--Ads--

ಧರ್ಮಕ್ಕೆ ಶಂಕರರ ಕೊಡುಗೆ ಅಪಾರ’ ಶೃಂಗೇರಿ ಶಾರದಾಂಬ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗೆ ಸೀರೆ ವಿತರಣೆ

On: May 14, 2025 5:51 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಧರ್ಮಕ್ಕೆ ಶಂಕರರ ಕೊಡುಗೆ ಅಪಾರ’
ಶೃಂಗೇರಿ ಶಾರದಾಂಬ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗೆ ಸೀರೆ ವಿತರಣೆ

ತಾಂಡವಪುರ ಮೇ 14: ‘8ನೇ ಶತಮಾನದಲ್ಲಿ ಸನಾತನ ಧರ್ಮ ಉನ್ನತ ಸ್ತರದಲ್ಲಿತ್ತು. ಇದನ್ನು ಪುನರುತ್ಥಾನಗೊಳಿಸಿದ ಕೀರ್ತಿ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ. ಸನಾತನ ಧರ್ಮಕ್ಕೆ ಇವರ ಕೊಡುಗೆ ಅಪಾರ’ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು‌

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ
ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿಯಅಂಗವಾಗಿ ಶೃಂಗೇರಿಯ ಶಾರದಾಂಬ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗಳಿಗೆ ಸೀರೆ ವಿತರಿಸಿ
ಮಾತನಾಡಿದ ಅವರು 8ನೇ ವಯಸ್ಸಿನಲ್ಲಿ ವೇದ, ಉಪನಿಷತ್ತುಗಳ ಕಂಠಪಾಠದಿಂದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ಆಧ್ಯಾತ್ಮಿಕ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅದ್ವೈತ ಸಿದ್ಧಾಂತದ ಮಹಾವಾಕ್ಯಗಳಾದ ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ವಾಕ್ಯದ ವಿಶ್ಲೇಷಣೆ ನೀಡಿ ಮನುಕುಲವನ್ನು ಉದ್ದಾರಗೊಳಿಸಿದರುಎಂದರು.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್, ಶಿಕ್ಷಣ ತಜ್ಞರಾದ ದೀಪ,ಅನುಸೂಯ, ಸುಗುಣಾವತಿ, ಶಾರದಾ ಹಾಗೂ ಇನ್ನಿತರರು ಹಾಜರಿದ್ದರು.

++++++++++++++++++++++++++++++++++

ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ

ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕುಬೆಂ.ಗ್ರಾ.ಜಿಲ್ಲೆ. ಮೇ14(ಕ.ವಾ): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮಂಜೂರಾದ ರಾಜ್ಯದ ಬೆಳಗಾವಿ/ಮೈಸೂರು ಕಂದಾಯ ವಿಭಾಗಗಳಲ್ಲಿ ಅಲ್ಪಸಂಖ್ಯಾತರ ಸಮುದಾಯದ ಯುವ ಜನರಿಗೆ 90 ದಿನಗಳ ವಸತಿಯುತ Police Sub Inspector (PSI) ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಯನ್ನು ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಸಂಸ್ಥೆಯ ಮೂಲಕ ಪ್ರಾರಂಭಿಸಲು ಸರ್ಕಾರದಿಂದ ಆದೇಶ ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ರಾಜ್ಯಾದ್ಯಂತ ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಆರ್ಥಿಕ ಹೊರೆ ತಪ್ಪಿಸಲು, ಅಭ್ಯರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಕಲಿಕಾ ಪೂರಕ ವಾತಾವರಣ ಒದಗಿಸಲು, ಉತ್ತಮ ಫಲಿತಾಂಶ ಮತ್ತು ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಅನುಕೂಲವಾಗುವಂತೆ, ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರಾಜ್ಯದ ಬೆಳಗಾವಿ/ಮೈಸೂರು ಕಂದಾಯ ವಿಭಾಗಗಳಲ್ಲಿ 90 ದಿನಗಳ ವಸತಿಯುತ ತರಬೇತಿ ನೀಡಲು ಉದ್ದೇಶಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು https://sevasindhu.karnataka.gov.in/Sevasindhu/DepartmentServices ಅಥವಾ https://dom.karnataka.gov.in ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನಾಂಕವಾಗಿರುತ್ತದೆ.

90 ದಿನದ ವಸತಿಯುತ ತರಬೇತಿಯಾಗಿದ್ದು, ತರಬೇತಿಯು ಮೈಸೂರು ಮತ್ತು ಬೆಳಗಾವಿಯಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಅಧಾರದ ಮೇಲೆ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಯ ಸಾಮಾನ್ಯ ಅರ್ಹತೆ
1.ಅಭ್ಯರ್ಥಿಯು ಕರ್ನಾಟಕದ ಕಾಯಂ ನಿವಾಸಿಯಾಗಿದ್ದು ರಾಜ್ಯ ಅಲ್ಪಸಂಖ್ಯಾತರ ಸಮುದಾಯಗಳಾದ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಜೈನ್ ಬೌದ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರಾಗಿರಬೇಕು.
2. ಅಭ್ಯರ್ಥಿಯ ವಯಸ್ಸು 21 ರಿಂದ 30 ರ ವಳಗಿರಬೇಕು.
3. ಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.
4. ಸದರಿ ಅಭ್ಯರ್ಥಿಯು ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು
5. ಎತ್ತರ: ಪುರುಷರಿಗೆ ಕನಿಷ್ಠ 168 ಸೆಂ.ಮೀ ಮತ್ತು ಮಹಿಳೆಯರಿಗೆ ಕನಿಷ್ಠ 157 ಸೆಂ.ಮೀ
6.ತೂಕ: ಪುರುಷರಿಗೆ ಕನಿಷ್ಠ 50 ಕೆಜಿ ಮತ್ತು ಮಹಿಳೆಯರಿಗೆ ಕನಿಷ್ಠ 45 ಕೆಜಿ
7. ಎದೆ ಸುತ್ತಳತೆ (ಪುರುಷರಿಗೆ): ಕನಿಷ್ಠ 76 ಸೆಂ.ಮೀ

ಗಮನದಲ್ಲಿ ಇರಬೇಕಾದ ಅಂಶಗಳು
1. ಇಲಾಖಾ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಮತ್ತು ಅಂತಿಮವಾಗಿರುತ್ತದೆ.
2. ಇಲಾಖಾ ವತಿಯಿಂದ ಯಾವುದೇ ಪ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖೆ ವೆಬ್ಸೈಟ್ ಅನ್ನು ವೀಕ್ಷಿಸತಕ್ಕದ್ದು.
3. ತಪ್ಪು ಮಾಹಿತಿ ಕಾರಣದಿಂದ ಉಂಟಾಗಬಹುದಾದ ಲೋಕಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಕಾರಣ
4. ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ: 827779990 ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp

Join Now

Telegram

Join Now

Instagram

Join Now