ರೈತರು ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ನಿಗಮಗಳ ಸೌಲಭ್ಯಗಳನ್ನು ತಲುಪಿಸಲು ಪ್ರಯತ್ನ : ಶಾಸಕ ಬಿ.ಎನ್.ರವಿಕುಮಾರ್

ವಿಜಯ ದರ್ಪಣ ನ್ಯೂಸ್…

ಫಲಾನುಭವಿಗಳಿಗೆ ನಿಗಮಗಳ ಸೌಲಭ್ಯಗಳನ್ನು ತಲುಪಿಸಲು ಶ್ರಮಿಸುವೆ : ಶಾಸಕ ಬಿ.ಎನ್.ರವಿಕುಮಾರ್

ಶಿಡ್ಲಘಟ್ಟ : ವಾಲ್ಮೀಕಿ ನಿಗಮದ ಜೊತೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಆದಿಜಾಂಬ ನಿಗಮ, ಭೋವಿ ಅಭಿವೃದ್ಧಿ ನಿಗಮ ಹಾಗು ಬಿಸಿಎಂಎ ದೇವರಾಜ ಅರಸು ಅಭಿವೃದ್ಧಿ ನಿಗಮಗಳಿಂದ ಈ ಯೋಜನೆಗಳನ್ನು ರೈತರು ಹಾಗೂ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ತಲುಪಿಸಲು ಶ್ರಮಿಸಲಾಗುತ್ತಿದೆ ಎಂದು ಶಾಸಕ ಬಿ.ಎನ್.ರವಿಕುಮಾರ್ ಅವರು ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 2021-22 ಹಾಗೂ 2022-23ನೇ ಸಾಲಿನ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಪಂಪು ಮೋಟಾರ್ ಮತ್ತು ಪೈಪುಗಳ ವಿತರಣಾ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.

2021-22ನೇ ಸಾಲಿನಲ್ಲಿ ಆರಂಭಗೊಂಡ ಈ ಯೋಜನೆ ಕೆಲ ಸಮಸ್ಯೆಗಳಿಂದಾಗಿ ವಿಳಂಬವಾಗಿತ್ತು ಸಂಬಂದಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಇದನ್ನು ಪುನಶ್ಚೇತನಗೊಳಿಸಿ, ಇಂದು ಫಲಾನುಭವಿಗಳಿಗೆ ತಲುಪುವಂತೆ ಮಾಡಲಾಗಿದೆ, ಎಂದು ಹೇಳಿದರು.

ಈ ಯೋಜನೆಯಡಿ ವಿದಾನಸಭಾ ಕ್ಷೇತ್ರದ ಜಂಗಮಕೋಟೆ ಹೋಬಳಿಯ ಬಸಾಪಟ್ಟಣ ಗ್ರಾಮದ ದೊಡ್ಡಮುನಿಯಪ್ಪ ಸಾದಲಿ ಹೋಬಳಿಯ ಕೋಟಗಲ್ ಗ್ರಾಮದ ನಾರಾಯಣಸ್ವಾಮಿ, ಕಸಬಾ ಹೋಬಳಿಯ ಬಚ್ಚಳ್ಳಿ ಗ್ರಾಮದ ನರಸಿಂಹಯ್ಯ, ಹಿತ್ತಲಹಳ್ಳಿ ಗ್ರಾಮದ ರವಿಕುಮಾರ್, ಮತ್ತು ನಂದನಹೊಸಳ್ಳಿ ಗ್ರಾಮದ ಶ್ರೀನಿವಾಸ ಈ ಐದು ಜನ ಫಲಾನುಭವಿಗಳಿಗೆ ಪಂಪು ಮೋಟಾರ್ ಹಾಗೂ ಪೈಪುಗಳನ್ನು ವಿತರಣೆ ಮಾಡಿದರು.

ಉಳಿದ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವ ಪ್ರಕ್ರಿಯೆಯಲ್ಲಿದೆ ಈ ಮೂಲಕ ನಿಗಮದ ಯೋಜನೆಯ ಸದುಪಯೋಗ ಗ್ರಾಮೀಣ ರೈತರಿಗೆ ಸಿಗಲು ಸಹಾಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ತಾದೂರು ರಘು,ಕುಂದಲಗುರ್ಕಿ ಚಂದ್ರಣ್ಣ,
ಸಂಬಂಧಿಸಿದ ಇಲಾಖಾಧಿಕಾರಿಗಳು ಹಾಗು ಸ್ಥಳೀಯ ಮುಖಂಡರು ಹಾಜರಿದ್ದರು.