ಕಸ ಸುರಿಯಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಗೋಡೆಗಳ ಮೇಲೆ ಕಲಾ ಚಿತ್ರಗಳನ್ನು ಬರೆಯಲಾಗಿದೆ : ಪೌರಾಯುಕ್ತೆ ಜೆ ಅಮೃತ ಗೌಡ
ವಿಜಯ ದರ್ಪಣ ನ್ಯೂಸ್……
ಕಸ ಸುರಿಯಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಗೋಡೆಗಳ ಮೇಲೆ ಕಲಾ ಚಿತ್ರಗಳನ್ನು ಬರೆಯಲಾಗಿದೆ : ಪೌರಾಯುಕ್ತೆ ಜೆ ಅಮೃತ ಗೌಡ

ಶಿಡ್ಲಘಟ್ಟ : ನಗರದ ಕೆಲ ಭಾಗಗಳಲ್ಲಿ ನಿರಂತರವಾಗಿ ಸಾರ್ವಜನಿಕರು ಕಸ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಇಲ್ಲಿ ಯಾರೂ ಕಸ ಹಾಕಬಾರದು ಎಂಬ ಸಂದೇಶ ನೀಡುವ ಉದ್ದೇಶದಿಂದ ಗೋಡೆಗಳ ಮೇಲೆ ಅರ್ಥಪೂರ್ಣ ಕಲಾ ಚಿತ್ರಗಳು ಹಾಗೂ ಜಾಗೃತಿ ಸಂದೇಶಗಳನ್ನು ಬರೆಯಲಾಗಿದೆ ಎಂದು ಪೌರಾಯುಕ್ತೆ ಜಿ.ಅಮೃತಾ ಗೌಡ ತಿಳಿಸಿದರು.
ನಗರದಲ್ಲಿ ಸೌಂದರ್ಯ ಕಾಪಾಡುವ ಜತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ನಗರಸಭೆ ವತಿಯಿಂದ ವಿಶೇಷ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸ್ವಚ್ಛ ನಗರ ನಿರ್ಮಾಣವು ಕೇವಲ ನಗರಸಭೆಯ ಹೊಣೆಗಾರಿಕೆಯಲ್ಲ ಇದಕ್ಕೆ ಪ್ರತಿಯೊಬ್ಬ ನಾಗರಿಕನ ಸಹಕಾರ ಅತ್ಯವಶ್ಯಕ,ಸಾರ್ವಜನಿಕರು ಕಸವನ್ನು ಕಡ್ಡಾಯವಾಗಿ ನಿಗದಿತ ಸ್ಥಳಗಳಲ್ಲಿಯೇ ಹಾಕಬೇಕು ಎಲ್ಲೆಂದರಲ್ಲಿ ಕಸ ಸುರಿಯುವ ಅನಧಿಕೃತ ಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು, ನಾಗರಿಕರ ಜಾಗೃತಿಯಿಂದಲೇ ಸ್ವಚ್ಛ ಹಾಗೂ ಸುಂದರ ನಗರವನ್ನು ರೂಪಿಸಲು ಸಾಧ್ಯ ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಂಗವಾಗಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ಕಸ ವಿಂಗಡಣೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯದಿರುವ ಜವಾಬ್ದಾರಿ ಸೇರಿದಂತೆ ಸ್ವಚ್ಛತೆ ಕುರಿತ ಸಂದೇಶಗಳನ್ನು ಚಿತ್ರಗಳ ಮೂಲಕ ಆಕರ್ಷಕವಾಗಿ ಬಿಂಬಿಸಲಾಗಿದೆ,ಇದರಿಂದ ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ನಗರದ ಸೌಂದರ್ಯವೂ ಹೆಚ್ಚಾಗಲಿದೆ ಎಂದರು.
ಈ ವೇಳೆ ಭುವನ್, ನಾಗರಾಜ್,ಆತಿಕ್, ನರೇಶ್,ಗಿರಿ, ರವಿ,ಮುಬಾರಕ್, ಕಾಜಲ್, ಜ್ಯೋತಿ ಅಮೃತ,ಅನಿತಾ,ಅಂಕಿತಾ, ಅನಿಲಮ್ಮ ಹಾಗು ನಗರಸಭೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
