ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಸ್ವಾಭಿಮಾನಿ ಬಳಗ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ: ರಾಜ್ಯದ್ಯಕ್ಷ ಜೆಬಿ ವಿನಯ್ ಕುಮಾರ್
ವಿಜಯ ದರ್ಪಣ ನ್ಯೂಸ್….
ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಸ್ವಾಭಿಮಾನಿ ಬಳಗ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ: ರಾಜ್ಯದ್ಯಕ್ಷ ಜೆಬಿ ವಿನಯ್ ಕುಮಾರ್
ತಾಂಡವಪುರ ಮೈಸೂರು ಜುಲೈ 21: ಮುಂಬರುವ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ನಗರಸಭೆ ಪುರಸಭೆ ಪಟ್ಟಣ ಪಂಚಾಯ್ತಿಗಳ ಚುನಾವಣೆಗಳಲ್ಲಿ ಸ್ವಾಭಿಮಾನಿ ಬಳಗದ ಕಾರ್ಯಕರ್ತರು ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಮಾಡಿ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯ ಅಧ್ಯಕ್ಷ ಜೆ ಬಿ ವಿನಯ್ ಕುಮಾರ್ ಅವರು ಸ್ವಾಭಿಮಾನಿ ಬಳಗದ ಎಲ್ಲ ಸದಸ್ಯರಿಗೆ ಕರೆ ನೀಡಿದರು.
ಮೈಸೂರಿನ ಶಾರದ ವಿಲಾಸ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನವೇ ಸಿದ್ದಾಂತ ಸ್ವಾಭಿಮಾನಿಗಳ ಸಮ್ಮಿಲನ ಹಾಗೂ ಶೋಷಿತರು ಅವಕಾಶ ವಂಚಿತರು ದಿನ ದರಿತರ ಧ್ವನಿ ಆ ಯೋಜನೆ ಮಾಡಿದ್ದ ಸಂವಿಧಾನವೇ ಸಿದ್ದಾಂತ ಸ್ವಾಭಿಮಾನಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವೆ ಮಾಡುತ್ತಿರುವ ಶಿಕ್ಷಕರ ಸಂಘದ ಅಧ್ಯಕ್ಷ ಸೋಮೇಗೌಡ ಸ್ಮಶಾಣ ಅಭಿವೃದ್ಧಿಯಲ್ಲಿ ನಿರತರಾಗಿರುವ ಕರೀಂ ಶರೀಫ್ ಹಾಗೂ ಗ್ರಾಮೀಣ ಪತ್ರಕರ್ತ ತಾಂಡವಪುರ ಟಿ ಕೆ ಬಸವರಾಜ ಬಳಗದ ಅಧ್ಯಕ್ಷ ಜೆ ಬಿ ವಿನಯ್ ಕುಮಾರ್ ಅವರು ಹಾಗೂ ಸದಸ್ಯರುಗಳು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ವಿನಯ್ ಕುಮಾರ್ ಅವರು ನಮ್ಮ ಈ ಸ್ವಾಭಿಮಾನಿ ಬಳಗ ಸಂವಿಧಾನದ ಅಡಿಯಲ್ಲಿ ಶೋಷಿತರು ದೀನದಲಿತರು ಅವಕಾಶ ವಂಚಿತರ ದುನಿಯಾಗಿ ನಿಲ್ಲುವ ಜೊತೆಗೆ ಇಡೀ ರಾಜ್ಯ್ಯಾದಂತ ನಮ್ಮ ಸ್ವಾಭಿಮಾನಿ ಬಳಗ ಸಂಘಟನೆ ಮಾಡುವ ಮೂಲಕ ಶೋಷಿತರು ವಂಚಿತರ ಪರವಾಗಿ ದೀನ ದಲಿತರ ಪರವಾಗಿ ನಿಲ್ಲುತ್ತೇವೆ ಎಂದರು.
