ಹೋಂ ಸ್ಟೆ ನಿರ್ಮಿಸಲು ಸಹಾಯ ಧನಕ್ಕೆ ಅರ್ಜಿ ಆಹ್ವಾನ
ವಿಜಯ ದರ್ಪಣ ನ್ಯೂಸ್…..
ಹೋಂ ಸ್ಟೆ ನಿರ್ಮಿಸಲು ಸಹಾಯ ಧನಕ್ಕೆ ಅರ್ಜಿ ಆಹ್ವಾನ
ಬಿಜಿಎಸ್ ನಗರ ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ.ಜುಲೈ 21: ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರದ ಸಚಿವಾಲಯದ ಧರ್ತಿ ಅಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ 14 ಗ್ರಾಮಗಳಲ್ಲಿನ ಬುಡಕಟ್ಟು/ ಆದಿವಾಸಿ ಸಮುದಾಯದವರು ಹೋಂಸ್ಟೇ ನಿರ್ಮಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಸಾಸಲು ಗ್ರಾಮ ಪಂಚಾಯಿತಿಯ ಗುಮ್ಮನಹಳ್ಳಿ ಗ್ರಾಮ, ಹಣಬೆ ಗ್ರಾಮ ಪಂಚಾಯಿತಿಯ ಬೊಮ್ಮನಹಳ್ಳಿ ಗ್ರಾಮ, ಬಿಜ್ಜವಾರ ಗ್ರಾಮ ಪಂಚಾಯಿತಿಯ ಹೊಲೆರಹಳ್ಳಿ ಗ್ರಾಮ, ಗೊಡ್ಡುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಯ ವೆಂಕಟೇನಹಳ್ಳಿ ಗ್ರಾಮ, ಮಂಡಿಬೆಲೆ ಗ್ರಾಮ ಪಂಚಾಯಿತಿಯ ಚಿಕ್ಕ ತತ್ತಮಂಗಲ ಗ್ರಾಮ, ಕಾರಹಳ್ಳಿ ಗ್ರಾಮ ಪಂಚಾಯಿತಿಯ ಕೆಂಪತಿಮ್ಮನಹಳ್ಳಿ ಗ್ರಾಮ, ಅಥೇಶ್ವರ ಗ್ರಾಮ ಪಂಚಾಯಿತಿಯ ಯರ್ತಿಗಾನಹಳ್ಳಿ ಮತ್ತು ಭುವನಹಳ್ಳಿ ಗ್ರಾಮ, ಬೆಟ್ಟಕೋಟೆ ಗ್ರಾಮ ಪಂಚಾಯಿತಿಯ ರಾಯಸಂದ್ರ ಗ್ರಾಮ, ಯಲಿಯೂರು ಗ್ರಾಮ ಪಂಚಾಯಿತಿಯ ಮಟ್ಟಬಾರ್ಲು ಮತ್ತು ಬೊಮ್ಮನಹಳ್ಳಿ ಗ್ರಾಮ, ನಲ್ಲೂರು ಗ್ರಾಮ ಪಂಚಾಯಿತಿಯ ಜೊನ್ನಹಳ್ಳಿ ಗ್ರಾಮ, ಕೋರಮಂಗಲ ಗ್ರಾಮ ಪಂಚಾಯಿತಿಯ ಕೊಂಡೇನಹಳ್ಳಿ ಗ್ರಾಮ ಮತ್ತು ದೊಡ್ಡನಳ್ಳಾಲ ಗ್ರಾಮ ಪಂಚಾಯಿತಿಯ ವಲಗೆರೆಪುರ ಈ ಗ್ರಾಮಗಳನ್ನು ಅಭಿವೃದ್ಧಿಪಡಿಸಿ ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪತ್ತನ್ನು ಪ್ರವಾಸಿಗರಿಗೆ ಪರಿಚಯಿಸಲು ಉದ್ದೇಶಿಸಲಾಗಿದೆ.
ಹೋಂ ಸ್ಟೇ ನಿರ್ಮಿಸಲು ರೂ.5.00 ಲಕ್ಷ, ನವೀಕರಿಸಲು ರೂ.3.00 ಲಕ್ಷ ಸಹಾಯಧನ ನೀಡುವ ಯೋಜನೆಯನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುತ್ತದೆ.
ಅರ್ಹ ಆಸಕ್ತ ವ್ಯಕ್ತಿಗಳು ಆಗಸ್ಟ್ 11 ರೊಳಗೆ ಅರ್ಜಿ ನಮೂನೆಯನ್ನು ಜಿಲ್ಲಾ ಪ್ರವಾಸೋದ್ಯಮ ಕಛೇರಿಯಲ್ಲಿ ಪಡೆದು ಅವಶ್ಯಕ ದಾಖಲೆಗಳಾದ ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ವರ್ಗ), ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಮನೆಯ ದಾಖಲೆ, ಮನೆಯ ಪೋಟೋ, ಡಿಕ್ಲೇರೇಷನ್ ಫಾರ್ಮ್ , ಗ್ರಾಮ ಪಂಚಾಯಿತಿಯ ಎನ್.ಓ.ಸಿ, ಪೋಲೀಸ್ ಇಲಾಖೆಯ ಎನ್.ಓ.ಸಿ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ,ನೆಲಮಹಡಿ 09, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562110 ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:080-22040633 ಅನ್ನು ಕಛೇರಿಯ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.