--Ads--

ಎಸ್ ಎಸ್ ಎಲ್ ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

On: April 14, 2025 12:48 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಬೆಂ.ಗ್ರಾ.ಜಿಲ್ಲೆ, ಏ.14 : ಜಿಲ್ಲಾಡಳಿತ ಭವನದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕಳೆದ 2023-24 ನೇ ವರ್ಷದಲ್ಲಿ ಎಸೆಸೆಲ್ಸಿ ಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.

ಜಿಲ್ಲೆಯ ನಾಲ್ಕು ತಾಲ್ಲೂಕಿನ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಡಾ.ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯಂದು ಜಿಲ್ಲಾಧಿಕಾರಿ ಎ ಬಿ ಬಸವರಾಜು, ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ಎನ್. ಅನುರಾಧ ಮತ್ತು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಉಚಿತ ಲ್ಯಾಪ್ ಟಾಪ್ ವಿತರಿಸಿದರು.

ಜಿಲ್ಲಾ ಹಂತದಲ್ಲಿ ಅತೀ ಹೆಚ್ಚು ಅಂಗಳಿಸಿದ ವಿದ್ಯಾರ್ಥಿಗಳು

ನೆಲಮಂಗಲ ತಾಲ್ಲೂಕಿನ ಚಿನ್ಮಯಿ.ಎಂ ಗಳಿಸಿದ ಅಂಕ 616. ದೊಡ್ಡಬಳ್ಳಾಪುರ ತಾಲ್ಲೂಕಿನ ದೀಕ್ಷಾ ಜಿ.ಆರ್ ಗಳಿಸಿದ ಅಂಕ 606. ದೊಡ್ಡಬಳ್ಳಾಪುರ ತಾಲ್ಲೂಕಿನ ರಾಧಾ.ಎಸ್ ಗಳಿಸಿದ ಅಂಕ 605.

ತಾಲ್ಲೂಕು ಹಂತದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು

ದೇವನಹಳ್ಳಿ ತಾಲ್ಲೂಕಿನ ನಿಧಿ.ಎಂ ಗಳಿಸಿದ ಅಂಕ 604, ಮಿತುನ್.ಬಿ ಗಳಿಸಿದ ಅಂಕ 592, ಕಾರ್ತಿಕ್.ಆರ್ ಗಳಿಸಿದ ಅಂಕ 598.

ದೊಡ್ಡಬಳ್ಳಾಪುರ ತಾಲ್ಲೂಕಿನ ತೇಜಸ್ವಿನಿ ಕೆ.ಎಸ್ ಗಳಿಸಿದ ಅಂಕ 592, ಜೀವನ್ ಎ ಗಳಿಸಿದ ಅಂಕ 591, ಶಶಿಕಿರಣ್ ಗಳಿಸಿದ ಅಂಕ 595.

ಹೊಸಕೋಟೆ ತಾಲ್ಲೂಕಿನ ತೇಜಶ್ರೀ ಆರ್.ಎಸ್ ಗಳಿಸಿದ ಅಂಕ 574, ಕೀರ್ತಿಶ್ರೀ ಅರ್ ಗಳಿಸಿದ ಅಂಕ 573, ಮೀನಾಕ್ಷಿ ಪ್ರದೀಪ್ ಲೋಹರ್ ಗಳಿಸಿದ ಅಂಕ 568.

ನೆಲಮಂಗಲ ತಾಲ್ಲೂಕಿನ ಸಂಜನಾ ಕೆ. ಗಳಿಸಿದ ಅಂಕ 584, ಹಂಸವೇಣಿ ಜಿ ಆರ್ ಗಳಿಸಿದ ಅಂಕ 577, ಹೇಮಾ ವಿ ಗಳಿಸಿದ ಅಂಕ 577.

ಈ ಸಂದರ್ಭದಲ್ಲಿ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now