ಸರ್ಕಾರ ಈಗಾಗಲೇ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಜಾತಿಗಣತಿ ಮಾಡಲಾಗಿದ್ದು ಆ ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಜನಸಂಖ್ಯೆಗೆ ಅನುಗುಣವಾಗಿ ಅವರಿಗೆ ಸಮಾಜದಲ್ಲಿ ನ್ಯಾಯ ಸಿಗಬೇಕು ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಈ ಜಾತಿಗಣತಿ ಜಾರಿ ಮಾಡುವಲ್ಲಿ ಸರ್ಕಾರ ಯಾಕೋ ಮೌನವಾಗಿರುವುದನ್ನು ನೋಡಿದರೆ ಈ ಜಾತಿ ಗೆಳತಿ ವರದಿಯನ್ನು ಬಿಡುಗಡೆ ಮಾಡುವುದಿಲ್ಲ ಎಂಬ ಅನುಮಾನ ಕಾಣುತ್ತಿದೆ ಎಂದು ಆರೋಪಿಸಿದರು.
ಇದೆ ವೇಳೆ ವಕೀಲರು ಹಾಗೂ ಲೇಖಕರು ಸಂಶೋಧಕರು ಆದ ಬಸವರಾಜುರವರು ಬರೆದಿರುವ ನಮಗೂ ಕಾನೂನು ಗೊತ್ತು ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದರು
ನಂತರ ವಕೀಲರಾದ ಬಸವರಾಜ್ ಅವರು ಮಾತನಾಡಿ ಯಾವುದೇ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ದೂರು ದಾಖಲಾದರೆ ಅದರ ವಿರುದ್ಧ ವಾದ ಮಾಡಲು ವಕೀಲರನ್ನೇ ನೇಮಿಸಬೇಕಾಗಿಲ್ಲ ಕಾನೂನಿನ ಬಗ್ಗೆ ಅರಿವಿರುವ ಪ್ರತಿಯೊಬ್ಬರು ತಮ್ಮ ಪರವಾಗಿ ಕೋರ್ಟಿನಲ್ಲಿ ವಾದ ಮಂಡಿಸಬಹುದು ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ ಅದಕ್ಕಾಗಿ ಸ್ವಾಭಿಮಾನಿ ಬಳಗದ ರಾಜ್ಯದ್ಯಕ್ಷ ಜೆ ಬಿ ವಿನಯ್ ಕುಮಾರ್ ಅವರು ನಮಗೂ ಕಾನೂನು ಗೊತ್ತು ಎಂಬ ಪುಸ್ತಕವನ್ನು ಮುದ್ರಿಸುವ ಮೂಲಕ ಈ ಪುಸ್ತಕ ಪ್ರತಿಯೊಬ್ಬರಿಗೂ ತಲುಪಬೇಕು ಕಾನೂನಿನ ಬಗ್ಗೆ ಪ್ರತಿಯೊಬ್ಬರಿಗೂ ಅರುವಿರಬೇಕು ಎಂಬ ಜಾಗೃತಿಯನ್ನು ಮೂಡಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ವಿನಯ್ ಕುಮಾರ್ ಅವರ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜಕೀಯ ಚಿಂತಕರಾದ ಡಾಕ್ಟರ್ ದಾದಾಪೀರ ಎಬಿ ರಾಮಚಂದ್ರಪ್ಪ ನವಿಲೇ ಹಾಳ್ ಡಾಕ್ಟರ್ ನಾರಾಯಣ್ ಕಾರ್ಯಕ್ರಮ ಕುರಿತು ಮಾತನಾಡಿ ಈ ಸ್ವಾಭಿಮಾನಿ ಬಳಗ ರಾಜ್ಯದಂತ ಸಂಘಟನೆ ಮಾಡಿ ರಾಜ್ಯದ ಶೋಷಿತ ಹಿಂದುಳಿದ ದಿನ ದಲಿತರ ಅವಕಾಶ ವಂಚಿತರ ದುನಿಯಾಗಿ ನೀಲಲಿ ಎಂದು ಕರೆ ನೀಡಿದರು
ಸಮಾರಂಭದಲ್ಲಿ ಮೈಸೂರು ಜಿಲ್ಲಾ ಸ್ವಾಭಿಮಾನಿ ಬಳಗ ಮಂಡ್ಯ ದಾವಣಗೆರೆ ಚಾಮರಾಜನಗರ ಜಿಲ್ಲಾ ಸೇರದಂತೆ ಸೇರಿದಂತೆ ಮುಂತಾದ ಜಿಲ್ಲೆಗಳ ಸದಸ್ಯರು ಭಾಗವಹಿಸಿ ಬಳಗದ ರಾಜ್ಯಾಧ್ಯಕ್ಷ ವಿನಯ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು