ಸಮಾಜವನ್ನು ಜಾಗೃತಗೊಳಿಸುವ ಪ್ರಬಲ ಮಾಧ್ಯಮ ರಂಗಭೂಮಿ: ವಿ ಎನ್ ಮಲ್ಲಿಕಾರ್ಜುನ ಸ್ವಾಮಿ
ವಿಜಯ ದರ್ಪಣ ನ್ಯೂಸ್……
ಸಮಾಜವನ್ನು ಜಾಗೃತಗೊಳಿಸುವ ಪ್ರಬಲ ಮಾಧ್ಯಮ ರಂಗಭೂಮಿ: ವಿ ಎನ್ ಮಲ್ಲಿಕಾರ್ಜುನ ಸ್ವಾಮಿ

ಮೈಸೂರು: ರಂಗಭೂಮಿ ಕಲೆ ಮಾತ್ರವಲ್ಲದೇ, ಚಳವಳಿಯ ರೂಪದಲ್ಲಿ ಮನುಷ್ಯನನ್ನು ಸದಾ ಜಾಗೃತವನ್ನಾಗಿಸುವ, ಸಮಾಜದ ಓರೆ-ಕೋರೆಗೆಳನ್ನು ತಿದ್ದುವ ಪ್ರಬಲ ಮಾಧ್ಯಮ ವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.
ನಗರದ ಕಲಾಮಂದಿರದ ಕಿರುರಂಗಮಂದಿರದಲ್ಲಿ ನಾದರಂಗ ರಂಗಸಂಭ್ರಮ ನಾಟಕೋತ್ಸವ-2026 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ಜಗತ್ತಿನಾ ದ್ಯಂತ ಮರಣ ಮೃದಂಗ ದನಿ ಮೇಲೈಸುತ್ತಿವೆ. ಕೆಲವರಿಗೆ ಯುದ್ಧಗಳು ಉನ್ಮಾದವಾಗಿವೆ. ಆಮಾಯಕರು ಇದರಿಂದಾಗಿ ಸಿಕ್ಕ ಸಿಕ್ಕಲ್ಲಿ ಪ್ರಾಣ ತೆತ್ತುತ್ತಿದ್ದಾರೆ. ಈ ಅನಿಶ್ಚಿತತೆ ಯಲ್ಲಿ ತತ್ತರಿಸುತ್ತಿದ್ದು, ಇಂತಹ ಸಮಯದಲ್ಲಿ ರಂಗಭೂಮಿಯಿಂದ ಮಾತ್ರ ಸಮಾಜದಲ್ಲಿ ಏನನ್ನನಾದರೂ ಬದಲಾವಣೆ ತರಲು ಸಾಧ್ಯ ಎಂದರು.
ಸಮಾಜದ ಸರ್ವರ ಒಳಿತಿಗೆ, ಶಾಂತಿ, ನೆಮ್ಮದಿಯಿಂದ ಎಲ್ಲರನ್ನೂ ಮಾನವೀಯಗೊಳಿಸುವ ಕೆಲಸವನ್ನು ರಂಗಭೂಮಿಯ ಮೂಲಕ ಮಾಡಬೇಕಿದೆ. ನಾಟಕ, ರಂಗ ಚಟುವಟಿಕೆಗಳು ಅದಕ್ಕೆ ಮತ್ತಷ್ಟು ಶಕ್ತಿ ತುಂಬಬೇಕಿದೆ. ನಮ್ಮೊಳಗಿನ ಮೃಗತ್ವವನ್ನು ಹೋಗಲಾಡಿಸಿ, ಅಂತರಂಗದಲ್ಲಿ ಮಾನವೀಯ ಗುಣವನ್ನು ಜಾಗೃತಿಗೊಳಿಸಲಿ ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ರಾಜಶೇಖರ ಕದಂಬ, ರಂಗ ಸಮಾಜದ ಸದಸ್ಯ ಎಚ್. ಎಸ್ ಸುರೇಶ್ ಬಾಬು, ನಾದರಂಗ ಸಂಸ್ಥೆ ಸಂಸ್ಥಾಪಕ ನಾಗೇಂದ್ರ ಕುಮಾರ್ ಹಾಜರಿದ್ದರು.
ನಂತರ ರಂಗಾನಂದ ಕಲಾ ಸಂಘ ಮೈಸೂರು ರಂಗತಂಡದಿಂದ ರಾಜೇಂದ್ರ ಕಾರಂತ ವಿರಚಿತ ಮುದ್ದಣನ ಪ್ರಮೋಷನ್ ಪ್ರಸಂಗ ನಾಟಕ ಪ್ರದರ್ಶನ ಕಂಡಿತು ನಿರ್ದೆಶನ ರಂಗಸ್ವಾಮಿ, ಸಂಗೀತ ಪಾಟೀಲ್, ನಿರ್ವಹಣೆ ರಮೇಶ್ ಬಾಬು ಗುಬ್ಬಿ, ರಂಗಸಜ್ಜಿಕೆ ಸುದರ್ಶನ್, ಕಿರಣ್, ರಿದಂ ಪ್ಯಾಡ್ ಎಂ.ಸಿ. ಜಗದೀಶ್ ನಿರ್ವಹಿಸಿದರು.
