷ ಶಿಯಾಬುದ್ದಿನ್ ವಿಪಿಎಸ್ ಹೇಳಿದರು.











