ಪ್ರವಾಸಿಗರನ್ನು ಕೈಬೀಸಿ ಕರೆಯುತಿವೆ ಕೊಡಗಿನ ಜಲಪಾತಗಳು
ಕೊಡಗು ಜಿಲ್ಲೆ , ಸೋಮವಾರಪೇಟೆ ಈಚೆಗೆ 10 ದಿನಗಳ ಕಾಲ ಬಿಡದಂತೆ ಸುರಿದ ಭಾರಿ ಮಳೆಯಿಂದ ಸೋಮವಾರಪೇಟೆ ತಾಲ್ಲೂಕಿನಾದ್ಯಂತ ಮಳೆಗಾಲದಲ್ಲಿ ಜೀವ ತಳೆಯುವ ಜಲಪಾತಗಳು ಮೈದುಂಬಿದ್ದು, ಪ್ರವಾಸಿಗರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿವೆ. ಬೆಟ್ಟ ಗುಡ್ಡಗಳು, ಕಾಫಿ ತೋಟಗಳಲ್ಲಿ ಅನೇಕ ಜಲಪಾತಗಳನ್ನು ಕಾಣಬಹುದು. ಮುಂಗಾರು ಪ್ರಾರಂಭವಾದೊಡನೆ ಸಾವಿರಾರು ಪ್ರವಾಸಿಗರು ಜಿಲ್ಲೆಯತ್ತ ಹಜ್ಜೆ ಇರಿಸುವುದು ಸಾಮಾನ್ಯ. ವಾರದ ಕೊನೆಯಲ್ಲಂತೂ ರಾಜ್ಯ ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಜಿಲ್ಲೆಗೆ ಆಗಮಿಸಿ ಮಳೆಯಲ್ಲಿ ಮಿಂದು ಜಲಪಾತಗಳ ಸೊಬಗನ್ನು ಸವಿದು ಹಿಂದಿರುಗುತ್ತಿದ್ದಾರೆ. ನಿಸರ್ಗ ರಮಣೀಯತೆಯನ್ನು ತನ್ನೊಡಲಲ್ಲಿ…