ರೈತರು, ರಾಸಾಯನಿಕ ಗೊಬ್ಬರಗಳ ಬಳಕೆ ಬಿಟ್ಟು, ಸಾವಯವ ಕೃಷಿಯತ್ತ ಗಮನಹರಿಸಿ : ವಿಶ್ವನಾಥ್
ವಿಜಯ ದರ್ಪಣ ನ್ಯೂಸ್…..
ರೈತರು, ರಾಸಾಯನಿಕ ಗೊಬ್ಬರಗಳ ಬಳಕೆ ಬಿಟ್ಟು, ಸಾವಯವ ಕೃಷಿಯತ್ತ ಗಮನಹರಿಸಿ : ವಿಶ್ವನಾಥ್
ಶಿಡ್ಲಘಟ್ಟ : ರೈತರು, ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿಕೊಂಡು, ಸಾವಯವ ಕೃಷಿಯತ್ತ ಗಮನಹರಿಸಿದರೆ, ಬೆಳೆಗಳಿಗೆ ತಗುಲಬಹುದಾದ ರೋಗಗಳನ್ನು ನಿಯಂತ್ರಣಕ್ಕೆ ತರುವುದರ ಜೊತೆಗೆ, ಭೂಮಿಯ ಫಲವತ್ತತೆಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಉತ್ತಮ ಇಳುವರಿಯ ಬೆಳೆಗಳನ್ನೂ ಬೆಳೆಯಬಹುದಾಗಿದೆ ಎಂದು ಸಾವಯವ ಕೃಷಿಯ ಬಗ್ಗೆ ಮಾಹಿತಿಯನ್ನು ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿಯ (ಬೇಸಾಯ ಶಾಸ್ತ್ರ) ವಿಜ್ಞಾನಿ ವಿಶ್ವನಾಥ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಕೃಷಿ ವಿಶ್ವವಿದ್ಯಾಲಯ ಬೆಂಗಳೂರು, ಕೃಷಿ ವಿಜ್ಞಾನ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ತೋಟಗಾರಿಕೆ ಇಲಾಖೆ ಶಿಡ್ಲಘಟ್ಟ ಇವರ ಸಹಯೋಗದಲ್ಲಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತೋಟಗಾರಿಕಾ ವಿಜ್ಞಾನಿ ಆರ್. ಪ್ರವೀಣ್ ಕುಮಾರ್ ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಇರುವ ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು, ಮುಂಗಾರು ಹಂಗಾಮಿಗೆ ರೈತರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಉತ್ತಮ ಗುಣಮಟ್ಟದ ಬೀಜಗಳನ್ನು ಆಯ್ಕೆ ಮಾಡಬೇಕು, ಕಾಲಕ್ಕೆ ಸರಿಯಾಗಿ ಮಣ್ಣಿನ ಪರೀಕ್ಷೆ ಮಾಡಿಸಬೇಕು, ಸಾವಯವ ಕೃಷಿಗೆ ಒತ್ತು ನೀಡಬೇಕು, ಮಣ್ಣಿನ ಆರೋಗ್ಯ ಕಾಪಾಡುವುದು ಕೂಡಾ ತೋಟಗಾರಿಕೆ ಮತ್ತು ಕೃಷಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ರೈತರ ಖರ್ಚು ಕಡಿಮೆ ಮಾಡಿ, ಅವರ ಆದಾಯವನ್ನು ದ್ವಿಗುಣಗೊಳಿಸುವುದು ಕೇಂದ್ರ ಸರ್ಕಾರದ ಮೂಲ ಉದ್ದೇಶವಾಗಿದೆ. ನೈಸರ್ಗಿಕವಾಗಿ ಕೃಷಿ ಮಾಡುವ ಕಡೆಗೆ ಆಧ್ಯತೆ ನೀಡಬೇಕು ಎಂದರು.
