--Ads--

ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

On: July 30, 2025 5:02 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು

ಶಿಡ್ಲಘಟ್ಟ : ಅಪ್ರಾಪ್ತ ವಯಸ್ಸಿನಲ್ಲಿ ದ್ವಿಚಕ್ರ ವಾಹನ ಚಲಾಯಿಸಿ ಆಗುವ ಅನಾಹುತಗಳಿಗೆ ಪೋಷಕರೇ ಕಾರಣರಾಗಿ, ಜೀವನ ಪರ್ಯಂತ ಕೊರಗುವ ಪರಿಸ್ಥಿತಿ ಬರಬಹುದು ಇತ್ತೀಚೆಗೆ ನಡೆದ ರಸ್ತೆ ಅಪಘಾತಗಳಲ್ಲಿ ಅಪ್ರಾಪ್ತ ವಾಹನ ಚಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್‌ ತಿಳಿಸಿದರು.

ನಗರದಲ್ಲಿ ಅಪ್ರಾಪ್ತರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡು ಅವರು ಮಾತನಾಡಿದರು.

ಅಪ್ರಾಪ್ತರಿಗೆ ದ್ವಿಚಕ್ರ ವಾಹನ ನೀಡುವ, ಅಪಘಾತ
ಕೃತ್ಯಕ್ಕೆ ಕಾರಣರಾಗುವ ವಾಹನ ಮಾಲೀಕರ ಹಾಗು ಪಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ವಾಹನ ಕಾಯ್ದೆಯಂತೆ 18 ವರ್ಷ ವಯಸ್ಸಿನೊಳಗಿನವರು ವಾಹನ ಚಲಾಯಿಸುವುದು ಹಾಗೂ ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ ಸಂಚಾರಿ ನಿಯಮಗಳ ತಿಳುವಳಿಕೆ ಹಾಗೂ ಅಗತ್ಯ ಚಾಲನಾ ಪರವಾನಗಿ ಪಡೆಯದ ಹೊರತು ಅವರು ವಾಹನ ಚಲಾಯಿಸದಂತೆ ಪೋಷಕರು ಎಚ್ಚರಿಕೆವಹಿಸಬೇಕು ಎಂದರು.

ಅಪ್ರಾಪ್ತರು ಅಡ್ಡಾದಿಡ್ಡಿ ವಾಹನ ಚಲಾಯಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತವೆ ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಪಾಲಕರು ಯಾವುದೇ ಕಾರಣಕ್ಕೂ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನ, ಕಾರು ಚಲಾಯಿಸಲು ಬಿಡಬಾರದು,ನಿಯಮ ಉಲ್ಲಂಘಿಸಿ ಅಪ್ರಾಪ್ತರಿಗೆ ವಾಹನ ಕೊಟ್ಟರೆ ಪಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

20 ಕ್ಕೂ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದ ಪೊಲೀಸರು, ಬಳಿಕ ಅಪ್ರಾಪ್ತರ ಪಾಲಕರನ್ನು ಕರೆಸಿ ಕಾನೂನು ಪಾಠವನ್ನು ವಿವರಿಸಿಕೊಟ್ಟರು.

ಈ ಸಂದರ್ಭದಲ್ಲಿ ನಗರ ಠಾಣೆ ಪಿ.ಎಸ್.ಐ ವೇಣುಗೋಪಾಲ್, ಸಿಬ್ಬಂದಿ ನವೀನ್,ಚೀತಾ ರಾಜೇಶ್, ನಟೇಶ್‌,ಪ್ರೇಮ, ಮೇಘ ಮುಂತಾದವರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now