ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ ” ……ರೂಮಿ……

ವಿಜಯ ದರ್ಪಣ ನ್ಯೂಸ್…. ” ನೀವು ಎಲ್ಲಕ್ಕಿಂತ ಹೆಚ್ಚಾಗಿ ಹಣವನ್ನು ಬಯಸುವಿರಾದರೆ ಖರೀದಿಗೆ ಒಳಗಾಗುತ್ತೀರಿ ಮತ್ತು ನಿಮ್ಮ ಇಡೀ ಜೀವನವನ್ನು ಮಾರಿಕೊಳ್ಳುತ್ತೀರಿ ” ……ರೂಮಿ…… ರೂಮಿ ಹೇಳುವ ಹಾಗೆ ಇಂದಿನ ದಿನಮಾನಗಳಲ್ಲಿ ಧರ್ಮ, ದೇವರನ್ನು ಸಹ ಹಣಕ್ಕಾಗಿ ನಿರಂತರವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಭಾವಿಸಬಹುದೇ….. ನಿಲ್ಲಿ, ದೇವರುಗಳ ವ್ಯಾಪಾರೀಕರಣ ಪ್ರತ್ಯೇಕವಾಗಿ ಮತ್ತು ಪರೋಕ್ಷವಾಗಿ ವಿವಿಧ ರೀತಿಗಳಲ್ಲಿ ಮಾರಾಟ ಮಾಡುವುದು ಅಥವಾ ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಎಲ್ಲಾ ಧರ್ಮಗಳಲ್ಲೂ ಇದೆ……. ಜಗತ್ತಿನ ಕೆಲವೇ ಅದ್ಬುತ ಚಿಂತಕರಲ್ಲಿ ಒಬ್ಬರಾದ ರೂಮಿ…

Read More

ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ……..

ವಿಜಯ ದರ್ಪಣ ನ್ಯೂಸ್….. ಪ್ರೌಢಶಾಲೆಗಳಲ್ಲಿ ಲೈಂಗಿಕ ಶಿಕ್ಷಣ…….. ಕರ್ನಾಟಕದಲ್ಲಿ ಎಂಟರಿಂದ ಹನ್ನೆರಡನೆಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆಯೇ ? ಅದು ಅನಿವಾರ್ಯವೇ ? ಅಥವಾ ಅದನ್ನು ನಿರ್ಲಕ್ಷಿಸಬಹುದೇ ? ಸಂಪ್ರದಾಯವಾದಿಗಳಿಗೆ ಬೇಸರವಾಗಬಹುದೇ ?….. ಇತ್ತೀಚೆಗೆ ಮಾನವೀಯ ಮೌಲ್ಯಗಳ ನೈತಿಕ ಶಿಕ್ಷಣ ಮತ್ತು ಲೈಂಗಿಕ ಶಿಕ್ಷಣ ಪಠ್ಯದಲ್ಲಿ ಕಡ್ಡಾಯಗೊಳಿಸುವ ಬಗ್ಗೆ ಚರ್ಚೆ, ಸಂವಾದಗಳು, ಪ್ರಕ್ರಿಯೆಗಳು ಪ್ರಾರಂಭವಾಗಿದೆ. ಮಾನವೀಯ ಮೌಲ್ಯಗಳ ಕಡ್ಡಾಯಗೊಳಿಸುವ ಬಗ್ಗೆ ಯಾರಿಗೂ ತಕರಾರಿಲ್ಲ. ಆದರೆ ಕೆಲವು ಸಂಪ್ರದಾಯವಾದಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಒಂದಷ್ಟು…

Read More

ಛಾವಾ ( Chhaava ) ಸಿನಿಮಾ ಮತ್ತು ಔರಂಗಜೇಬ್ ಹಾಗೂ ಕೋಮುಗಲಭೆಗಳು…..

