ಬ್ರಹ್ಮಾಂಡ ಗುರೂಜಿ – ಜನಪ್ರಿಯತೆ – ಟಿವಿ ಮಾಧ್ಯಮಗಳು – ಸತ್ಯ ಮಿಥ್ಯದ ಹುಡುಕಾಟ…….
ವಿಜಯ ದರ್ಪಣ ನ್ಯೂಸ್ ಬೆಂಗಳೂರು ಅಕ್ಟೋಬರ್ 13 “‘ಬ್ರಹ್ಮಾಂಡ ಗುರೂಜಿ ” ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮ ಎಂಬ ವ್ಯಕ್ತಿ ಮತ್ತು ಆ ರೀತಿಯ ಕೆಲವು ಜ್ಯೋತಿಷಿಗಳು ಬಹುತೇಕ ಅನೇಕ ಕನ್ನಡ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿ ಹಬ್ಬ, ಹುಣ್ಣಿಮೆ, ಅಮವಾಸ್ಯೆ, ಗ್ರಹಣ, ಪ್ರಾಕೃತಿಕ ವಿಕೋಪ, ಆಕಸ್ಮಿಕ ದುರಂತಗಳು, ಸಾಂಕ್ರಾಮಿಕ ರೋಗಗಳು, ರಾಜಕೀಯ ಪಲ್ಲಟಗಳು ಮುಂತಾದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದಕ್ಕೆ ಅವರಿಗಿರುವ ಅರ್ಹತೆ, ಜ್ಞಾನ, ಅಧ್ಯಯನ,…
