ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ರಾಜೀನಾಮೆಗೆ ಆಗ್ರಹಿಸಿ ವೇದಿಕೆಯ ಸಂಸ್ಥಾಪಕ ಅದ್ಯಕ್ಷ ಸುಧಾಕರ್ ಯಾಧವ್ ಒತ್ತಾಯ

ವಿಜಯ ದರ್ಪಣ ನ್ಯೂಸ್

ಅಕ್ಟೋಬರ್ 20

ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ್ ರಾಜೀನಾಮೆಗೆ ಆಗ್ರಹಿಸಿ ವೇದಿಕೆಯ ಸಂಸ್ಥಾಪಕ ಅದ್ಯಕ್ಷ ಸುಧಾಕರ್ ಯಾಧವ್ ಒತ್ತಾಯ

ದೇವನಹಳ್ಳಿ : ಕರ್ನಾಟಕ ರಾಜ್ಯ ಯಾದವ ಸಂಘ ಒಂದು ರಾಜಕೀಯ ಪಕ್ಷಕ್ಕೆ ಸೀಮಿತಗೊಂಡಿಲ್ಲ, ಯಾದವ ಜನಾಂಗವು ಆರ್ಥಿಕ, ಸಾಮಾಜಿಕ, ಶಿಕ್ಷಣಿಕ, ರಾಜಕೀಯ ಕ್ಷೇತ್ರಗಳಲ್ಲಿ ಮುಂದುವರೆಯುವ ಉದ್ದೇಶದಿಂದ ಕರ್ನಾಟಕ ರಾಜ್ಯ ಯಾದವ ಸಂಘ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಾದ್ಯಂತ ಜನಾಂಗದ ಸಂಘಟನೆಯನ್ನು ಹೊಂದಿದೆ. ಇತ್ತೀಚೆಗೆ ಯಾದವ ಸಂಘದ ರಾಜ್ಯಾದ್ಯಕ್ಷ ಸ್ಥಾನ ನಿರ್ವಹಿಸುತಿದ್ದ ಶ್ರೀನಿವಾಸ್ ಅವರು ಕಾಂಗ್ರೆಸ್ ಪಕ್ಷ ಸೇರ್ಪಡೆ ಗೊಂಡಿದ್ದಾರೆ.

ಜನಾಂಗದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಉದ್ಬವಿಸಬಾರದು ಎಂಬ ಉದ್ದೇಶದಿಂದ ಅದಿಕಾರ ವಹಿಸಿ ಕೊಂಡಿರುವ ಶ್ರೀನಿವಾಸ್ ಅವರು ಈ ಕೂಡಲೇ ರಾಜೀನಾಮೆ ನೀಡುವಂತೆ ಕರ್ನಾಟಕ ಯಾದವ ಯುವ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸುಧಾಕರ್ ಯಾದವ ಅವರು ಒತ್ತಾಯಿಸಿದರು.

ಪತ್ರಿಕಾ ಹೇಳಿಕೆಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯದ ರಕ್ಷಣೆಯೇ ನಮ್ಮ ಮೊದಲ ಆದ್ಯತೆ
ಡಿಟಿ.ಶ್ರೀನಿವಾಸ್ ರವರು ಕೂಡಲೇ ಕರ್ನಾಟಕ ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಆ ಸ್ಥಾನಕ್ಕೆ ಸಮುದಾಯದ ಮೇಲೆ ಅಭಿಮಾನ ಇರುವ ನಾಯಕನನ್ನು ನೇಮಕ ಮಾಡಬೇಕೆಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯಾದವ ಸಂಘದ ರಾಜ್ಯಾಧ್ಯಕ್ಷ ಡಿಟಿ ಶ್ರೀನಿವಾಸ್ ರವರು ಅಖಂಡ ಕರ್ನಾಟಕ ಗೊಲ್ಲ (ಯಾದವ) ಸಮಾಜದ ಮತ್ತು ಬಿಜೆಪಿ, ಜೆಡಿಎಸ್, ಇತರೆ ರಾಜಕೀಯ ಪಕ್ಷದಲ್ಲಿ ಗುರುತಿಸಿ ಕೊಂಡಿರುವ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸದೆ ಕರ್ನಾಟಕ ರಾಜ್ಯ ಯಾದವ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ರಾಜ್ಯಾಧ್ಯಕ್ಷರು ಒಳ ಗೊಂಡಂತೆ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೀವಿ ಎಂದು ಕಾಂಗ್ರೆಸ್ ಅಧ್ಯಕ್ಷ ಡಿಕೆ. ಶಿವಕುಮಾರ್ ಅವರಿಗೆ ಅಧಿಕೃತವಾಗಿ ಪಟ್ಟಿಯನ್ನು ನೀಡಿರುತ್ತಾರೆ.

ಆದ್ದರಿಂದ ಯಾದವ ಸಮಾಜದ ಒಳಿತಿಗಾಗಿ ಕರ್ನಾಟಕ ಯಾದವ ಯುವ ವೇದಿಕೆ ಇಂದು ಡಿಟಿ. ಶ್ರೀನಿವಾಸರವರನ್ನು ಕರ್ನಾಟಕ ರಾಜ್ಯ ಯಾದವ ಸಂಘವನ್ನು ವಿಸರ್ಜನೆ ಮಾಡಿ ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಅಗ್ರಹಿಸುತ್ತಿದ್ದೇವೆ.

ನಾವು ಹಿಂದೆ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯ ಯಾದವ ಸಂಘ ರಾಜಕೀಯೇತರ ವ್ಯಕ್ತಿಗಳು ಯಾದವ ಸಮಾಜದ ಅಧ್ಯಕ್ಷರಾಗಿ ಸಮಾಜದ ಸಂಘಟನೆಯನ್ನು ಮಾಡಿದ್ದಾರೆ ಆದರೆ ಇತ್ತೀಚಿನ ದಿನಗಳಲ್ಲಿ ಯಾದವ ಸಮಾಜವನ್ನು ರಾಜಕೀಯಕ್ಕೋಸ್ಕರ ಮತ್ತು ಅವರ ಸ್ವಾರ್ಥಕ್ಕೋಸ್ಕರ ಒಡೆದು ಆಳುವ ರೀತಿಯಲ್ಲಿ ಇಂದು ರಾಜ್ಯಾಧ್ಯಕ್ಷರು ಯಾದವ ಸಮಾಜವನ್ನು ನಡೆಸಿಕೊಳ್ಳುತ್ತಿದ್ದು ಇದರ ವಿಚಾರವಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ಯಾದವ ಯುವ ವೇದಿಕೆ ತೀವ್ರವಾಗಿ ಖಂಡಿಸುತ್ತಿದೆ ಎಂದರು.