ವಿಜಯ ದರ್ಪಣ ನ್ಯೂಸ್….. ಛಾವಾ ( Chhaava ) ಸಿನಿಮಾ ಮತ್ತು ಔರಂಗಜೇಬ್ ಹಾಗೂ ಕೋಮುಗಲಭೆಗಳು….. ಇತಿಹಾಸವನ್ನು ಇತಿಹಾಸವಾಗಿ ನೋಡದೆ, ವರ್ತಮಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ವಿಮರ್ಶಗೊಳಪಡಿಸುತ್ತಾ, ಭವಿಷ್ಯವನ್ನು ಅದರ ಆಧಾರದ ಮೇಲೆ ಕಲ್ಪಿಸಿಕೊಳ್ಳುತ್ತಾ, ವಿಧ್ವಂಸಕ ಸಮಾಜವನ್ನು ನಿರ್ಮಿಸುವ ಮನಸ್ಥಿತಿಯೇ ಅತ್ಯಂತ ಮೂರ್ಖತನದ್ದು, ಧಾರುಣವಾದದ್ದು ಮತ್ತು ವಿಭಜಕ ಮನಸ್ಥಿತಿಯದು…. ಇತಿಹಾಸವನ್ನು ಇತಿಹಾಸವಾಗಿ ನೋಡುತ್ತಾ, ಅದರ ಅನುಭವದ ಆಧಾರದ ಮೇಲೆ, ಒಳ್ಳೆಯ ಅಂಶಗಳನ್ನು ಹೆಕ್ಕಿ ತೆಗೆದು, ಅದನ್ನು ವರ್ತಮಾನದಲ್ಲಿ ಅಳವಡಿಸಿಕೊಳ್ಳುತ್ತಾ, ಅದರ ನೆನಪುಗಳ ಮೇಲೆ ದೂರದೃಷ್ಟಿಯ ಉತ್ತಮ ಭವಿಷ್ಯವನ್ನು…

Read More

” ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ ” ಸ್ವಾಮಿ ವಿವೇಕಾನಂದ…….

ವಿಜಯ ದರ್ಪಣ ನ್ಯೂಸ್……. ” ಹೃದಯ ವಿಶಾಲವಾಗಿದ್ದರೆ ಮಾತ್ರ ಅಲ್ಲಿ ನಿಜವಾದ ಜ್ಞಾನ ಹೊಮ್ಮುತ್ತದೆ ” ಸ್ವಾಮಿ ವಿವೇಕಾನಂದ…….   ಜೊತೆಗೆ ಹೃದಯ ಅಥವಾ ಮನಸ್ಸು ಶುದ್ದವಾಗಿದ್ದರೆ ಜ್ಞಾನ ಅಲ್ಲಿ ಶಾಶ್ವತವಾಗಿ ನೆಲೆಸುತ್ತದೆ….. ಎಷ್ಟೊಂದು ಅರ್ಥಪೂರ್ಣ ಮತ್ತು ಅನುಭವದ ಮಾತು. ಇದು ಅಕ್ಷರಶಃ ಸತ್ಯವಾದ ಮಾತು…… ನೀವು ಯಾವುದೇ ಕ್ಷೇತ್ರದಲ್ಲಿರಲಿ, ಎಷ್ಟೇ ಪ್ರತಿಭಾವಂತರಾಗಿರಿ, ನಿಮ್ಮ ಹೃದಯ ವಿಶಾಲ ಮತ್ತು ಶುದ್ದವಾಗಿಲ್ಲದಿದ್ದರೆ ನೀವು ಎಷ್ಟೇ ಜನಪ್ರಿಯರಾಗಿರಿ, ಎಷ್ಟೇ ಶ್ರೀಮಂತರಾಗಿರಿ, ಎಷ್ಟೇ ದೊಡ್ಡ ಹುದ್ದೆಯಲ್ಲಿರಿ ನಿಮ್ಮ ಜ್ಞಾನ ಒಂದು ಮಿತಿಗೆ…

Read More

ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,…………..

ವಿಜಯ ದರ್ಪಣ ನ್ಯೂಸ್…. ಒಂದು ದೇಶದ ಅಭಿವೃದ್ಧಿಯೆಂಬ ವಜ್ರಖಚಿತ ಕಿರೀಟದ ಮುತ್ತುಗಳು,………….. ಆ ದೇಶ ಬಾಹ್ಯಾಕಾಶಕ್ಕೆ ಹಾರಿಸಿದ ಸ್ಯಾಟಲೈಟ್ ಗಳು ಮತ್ತು ಅದರ ಪರಿಣಾಮ, ಆ ದೇಶದಲ್ಲಿ ಇರುವ ಶ್ರೀಮಂತರ ಸಂಖ್ಯೆ, ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಹೊಂದಿರುವ ಸ್ಥಾನ, ಆ ದೇಶದಲ್ಲಿ ಇರಬಹುದಾದ ವಿಶ್ವ ಶ್ರೇಷ್ಠ ಭವ್ಯ ಕಟ್ಟಡಗಳು, ಆ ದೇಶ ವಿಶ್ವ ದರ್ಜೆಯ ಕ್ರೀಡಾಕೂಟದಲ್ಲಿ ಗಳಿಸುವ ಪದಕಗಳು, ಅದು ಹೊಂದಿರಬಹುದಾದ ವಿಮಾನ ನಿಲ್ದಾಣಗಳ ಸಂಖ್ಯೆ, ಆ ದೇಶದಲ್ಲಿ ಚಲಿಸುವ ಬುಲೆಟ್ ರೈಲುಗಳ ವೇಗ, ಅಲ್ಲಿ ಇರಬಹುದಾದ…

Read More

ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ…..

