--Ads--

ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಹರಿದು ಬಂದು ಭಕ್ತ ಸಾಗರ : ಭಕ್ತಾದಿಗಳಿಗೆ 24 ಗಂಟೆ ಪ್ರಸಾದ

On: February 16, 2026 4:36 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

 ದಕ್ಷಿಣ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯಕ್ಕೆ ಹರಿದು ಬಂದು ಭಕ್ತ ಸಾಗರ : ಭಕ್ತಾದಿಗಳಿಗೆ 24 ಗಂಟೆ ಪ್ರಸಾದ

ತಾಂಡವಪುರ ಫೆಬ್ರುವರಿ 16 ಮೈಸೂರು ಜಿಲ್ಲೆ ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನೆರವೇರಿದವು ನಾನಾ ಜಿಲ್ಲೆಗಳಿಂದ ಆಗಮಿಸಿದ ಭಕ್ತಾದಿಗಳು ದೇವಾಲಯದ ಮುಂದೆ ರಾತ್ರಿ ಇಡಿ ಶಿವಧಾನ್ಯ ಮಾಡುವ ಮೂಲಕ ಶಿವರಾತ್ರಿ ಆಚರಿಸಿದರು.

ಬೆಳಗ್ಗೆಯಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಶಿವ ಪಾರ್ವತಿ ದರ್ಶನ ಪಡೆದು ಬಿಲ್ಪತ್ರೆ ಸೇವೆಮಾಡಿ ಶಿವರಾತ್ರಿ ಆಚರಿಸಿದರು.

ಮಹಾ ಶಿವರಾತ್ರಿ ಅಂಗವಾಗಿ ಬೆಳಗಿನಜಾವ ದಿಂದಲೇ ದೇವಾಲಯದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳು ಆರಂಭಗೊಂಡಿದ್ದವು ಶ್ರೀಕಂಠೇಶ್ವರ ಸ್ವಾಮಿಗೆ ಹಾಲಿನ ಅಭಿಷೇಕ ಪುಷ್ಪ ಅಭಿಷೇಕ ಬಿಲ್ಪತ್ರೆ ಅಭಿಷೇಕ ಮಾಡಿ ವಸ್ತ್ರಗಳನ್ನು ಧರಿಸಿ ಮಹಾ ಮಂಗಳಾರತಿ ನೆರವೇರಿಸಿ ದೇವರ ದರ್ಶನ ಮಾಡಲು ಭಕ್ತರಿಗೆ ಅನುವು ಮಾಡಿಕೊಟ್ಟರು
ಶ್ರೀಕಂಠೇಶ್ವರ ಸ್ವಾಮಿಗೆ 11 ಬಾರಿ ರುದ್ರ ಪಾರಾಯಣ ಹಾಗೂ ಬೆಳಗಿನ ಅಭಿಷೇಕಗಳು ನಡೆದವು.

ಮಹಾ ಶಿವರಾತ್ರಿಯ ಪ್ರಯುಕ್ತ ದೇವಾಲಯ ಮುಂಭಾಗ ರಾತ್ರಿಯಿಡಿ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಸಲಾಯಿತು . ಭರತನಾಟ್ಯ ಭಕ್ತಿಗೀತೆ ಗಾಯನ ಹಾಗೂ ಹರಿಕಥೆ ಕೇಳುವ ಮೂಲಕ ಭಕ್ತಾದಿಗಳು ಶಿವರಾತ್ರಿ ಆಚರಣೆ ಮಾಡಿದರು
ಭಕ್ತಾದಿಗಳಿಗೆ ಬೆಳಗಿನ ಉಪಹಾರ ವಿತರಣೆಗೆ ಶಾಸಕ ದರ್ಶನ್ ದ್ರುವ ನಾರಾಯಣ್ ಚಾಲನೆ ನೀಡಿದರು.

ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಶಾಸಕ ದರ್ಶನ್ ದ್ರುವ ನಾರಾಯಣ ಅವರು ಭಕ್ತರಿಗೆ ಬೆಳಗಿನ ತಿಂಡಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಮುಂದುವರೆದು ಮಾತನಾಡಿ ದಾಸೋ ಭವನದಲ್ಲಿ ಮಧ್ಯಾಹ್ನದ ಊಟವನ್ನು ಮಾತ್ರ ನೀಡಲಾಗುತ್ತಿತ್ತು ಇದರಿಂದ ದೇವಾಲಯಕ್ಕೆ ಬರುವ ಭಕ್ತರು ಬೆಳಗಿನ ತಿಂಡಿಗೆ ಪರದಾಡುತ್ತಿದ್ದರು ಹೀಗಾಗಿ ಭಕ್ತರಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಊಟದ ಜೊತೆಗೆ ವಿಶೇಷ ದಿನಗಳಂದು ರಾತ್ರಿ ಊಟವನ್ನು ಪ್ರಸಾದ ರೂಪದಲ್ಲಿ ನೀಡಲು ತೀರ್ಮಾನಿಸಲಾಗಿದೆ.

ಇನ್ನು ಮುಂದೆ 24 ಗಂಟೆಗಳು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ರವರು ಸುದ್ದಿಗಾರರಿಗೆ ತಿಳಿಸಿದರು. ಶಾಸಕರು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು

ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ದೇವಾಲಯದ ವ್ಯವಸ್ಥಾಪನೆ ಸಮಿತಿಯ ಮಾಜಿ ಅಧ್ಯಕ್ಷ ಹೆಜ್ಜಿಗೆ ಇಂದನ್ ಬಾಬು ಧರ್ಮದರ್ಶಿಗಳಾದ ಗೋವಿಂದರಾಜು ಗೋಪಾಲಕೃಷ್ಣ ಕೃಷ್ಣ ಬಸವಗೌಡ ಮಾಜಿ ನಗರಸಭೆ ಅಧ್ಯಕ್ಷ ಶ್ರೀಕಂಠ ಸ್ವಾಮಿ ಮಾಜಿ ನಗರಸಭೆ ಸದಸ್ಯರುಗಳಾದ ಮಹೇಶ ಗಂಗಾಧರ ಗಾಯಿತ್ರಿ ಸಿದ್ದಿಕ್ಕಿ ಶ್ರೀಧರ್ ಸೇರಿದಂತೆ ಮುಂತಾದವರು ಈ ದೇವತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಾರ್ಯಕ್ರಮಗಳಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಚಾಲನೆ

ಪತ್ರಕರ್ತ ತಾಂಡವಪುರ ಟಿಕೆ ಬಸವರಾಜು ಅವರಿಗೆ 2025 ನೇ ಸಾಲಿನ ಸುತ್ತೂರು ಮಠದ ಶ್ರೀ ಶಿವರಾತ್ರಿಶ್ವರ ಮಾಧ್ಯಮ ಪ್ರಶಸ್ತಿ ಪ್ರಧಾನ

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರಿಂದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ

ಗಾಂಧಿ ಸ್ಪರ್ಶಿಸಿದ ನೆಲವನ್ನು ಸಂರಕ್ಷಿಸಿ, ಪ್ರವಾಸೋದ್ಯಮವನ್ನಾಗಿ ಮಾಡಲಾಗುವುದು: ಶಾಸಕ ದರ್ಶನ್ ದೃವನಾರಾಯಣ್

ಶಾಸಕ ದರ್ಶನ್ ಧ್ರುವನಾರಾಯಣ್ ಅವರಿಂದ ಮಹಾತ್ಮ ಗಾಂಧೀಜಿ ಜಯಂತಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ, ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ

ಅಕ್ಟೋಬರ್ ಒಳಗೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದಾಗಿ ಶಾಸಕ ದರ್ಶನ್ ಧ್ರುವ ನಾರಾಯಣ್ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಭರವಸೆ