--Ads--

ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ

On: June 5, 2025 4:20 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ತಂತ್ರಜ್ಞಾನ ಯುಗದಲ್ಲೂ ಜೀವಂತ : ನಾರಾಯಣಸ್ವಾಮಿ

ದೇವನಹಳ್ಳಿ : ಭಾರತೀಯ ಸಂಸ್ಕೖತಿ ಆದರ್ಶ ಪುರುಷ ಶ್ರೀ ರಾಮ ಅವನಲ್ಲಿದ್ದ ತತ್ವ, ಸಿದ್ಧಾಂತ ಗಳಿಂದಲೇ ಆತ ಪೂಜ್ಯನೀಯ ನಾಗಿದ್ದು, ಅವನು ಎಲ್ಲರಿಗೂ ಆದರ್ಶ ನಾಗಿದ್ದಾನೆಂದು ದಶರಥ ಪಾತ್ರಧಾರಿ ಚೆನ್ನಹಳ್ಳಿ ನಾರಾಯ ಣಸ್ವಾಮಿ ಅಭಿಪ್ರಾಯಿಸಿದರು.

ದೇವನಹಳ್ಳಿ ತಾಲೂಕು ಕಾರಹಳ್ಳಿಯಲ್ಲಿ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕದ ದಶರಥ ಪಾತ್ರಧಾರಿ ಸಿವಿ ನಾರಾಯಣಸ್ವಾಮಿಯವರು ಮಾತನಾಡಿ, ನಾವು ನಮ್ಮ ಜೀವನದಲ್ಲಿ ಎಂತಹದ್ದೇ ಕಠಿಣ ಪರಿಶ್ರಮಗಳು ಎದುರಾದರು ತಾಳ್ಮೆ  ಕಳೆದುಕೊಳ್ಳಬಾರದು ಮತ್ತು ಸಕಾರಾತ್ಮಕ ಚಿಂತನೆಯನ್ನು ಬಿಡಬಾರದು ಈ ಗುಣಗಳನ್ನು ನಾವು ಬೆಳೆಸಿಕೊಳ್ಳುವುದಾದರೆ ಜೀವನದಲ್ಲಿ ಉತ್ತಮ ಯಶಸ್ಸು ಗಳಿಸಲು ಸಾಧ್ಯ.

ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳು ಮನಸ್ಸಿಗೆ ಶಾಂತಿ, ನೆಮ್ಮದಿ ಸರ್ವ ಜನಾಂಗಗಳನ್ನು ಕೂಡ ಸಮಭಾವದಿಂದ ಕೊಂಡುಯುವ ಪ್ರಮುಖ ಸಾರಾಂಶ ಗಳು ಮಹಾಭಾರತ ಮತ್ತು ರಾಮಾಯಣದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಹಾಗೂ ರಂಗಭೂಮಿ ಕಲಾವಿದ ಮುನಿಕೃಷ್ಣಪ್ಪ ಅವರು ಮಾತನಾಡಿ ಮೊದಲ ರಾಮಾಯಣ ವನ್ನು ಬರೆದಿದ್ದು ಮಹರ್ಷಿ ವಾಲ್ಮೀಕಿ ಎಂಬುದು ನಮ್ಮೆಲ್ಲ ರಿಗೂ ತಿಳಿದಿದೆ ಆದರೆ ವಾಲ್ಮೀಕಿ ರಾಮಾಯಣ ವನ್ನು ಹೊರತುಪಡಿಸಿ ಪ್ರಪಂಚಾದ್ಯಂತ 24 ಹೆಚ್ಚು ಭಾಷೆಗಳಲ್ಲಿ 300ಕ್ಕೂ ಹೆಚ್ಚು ರಾಮಾಯಣಗಳನ್ನು ಬರೆಯಲಾಗಿದೆ ಎಂಬುದನ್ನು ತಿಳಿದರೆ ಖಂಡಿತ ಆಶ್ಚರ್ಯವಾಗುತ್ತದೆ.