ವಿಜಯ ದರ್ಪಣ ನ್ಯೂಸ್….. ರಾಜಕೀಯ ಮತ್ತು ಆಡಳಿತದಲ್ಲಿ ವಕೀಲಿಕೆ ಎಂಬ ವಾದ ಪ್ರತಿವಾದಗಳ ಮಂಕುಬೂದಿ….. ವಿಧಾನ ಮಂಡಲ ಮತ್ತು ಸಂಸತ್ತಿನಲ್ಲಿ ಇವುಗಳದೇ ಪ್ರಾಬಲ್ಯ……… ವಕೀಲಿಕೆಯ ನೆರಳಲ್ಲಿ ಆರೋಪ ಪ್ರತ್ಯಾರೋಪಗಳಿಂದ ಪಲಾಯನ ಮಾಡುವ ಕುತಂತ್ರ ರಾಜಕಾರಣಕ್ಕೆ ನಾವುಗಳು ಮೂಕ ಪ್ರೇಕ್ಷಕರಾಗಿ ಸಾಕ್ಷಿಯಾಗುವ ದುರಂತ ವ್ಯವಸ್ಥೆಯಲ್ಲಿ ನಾವಿದ್ದೇವೆ. ವಕೀಲಿಕೆ ಎಂದರೆ, ತಾವು ಮಾಡುವ ಕೆಲಸಗಳನ್ನು ದಾಖಲೆಗಳ ಸಮೇತ ನಿರೂಪಿಸುವ ಅಥವಾ ಸಮರ್ಥಿಸಿಕೊಳ್ಳುವ ಒಂದು ವಿಧಾನ. ಸಾಮಾನ್ಯವಾಗಿ ಒಳ್ಳೆಯ ಕೆಲಸಗಳಲ್ಲಿ ವಕೀಲಿಕೆಯ ಅವಶ್ಯಕತೆ ಅಷ್ಟಾಗಿ ಬರುವುದಿಲ್ಲ. ಅದನ್ನು ನಿರೂಪಿಸುವುದು ಹೆಚ್ಚು ಕಷ್ಟವಲ್ಲ….

Read More

ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ……..

ವಿಜಯ ದರ್ಪಣ ನ್ಯೂಸ್…. ಹಾಲಿನಿಂದ ಆಲ್ಕೋಹಾಲಿನತ್ತಾ ಬದಲಾವಣೆ…….. ಕೃಷಿ ಭೂಮಿಯನ್ನೂ ಬಿಡದೆ 30/40 ಸೈಟ್ ಗಳಾಗಿ ಸ್ಕೇರ್ ಫೀಟ್ ಲೆಕ್ಕದಲ್ಲಿ ಹಂಚಿಕೊಂಡೆವು. ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಒಂದು ಚದರ ಅಡಿಗೆ ಮಾರುಕಟ್ಟೆ ದರದಲ್ಲಿ ಸುಮಾರು 75000 ರೂಪಾಯಿಗೂ ಹೆಚ್ಚು ಇದೆಯಂತೆ……. 500/510/520/530 ರೂಪಾಯಿಗಳ ದರದಲ್ಲಿ ಒಂದು ಗ್ರಾಂಗೆ ಒಂದು ವರ್ಷದ ಅವಧಿಯಲ್ಲಿ ಏರಿಕೆಯಾಗುತ್ತಿತ್ತು ಹಳದಿ ಲೋಹ ಚಿನ್ನ . ಆದರೆ ಈಗ ಕೆಲವೇ ವರ್ಷಗಳಲ್ಲಿ 8000 ರೂಪಾಯಿ ತಲುಪಿದೆ…….. ಸಣ್ಣ ಕಟ್ಟಡಗಳ, ವಿಶಾಲ ಮೈದಾನದಲ್ಲಿ ಹಸಿರು…

Read More

ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ……..

