ಕೆಂಗಣ್ಣು (ಮದ್ರಾಸ್ ಐ)
ಕೆಂಗಣ್ಣು ====== ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾಣಿಸಿ ಕೊಳ್ಳುತ್ತಿದ್ದ ಕೆಂಪು ಕಣ್ಣು ಎಲ್ಲಾ ಕಡೆ ಈಗ ಮಳೆಗಾಲದಲ್ಲಿ ಶುರುವಾಗಿದ್ದು, ಮಳೆಯ ಬಗ್ಗೆ ಮಾತನಾಡುತ್ತಿರುವವರೆಲ್ಲ ಈ “ಮದ್ರಾಸ್ ಐ” ಬಗ್ಗೆ ಮಾತನಾಡ ತೊಡಗಿದ್ದಾರೆ. ಈಗ ಇದು ಸಾಧಾರಣವಾಗಿ ಮಕ್ಕಳಲ್ಲಿ ಹೆಚ್ಚು ಕಾಣಿಸಿ ಕೊಳ್ಳುತ್ತಿದೆ. ಇದು ವೈರಸ್ನಿಂದ ಬರುವ ರೋಗ. ಈ ವೈರಸ್ ಗಳು ಬಹಳ ಬೇಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದರಿಂದ ಶಾಲೆಗಳಲ್ಲಿ ಮತ್ತು ವಿದ್ಯಾರ್ಥಿಗಳು ಜೊತೆಯಾಗಿರುವ ಹಾಸ್ಟೆಲ್ಗಳಲ್ಲಿ ಬಹಳ ಬೇಗ ಹರಡಿ, ಜನರು ಚಿಂತೆಗೆ ಒಳಗಾಗುತ್ತಿದ್ದಾರೆ. ಕುಟುಂಬದಲ್ಲಿ ಒಬ್ಬರಿಗೆ ಬಂದರೆ,…