--Ads--

ಬೆಂಗಳೂರು ದಕ್ಷಿಣ ಜಿಲ್ಲೆಯ ಶಂಭೂಗೌಡ, ಶಿವಮೊಗ್ಗದ ಅಪರಂಜಿ ಶಿವರಾಜ್ ಅವರು ರಂಗಭೂಮಿ ದತ್ತಿ ಪ್ರಶಸ್ತಿ

On: November 27, 2026 5:19 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಬೆಂಗಳೂರು ದಕ್ಷಿಣ ಜಿಲ್ಲೆಯ ಶಂಭೂಗೌಡ, ಶಿವಮೊಗ್ಗದ ಅಪರಂಜಿ ಶಿವರಾಜ್ ಅವರು ರಂಗಭೂಮಿ ದತ್ತಿ ಪ್ರಶಸ್ತಿ

ಬೆಂಗಳೂರು : ಜಿಲ್ಲೆಯ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕೊಡಮಾಡುವ *2026 ರ ಸಾಲಿನ ಅಕ್ಕೂರು ಹೊಸಹಳ್ಳಿ ದಿ.ದೇಶಿಗೌಡ ಶ್ರೀಮತಿ ನಿಂಗಮ್ಮ ರಂಗಭೂಮಿ ದತ್ತಿ ಪ್ರಶಸ್ತಿಗೆ* ತಾಲೂಕಿನ ನಾಗವಾರದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ನಿರ್ದೇಶಕರಾಗಿ, ಕರವೇ , ಸಿಂ.ಲಿಂ.ನಾಗರಾಜು ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ, ರಂಗಭೂಮಿ ಕಲಾವಿದರಾಗಿ ಹಲವು ಪಾತ್ರಗಳಲ್ಲಿ ನಟಿಸಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ಎನ್.ಎಂ.ಶಂಭೂಗೌಡ ಅವರನ್ನು ಹಾಗೂ ಶಿವಮೊಗ್ಗದ ಹಾಸ್ಯ ಕಲಾವಿದರಾಗಿ, ಹಿರಿತೆರೆ ಕಿರುತೆರೆ, ರಂಗಭೂಮಿ ಕಲಾವಿದರಾಗಿ ನಾಡಿನಾದ್ಯಂತ ನೂರಾರು ಕಾರ್ಯಕ್ರಮಗಳನ್ನು ನೀಡುತ್ತಾ ಬರುತ್ತಿರುವ ರಂಗಕರ್ಮಿ, ರಂಗ ನಿರ್ದೇಶಕರಾದ ಶ್ರೀ ಅಪರಂಜಿ ಶಿವರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ್ (ಸಿಸಿರಾ) ದತ್ತಿ ದಾನಿ ಇಂ.ದಾಳೇಗೌಡ ಹೊಸಹಳ್ಳಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ನವೆಂಬರ್ 29 ನೇ ತಾರೀಖು ಭಾನುವಾರ ಶಿವಮೊಗ್ಗದ ಭದ್ರಾ ಪ್ರಾಜೆಕ್ಟ್ ನ ಕೆಪಿಸಿ ರಂಗಮಂದಿರದಲ್ಲಿ ಪತ್ರ ಸಂಸ್ಕೃತಿ ಸಂಘಟನೆಯ 25 ವರ್ಷದ ಅಂಗವಾಗಿ ಏರ್ಪಡಿಸಿರುವ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ‌ಭೋಜರಾಜ ಸೊಪ್ಪಿಮಠ, ಶಕುಂತಲಾ ನಾ.ದಾಳೇರ್ ಮತ್ತು ಓಂಕಾರಯ್ಯ ತವನಿಧಿ ಅವರು ಪ್ರದಾನ ಮಾಡುವರು. ಹೊಸಹಳ್ಳಿ ಡಿ.ಸುಂದರ್ ಅವರ *ಕಾಲ್ಗೆಜ್ಜೆ* ಕವನ ಸಂಕಲನ ಲೋಕಾರ್ಪಣೆ, ಹಿಂದಿನ ದಿನ ಶನಿವಾರ ಸಂಜೆ ಡಾ.ಹೆಚ್.ಎನ್.ಮೀರಾ ಏಕವ್ಯಕ್ತಿ ಅಭಿನಯದ *ಪಂಚವರ್ಣೆ* ನಾಟಕ ಪ್ರದರ್ಶನ ಇರಲಿದೆ. ಪ್ರಶಸ್ತಿಯು ಶಾಲು,ಹಾರ,ಫಲ,ಪಲಕ, ಪ್ರಮಾಣ ಪತ್ರ, ಗೌರವ ಧನ ನೀಡಿ ಗೌರವಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now