ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು
ವಿಜಯ ದರ್ಪಣ ನ್ಯೂಸ್…. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು ನೆನಪುಗಳ ಓಣಿಯಲ್ಲಿ ಓಡಾಡುತಿರುವೆ. ನೆನಪುಗಳ ಮಳಿಗೆಯಲಿ ಇನ್ನಾರಿಲ್ಲ ನಿನ್ನ ಹೊರತು. ನೀನಿಲ್ಲದೇ ನೆನಪಿನ ಆ ಓಣಿ ಕಳೆಗಟ್ಟುವುದಾದರೂ ಹೇಗೆ? ನಿನ್ನೊಂದಿಗಿದ್ದ ದಿನಗಳೇ ಅಪ್ಪಟ ಸ್ವರ್ಗದ ದಿನಗಳು. ಸ್ವರ್ಗವೊಂದು ಏನಾದರೂ ಭೂಮಿಯ ಮೇಲಿದ್ದರೆ ಅದು ನಿನ್ನೊಂದಿಗಿದ್ದಾಗ ಮಾತ್ರ ಗೋಚರಿಸುತ್ತದೆ. ಸ್ವರ್ಗ ಬೇರಲ್ಲ ನೀನು ಬೇರಲ್ಲ ಅಂತ ಎಷ್ಟೊಂದು ಸಲ ನನಗೆ ಅನಿಸಿದ್ದು ಸುಳ್ಳಲ್ಲ ಸುಮತಿ. ಪ್ರಾಣ ಸ್ನೇಹಿತೆಯಾದ ನಿನ್ನ ಬಗೆಗಿನ ವಿಚಾರಗಳೆಲ್ಲ ಗಾಣದಂತೆ ಸದಾ ಸುತ್ತುತ್ತಲೇ ಇರುತ್ತವೆ….