ಚರ ಜಂಗಮವಾಗಿ….
ವಿಜಯ ದರ್ಪಣ ನ್ಯೂಸ್…. ಚರ ಜಂಗಮವಾಗಿ…. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಯಾತ್ರೆ ಹೊರಟಿತು……. ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು ನೀಲಾಕಾಶ , ಕೆಳಗೆ ನೋಡು ಭೂಲೋಕ, ಕಣ್ಣಿನ ನೋಟಕ್ಕೂ ಸಿಗದಷ್ಟು ನೀರು, ಕಣ್ಣಂಚಿನಲ್ಲಿ ಕಾಣುವಷ್ಟು ಕಾಡು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳು, ಎಲ್ಲೆಲ್ಲೂ ನರಮಾನವರು, ಒಂದು ಕಡೆ ಹಚ್ಚ ಹಸಿರು, ಇನ್ನೊಂದು…