ಗೃಹ ವಿಜ್ಞಾನ ವಿಜ್ಞಾನಿ ಸೌಮ್ಯ ಹಿರೇಗೌಡರ್ ಅವರು, ತರಕಾರಿ ಬೆಳೆಗಳ ಕಟಾವು ಮತ್ತು ಸಂಸ್ಕರಣೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಪ್ರಗತಿಪರ ರೈತರಾದ ತ್ಯಾಗರಾಜ್ ಮಾತನಾಡಿ,ಸುಸ್ಥಿರ ಕೃಷಿಯಲ್ಲಿ ಸಾವಯುವ ಕೃಷಿಯ ಮಹತ್ವವನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು ,ಪ್ರಮುಖವಾಗಿ ಜೀವಾಮೃತ, ಬೀಜಾಮೃತ, ಪಂಚಾಗವ್ಯ, ಹಸಿರೆಲೆ ಗೊಬ್ಬರದ ಮಹತ್ವ, ಮಣ್ಣು ಪರೀಕ್ಷೆ, ಪರಿಸರ ಸ್ನೇಹಿ ರೋಗ ಮತ್ತು ಕೀಟ ನಿರ್ವಹಣೆ, ಕೃಷಿ ವಿಶ್ವವಿದ್ಯಾಲಯದ ಬೀಜಗಳ ಆಯ್ಕೆ, ಬೀಜೋಪಚಾರ ಮತ್ತು ಇತರ ತಂತ್ರಜ್ಞಾನಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ತಿಳಿಸಿ, ರೈತರ ಆದಾಯವನ್ನು ಜಾಸ್ತಿ ಮಾಡಲು ನೂತನ ತಂತ್ರಜ್ಞಾನಗಳ ಬಳಕೆ ಮತ್ತು ಸಾವಯುವ ಕೃಷಿ ಅತ್ಯಮೂಲ್ಯವೆಂದರು.
ಕೃಷಿ ಇಲಾಖೆಯ ಅಧಿಕಾರಿಗಳು ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಿಕೊಟ್ಟರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಅವರು, ತೋಟಗಾರಿಕಾ ಇಲಾಖೆಯ ಯೋಜನೆಗಳು ಮತ್ತು ಬೆಳೆ ವಿಮೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು,ರೇಷ್ಮೆ ಇಲಾಖೆಯಲ್ಲಿ ದೊರೆಯುವ ಸೌಲತ್ತಿನ ಬಗ್ಗೆ ರೈತರಿಗೆ ರೇಷ್ಮೆ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ರೈತರಿಗೆ ವಿವರಿಸಿದರು.
&&&&&&&&&&&&&&&&&&&&&&&&
ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 141 ನೇ ಜನ್ಮದಿನಾಚರಣೆ ಆಚರಣೆ
ಶಿಡ್ಲಘಟ್ಟ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು
ಶ್ರೀಅಕ್ಷರ ಪಿ.ಯು. ಕಾಲೇಜು ಇವರ ಸಹಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರು ಹಾಗೂ ನವ ಮೈಸೂರಿನ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ 141 ನೇ ಜನ್ಮದಿನಾಚರಣೆ ಹಾಗೂ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಧುನಿಕ ನವ ಮೈಸೂರಿನ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ಕೊಡುಗೆಗಳು ಎಂಬ ವಿಷಯವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಇದೇ ವೇಳೆ ಪ್ರಮಾಣಪತ್ರವನ್ನು ನೀಡಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ನಾರಾಯಣಸ್ವಾಮಿ, ಅಕ್ಷರ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ವಿ.ಪ್ರಕಾಶ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಎಸ್.ವಿ.ನಾಗರಾಜರಾವ್, ಮುನಿನಾರಾಯಣಪ್ಪ, ಎಚ್.ಎಂ.ರಂಗನಾಥ್, ಎನ್.ಸುಂದರ್, ಸುರೇಶ್, ಟಿ.ಟಿ.ನರಸಿಂಹಪ್ಪ, ದೇವರಾಜ್, ರಮೇಶ್, ಶುಭ,ಕಮಲ, ಚಂದ್ರಶೇಖರ್ ಮುಂತಾದವರು ಹಾಜರಿದ್ದರು.