ಭಾರತವಲ್ಲದೆ ಇತರೆ ಒಂಬತ್ತು ದೇಶಗಳಲ್ಲಿ ತಮ್ಮದೇ ಆದ ರಾಮಾಯಣವನ್ನು ಹೊಂದಿರುವುದು ಪ್ರಶಂಸನೀಯ ವಾಲ್ಮೀಕಿ ರಾಮಾಯಣವನ್ನು ಹೊರತು ಪಡಿಸಿ ಗೋಸ್ವಾಮಿ ತುಳಸಿದಾಸರು ಬರೆದ ರಾಮಚರಿತ, ಮಾನಸ ಭಾರತದಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿದೆ ಹಾಗಾಗಿ ನಮ್ಮ ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಂತಹ ಕಲೆ ಸಾಹಿತ್ಯ ಸಂಸ್ಕೃತಿ ಸೇರಿದಂತೆ 10 ಹಲವಾರು ಸಂಪ್ರದಾಯಗಳನ್ನು ತಂತ್ರಜ್ಞಾನ ಯುಗದಲ್ಲೂ ಕೂಡ ಜೀವಂತವಾಗಿವೆ ಉಳಿಸಿಕೊಂಡು ಬಂದಿದ್ದೇವೆ ಸಂಪ್ರದಾಯಗಳ ಮೇಲೆ ಶ್ರೀಮಂತಿಕೆ ಕಂಡಂತ ದೇಶ ಭಾರತವೆಂದರೆ ತಪ್ಪಾಗಲಾರದೆಂದು ಪ್ರಸ್ತಾಪಿಸಿದರು.

ಪೌರಾಣಿಕ ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಮಾತನಾಡಿ ಪ್ರತಿಭೆ ಎಂಬುದು ಯಾವುದೇ ಜನಾಂಗದ ಆಸ್ತಿಯಲ್ಲ ವಾಲ್ಮೀಕಿ ಜನಾಂಗದ ಒಬ್ಬ ವ್ಯಕ್ತಿ ಪ್ರತಿಭಾವಂತ ವ್ಯಕ್ತಿ ಇಂತಹ ಅದ್ಭುತ ರಚಿಸಿರುವುದೆಂದರೆ ಸಾಮಾನ್ಯದ ಮಾತಲ್ಲ ಪ್ರತಿಭೆ ಯಾವುದೇ ಮಿತಿಗಳಿಲ್ಲ ಎಂಬುದನ್ನು ಇದು ತೋರಿಸಿಕೊಡುತ್ತದೆ ಇಂತಹ ವ್ಯಕ್ತಿಗೆ ಸಲ್ಲಬೇಕಾದ ಗೌರವವನ್ನು ಈ ಪೌರಾಣಿಕ ನಾಟಕದ ಮೂಲಕ ಸಲ್ಲಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣವಾದ ವಿಚಾರ ಹಿಂದೂ ಧರ್ಮದಲ್ಲಿ ಅನೇಕ ಧಾರ್ಮಿಕ ಗ್ರಂಥಗಳಿಗೆ ಅಂತಹ ಧಾರ್ಮಿಕ ಗ್ರಂಥಗಳಲ್ಲಿ ರಾಮಾಯಣ ಮಹಾಭಾರತ ಭಗವದ್ಗೀತೆ ಪ್ರಮುಖವಾದ ಗ್ರಂಥಗಳೆಂದು ಭಾರತೀಯರಾದ ನಾವು ಭಾವಿಸಿದ್ದೇವೆಂದು ತಿಳಿಸಿರುತ್ತಾರೆ.

ಈ ಸಂದರ್ಭದಲ್ಲಿ ಪೌರಾಣಿಕ ರಂಗಭೂಮಿ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ, ಕಾರಹಳ್ಳಿ ರಂಗಭೂಮಿ ಕಲಾವಿದರಾದ ಕೇಶವ ಮೂರ್ತಿ, ಉತ್ತನಳಪ್ಪ ಆನಂದ ಗೌಡ ಚಂದ್ರು, ಅನೀಲ್ ಕುಮಾರ್, ಮುನಿರಾಜು, ಮುನೇಗೌಡ, ಸುರೇಂದ್ರ, ವಿನೋಧ್, ರತನ್, ವೆಂಕಟೇಗೌಡ, ದ್ಯಾವಪ್ಪ, ಚಿಕ್ಕಮುನಿಯಪ್ಪ ಹಾಜರಿದ್ದರು

WhatsApp

Join Now

Telegram

Join Now

Instagram

Join Now