ವಿಜಯ ದರ್ಪಣ ನ್ಯೂಸ್…. ಕರ್ನಾಟಕದಲ್ಲಿ ಇಸ್ರೇಲ್ ಮಹಿಳೆಯ ಮೇಲಿನ ಅತ್ಯಾಚಾರ…….. ಸಾರ್ವಜನಿಕರೇ, ಇದು ನಿಮ್ಮ ಹೆಸರಿಗೂ ಕಳಂಕ ಎಂಬುದನ್ನು ಮರೆಯದಿರಿ…….. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಹತ್ತಿರದ ಪ್ಲೇ ಹೋಂ ಅಥವಾ ರೆಸಾರ್ಟ್ ನಲ್ಲಿ ಇಬ್ಬರು ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಒಬ್ಬ ವ್ಯಕ್ತಿಯ ಕೊಲೆಯಾಗಿದೆ. ಆ ಹೆಣ್ಣು ಮಕ್ಕಳಲ್ಲಿ ಒಬ್ಬರು ಇಸ್ರೇಲ್ ನಾಗರಿಕರು ಎಂಬುದು ಮತ್ತಷ್ಟು ಗಾಬರಿ ಹಾಗೂ ಆತಂಕಕಾರಿ ವಿಷಯ….. ನಿಜಕ್ಕೂ ಕರ್ನಾಟಕ ತಲೆತಗ್ಗಿಸುವಂತಹ ವಿಷಯವಿದು. ರನ್ಯಾ ಎಂಬ ಮಾಜಿ ಸಿನಿಮಾ ನಟಿಯ ಚಿನ್ನದ…

Read More

ಹೋಳಿ ಮತ್ತು ಮಾನವೀಯ ಮೌಲ್ಯ………

ವಿಜಯ ದರ್ಪಣ ನ್ಯೂಸ್…. ಹೋಳಿ ಮತ್ತು ಮಾನವೀಯ ಮೌಲ್ಯ……… ನಾಳೆ ನಾಡಿದ್ದು ಇಡೀ ರಾಷ್ಟ್ರಾದ್ಯಂತ ಅದರಲ್ಲೂ ಉತ್ತರ ಭಾರತದ ಕಡೆ ಹೋಳಿ ಹಬ್ಬದ ಸಂಭ್ರಮವೋ ಸಂಭ್ರಮ. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳ ಬಣ್ಣ ಬಣ್ಣದ ಓಕುಳಿಯಾಟ ನೋಡಲು ಚಂದ….. ಇಂತಹ ಹೋಳಿ ಹಬ್ಬದ ಸಂದರ್ಭದಲ್ಲಿ ಆ ಬಣ್ಣಗಳ ಚೆಲುವಿನ ಚಿತ್ತಾರದ ನಡುವೆ ಮನುಷ್ಯ ಸಂಬಂಧಗಳ ಬೆಸೆಯುವಿಕೆಯ ಹುಡುಕಾಟ ಸಹ ಬಹಳ ಮುಖ್ಯ. ಆ ನಿಟ್ಟಿನಲ್ಲಿ ಯೋಚಿಸುತ್ತಾ…… ಪ್ರೀತಿಯೆಂಬ ಬಣ್ಣ ತುಂಬಿ ಪ್ರೇಮವೆಂಬ ರಂಗು ಮೂಡಲಿ. ಕರುಣೆಯೆಂಬ ಬಣ್ಣ ತುಂಬಿ…

Read More

ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ…….

ವಿಜಯ ದರ್ಪಣ ನ್ಯೂಸ್….. ಯಾರು ಶ್ರೇಷ್ಠ ? ಯಾವ ವೃತ್ತಿ ಶ್ರೇಷ್ಠ…………. ದೇಶ ಕಾಯುವ ಸೈನಿಕ ದೇವರೇ ? ದೇಹ ಕಾಯುವ ವೈದ್ಯ ದೇವರೇ ? ಅನ್ನ ಬೆಳೆಯುವ ರೈತ ದೇವರೇ ? ವಿದ್ಯೆ ನೀಡುವ ಶಿಕ್ಷಕ ದೇವರೇ ? ಹುಟ್ಟಿಸುವ ತಂದೆ ದೇವರೇ ? ಜನ್ಮ ನೀಡುವ ತಾಯಿ ದೇವರೇ ? ಊಟ ಬಡಿಸುವ ಭಟ್ಟ ದೇವರೇ ? ಅವಶ್ಯ ಇರುವ ಸ್ಥಳಕ್ಕೆ ತಲುಪಿಸುವ ಚಾಲಕ ದೇವರೇ ? ವಕೀಲ ದೇವರೇ ? ಪೋಲೀಸ್ ದೇವರೇ…

Read More