--Ads--

35ಕೋಟಿ ರೂಪಾಯಿ  ವೈಟ್ ಟಾಪಿಂಗ್ ರಸ್ತೆ : ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣ : ಶಾಸಕ ಎಸ್.ಸುರೇಶ್ ಕುಮಾರ್

On: June 2, 2025 2:04 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

35ಕೋಟಿ ರೂಪಾಯಿ  ವೈಟ್ ಟಾಪಿಂಗ್ ರಸ್ತೆ : ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣ : ಶಾಸಕ ಎಸ್.ಸುರೇಶ್ ಕುಮಾರ್

ಬೆಂಗಳೂರು,ರಾಜಾಜಿನಗರ ವಿಧಾನಸಭಾ ಕ್ಷೇತ್ರ : ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶ ದ್ವಾರದವರಗೆ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲನೆ.

ಮಾಜಿ ಶಿಕ್ಷಣ ಸಚಿವರು, ಶಾಸಕರಾದ ಎಸ್.ಸುರೇಶ್ ಕುಮಾರ್ ರವರು ಮತ್ತು ಬೆಸ್ಕಾಂ, ಬಿಬಿಎಂಪಿ ಜಲಮಂಡಳಿ ಹಾಗೂ ಸಂಚಾರಿ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಕಾಮಗಾರಿಗಳ ಪರಿಶೀಲನೆ ಮಾಡಿದರು.

ಇದೇ ಸಂದರ್ಭದಲ್ಲಿ  ಎಸ್.ಸುರೇಶ್ ಕುಮಾರ್ ರವರು ಮಾತನಾಡಿ ಸರಿ ಸುಮಾರು 2.2 ಕಿಲೋ ಮೀಟರ್ ಉದ್ದದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಕಾಮಗಾರಿ ರಸ್ತೆ ಮುಗಿದ ಮೇಲೆ ರಸ್ತೆ ಅಗೆಯುವ ಪ್ರಮೇಯ ಬರಬಾರದು ಅದರಿಂದ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಸಂಚಾರ ಪೊಲೀಸ್ ವಿಭಾಗದ ಜೊತೆಯಲ್ಲಿ ಸಮನ್ವಯ ಸಾಧಿಸಿ ಕಾಮಗಾರಿಯನ್ನು ಶರವೇಗದಲ್ಲಿ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ.

ಸರಿ ಸುಮಾರು 35ಕೋಟಿ ರೂಪಾಯಿ ವೆಚ್ಚ ಅದರಲ್ಲಿ 27ಕೋಟಿ ರೂಪಾಯಿ ರಸ್ತೆ ನಿರ್ಮಾಣ 7ಕೋಟಿ ರೂಪಾಯಿ ಜಲಮಂಡಳಿ, ಬೆಸ್ಕಾಂ ಸಂಚಾರ ವಿಭಾಗಕ್ಕೆ ವೆಚ್ಚವಾಗಲಿದೆ.

ನವರಂಗ್ ವೃತ್ತದಿಂದ ರಾಜಾಜಿನಗರ ಪ್ರವೇಶದ್ವಾರ ಸಾವಿರಾರು ವಾಹನ ಸಂಚಾರಿ ಮಾಡುತ್ತದೆ, ಸಂಚಾರಕ್ಕೆ ಅಡಚಣೆಯಾಗದಂತೆ ಕಾಮಗಾರಿ ಮುಗಿಸಲು ಚರ್ಚಿಸಲಾಗಿದೆ.

ರಾಜಾಜಿನಗರ 50ನೇ ಅಡ್ಡರಸ್ತೆ ಹೈಟೆಕ್ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ, ಮಳೆ ನಿಂತ ನಂತರ ಡಾಂಬರೀಕರಣ ಕಾಮಗಾರಿ ಮಾಡಲಾುವುದು ಎಂದು ಹೇಳಿದರು.

ಮಂಡಲದ ಅಧ್ಯಕ್ಷರಾದ ಸುದರ್ಶನ್, ಬಿಜೆಪಿ ಮುಖಂಡರುಗಳಾದ ಕಾಮಧೇನು ಸುರೇಶ್, ಯಶಸ್ ನಾಯಕ್, ಪ್ರವೀಣ್, ವಿಶ್ವನಾಥ, ಪುಟ್ಟ, ಗೌತಮ್ ರವರು ಉಪಸ್ಥಿತರಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವಿಜಯಿ ಭಾರತ್ ಫೌಂಡೇಶನ್ನ Khele Sanand Sports Utsav 2026 ಸೈನಾ ನೆಹ್ವಾಲ್ ಅವರ ಉಪಸ್ಥಿತಿಯಲ್ಲಿ ಆರಂಭ; 25,000+ ವಿದ್ಯಾರ್ಥಿಗಳ ಭಾಗವಹಿಸುವಿಕೆ

ಸಂವಿಧಾನದ ಆಶಯಗಳು ಈಡೇರಬೇಕಾದರೆ ಸಾಮಾಜಿಕ ಅಸಮಾನತೆ ನಿವಾರಣೆಯಾಗಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಯಿಂದ ಭಾರತದ ಮೊದಲ ಎಕ್ಸೈಮ್ ಟೆಂಪರರಿ ಪ್ರೊಸ್ಟಾಟಿಕ್ ಶಸ್ತ್ರಚಿಕಿತ್ಸೆ; ಐದು ರೋಗಿಗಳಿಗೆ ಚಿಕಿತ್ಸೆ

ಎಸಿ ರೂಂನಲ್ಲಿ ಕೂರಬೇಡಿ, ಫೀಲ್ಡಿಗಿಳಿಯಿರಿ: ಅಧಿಕಾರಿಗಳಿಗೆ ಸಚಿವ ಚಲುವರಾಯಸ್ವಾಮಿ ಚಾಟ

20 ಕ್ಕೆ ಸಾಹಿತಿ ಕೆ.ಎಂ.ರೇವಣ್ಣ ಸರ್ವಾಧ್ಯಕ್ಷತೆಯಲ್ಲಿ 16 ನೇ ಕನ್ನಡ ಸಾಹಿತ್ಯ, ಸಂಸ್ಕೃತಿ ಸಮ್ಮೇಳನ

ಕ್ಯಾನ್‌ಬೆರಾ ವಿವಿಯಿಂದ ಯುಸಿ ಕ್ರಿಕೆಟ್ ಚಾಲೆಂಜ್‌ನ ಮೂರನೇ ಆವೃತ್ತಿ ಮುಕ್ತಾಯ: ಕ್ರೀಡೆ ಮತ್ತು ಶಿಕ್ಷಣ ಸಂಪರ್ಕಿಸುವ ಮಾರ್ಗಗಳ ಸೃಷ್ಟಿ